ಬಾಲ್ಯವೇ ನೆರಳಾಗಿ ರಮಿಸುವುದು ಮುಂದೆ!
ನಾನೊಂದು ದೃಶ್ಯ ನೋಡಿದ್ದೆ!ಪುಟ್ಟ ಮಗುವನ್ನು ತಾಯಿಯೊಬ್ಬಳು ಯಾರದೋ ಚಾಡಿ ಮಾತು ಕೇಳಿ ಮನಬಂದಂತೆ ಥಳಿಸುತ್ತಿದ್ದಾಳೆ.ಆ ಮಗು ಅಳುತ್ತಲೇ ಅಮ್ಮನನ್ನು ಮತ್ತಷ್ಟು ಬಿಗಿಯಾಗಿ ಹಿಡಿದಪ್ಪಿಕಣ್ಣೀರು ಸುರಿಸುತ್ತಾ ಆರ್ತವಾಗಿತಲೆ ಮೇಲೆತ್ತಿ ಅಮ್ಮನ ಮುಖವನ್ನೇ ನೋಡುತ್ತಿದೆ.ಮೈಮೇಲೆಲ್ಲ ಬಾಸುಂಡೆ.ಮುಖವೆಲ್ಲ ಧೂಳು ತುಂಬಿ ಮಾಸಲಾಗಿದೆ.ತಪ್ಪಿಸಿಕೊಂಡು ದೂರವಾದರೂ ಓಡಬೇಡವೆ ಅದು…