ಭಾರತ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲೊಂದು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು, ಅವರಿಗೆ ತಮ್ಮ ಮೆಚ್ಚಿನ ನಾಯಕನನ್ನು ಅಧಿಕಾರಕ್ಕೇರಿಸುವ, ನಾಯಕ ಸ್ಥಾನದಲ್ಲಿದ್ದು ನಾಲಾಯಕ ನಾದವನನ್ನು ಅಧಿಕಾರದಿಂದ ಕೆಳಗಿಳಿಸುವ ತಾಕತ್ತು ಇದೆ. ಆದರೆ ಈ ತಾಕತ್ತು ಪ್ರದರ್ಶನ 5 ವರ್ಷಗಳಿಗೊಮ್ಮೆ ಆಗುತ್ತದೆ ಹಾಗೂ ಕೆಲವು ಸಂದರ್ಭಗಳಲ್ಲಿ 5ಕ್ಕಿಂತ ಮೊದಲು ಸಹ ಈ ತಾಕತ್ತು ಪ್ರದರ್ಶನವಾಗುತ್ತದೆ.

ನಾಯಕರನ್ನು ಅಧಿಕಾರಕ್ಕೇರಿಸುವ ಸಾಂವಿಧಾನಿಕವಾದ ಪ್ರಕ್ರಿಯೆಯೇ ಚುನಾವಣೆ. ಸಾಮಾನ್ಯವಾಗಿ 5 ವರ್ಷಗಳಿಗೊಮ್ಮೆ ನಡೆಯುತದೆ. ಪ್ರತಿಯೊಂದು ವರ್ಷವೂ ಚುನಾವಣೆ ಬೇಕು ಎಂಬ ಯೋಚನೆ ಶುರುವಾಗಿದ್ದು ಇತ್ತೀಚಿನ ಕೆಲ ತಿಂಗಳುಗಳಿಂದ,ಅದಕ್ಕೆ ಕಾರಣವೂ ಇದೆ. ಪ್ರಮುಖ ಕಾರಣವೇ ಚುನಾವಣೆ ಬರುವ ಸಂದರ್ಭದಲ್ಲಿ ಅಭಿವೃದ್ಧಿ ಎಂದರೇನು ಎಂದರೆ ಗೊತ್ತೇ ಇಲ್ಲದ ಪ್ರದೇಶಗಳು ದಿಡೀರನೆ ಅಭಿವೃದ್ಧಿ ಹೊಂದುವುದು. ಇದು ಸುಮ್ಮನೆ ಅಲ್ಲ ಬದಲಾಗಿ ಜನರನ್ನು ಆಕರ್ಷಸುವ ಸುಲಭ ವಿಧಾನವಾಗಿದೆ.

ಪ್ರತಿ ವರ್ಷವೂ ಚುನಾವಣೆ ಇರಬೇಕೆನ್ನುವ ಆಲೋಚನೆಗೆ ಇನ್ನೂ ಅನೇಕ ಕಾರಣಗಳಿದ್ದು ಅವು ಹೀಗಿವೆ.
1)ಉಳಿದ ಸಮಯದಲ್ಲಿ ತಮ್ಮ ಮತದಾರರ ಬಗ್ಗೆ ಕಿಂಚಿತ್ತೂ ಯೋಚಿಸದ ಜನಪ್ರತಿನಿದಿನಗಳೆನಿಸಿಕೊಂಡವರು, ಚುನಾವಣೆ ಸಮೀಪಿಸುತ್ತಿದ್ದಂತೆ “ಆ ಜನರ ಉದ್ದಾರಕ್ಕಾಗಿ ಧರೆಗವತರಿಸಿದ ದೇವರಂತೆ” ತಮ್ಮನ್ನು ತಾವೇ ಬಿಂಬಿಸಿಕೊಳ್ಳುತ್ತಾರೆ.

2)ಚುನಾವಣ ಸಮಯಕ್ಕೂ ಮೊದಲು ತಮ್ಮ ಪಕ್ಷ, ಧರ್ಮ, ಜಾತಿ, ಸಿದ್ದಂತಾ ಎಂದೆಲ್ಲಾ ವೇದಿಕೆಗಳಲ್ಲಿ ಗಂಟೆಗಟ್ಟಲೆ ಭಾಷಣ ಬಿಗಿಯುವ ನಾಯಕರೆನಿಸಿಕೊಂಡವರು, ಚುನಾವಣಾ ಸಮಯದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಮೆರೆಯುತ್ತಾರೆ.

3) ಆವರೆಗೂ ಟಾರು ಕಾಣದೆ ಗುಂಡಿಬಿದ್ದ ರಸ್ತೆಗಳೂ, ಚುನಾವಣಾ ಸಮಯದಲ್ಲಿ ಹೆದ್ದಾರಿಗಳ ಮಾದರಿಯಲ್ಲಿ ದುರಸ್ತಿಗೊಳ್ಳುತವೆ.

4) ಆವರೆಗೂ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಕೇವಲ ಜನರ ಆಕರ್ಷಣೆಗಾಗಿ ಹಾಗೂ ಪುನಃ ಅಧಿಕಾರ ಪಡೆಯುವ ಉದ್ದೇಶದಿಂದ ತಮ್ಮ ಪಕ್ಷದ ಪ್ರಭಾವಿ ನಾಯಕರನ್ನು ಸಮಾವೇಶದ ನೆಪದಲ್ಲಿ ಕರೆಸುತ್ತಾರೆ. ಆ ಮೂಲಕ ಆ ಪ್ರಭಾವಿ ವ್ಯಕ್ತಿಗಳು ವೀಕ್ಷಿಸುವ, ಓಡಾಡುವ ಪ್ರದೇಶಗಳು ಸರ್ವತೋಮುಖ ಅಭಿವೃದ್ಧಿ ಕಾಣುತ್ತವೆ.

5) ಉಳಿದ ದಿನಗಳಲ್ಲಿ ಗಂಟೆಗಟ್ಟಲೆ ಕಾದರು ಸಹ ಸಮರ್ಪಕವಾಗಿ ನಡೆಯದ ಕೆಲವೊಂದಿಷ್ಟು ಸರ್ಕಾರಿ ಸೇವೆಗಳು ಚುನಾವಣಾ ಸಮಯದಲ್ಲಿ ಗಂಟೆಗಳ ಅಂತರದಲ್ಲಿ ಯಶಶ್ವಿಯಾಗಿ ನಡೆಯುತದೆ.

ಹೀಗೆ ಕಾರಣಗಳನ್ನು ಪಟ್ಟಿ ಮಾಡುತ್ತಾ ಹೋದರೆ ಪಟ್ಟಿ ದೊಡ್ಡದಾಗುತ್ತಲೇ ಹೋಗುತ್ತದೆ. ಪ್ರತಿ ವರ್ಷ ಚುನಾವಣೆ ನಡೆದರೆ ಸಾಕಷ್ಟು ಉಪಯೋಗ ದೇಶವಾಸಿಗಳಿಗೆ ಸಿಗುವುದರಲ್ಲಿ ಎರಡು ಮಾತಿಲ್ಲ.ಆದರೆ ಅದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲಾ ಎಂದು ತೋರುತ್ತದೆ ಒಟ್ಟಿನಲ್ಲಿ ಪ್ರತಿ ವರ್ಷ ವೂ ಚುನಾವಣೆ ನಡೆದರೆ ದೇಶದ ಸಮಗ್ರ ಅಭಿವೃದ್ಧಿ ತೀವ್ರಗತಿಯಲ್ಲಿ ನಡೆಯುತ್ತದೆ ಎಂಬುದು ನನ್ನ ಅನಿಸಿಕೆ….

ಸೂಚನೆ :ಯಾವುದೇ ಪಕ್ಷವನ್ನು, ವ್ಯಕ್ತಿಗಳನ್ನು ಗುರಿಯಾಗಿಸಿ ಬರೆದ ಬರಹವಲ್ಲ…

✍🏻 ಪ್ರತೀಕ್ ಪರಿವಾರ ಮರಗೋಡು
ವಿದ್ಯಾರ್ಥಿ ಮತ್ತು ಹವ್ಯಾಸಿ ಬರಹಗಾರ