ಪಿಕ್ ಆಪ್ ವಾಹನ ಮತ್ತು ಮಹೇಂದ್ರ ಕಾರು ನಡುವೆ ಡಿಕ್ಕಿ ಸಂಭವಿಸಿ ಚಾಲಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನೆನ್ನೆ ರಾತ್ರಿ ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆಯಲ್ಲಿ ನಡೆದಿದೆ.

ಸುಂಟಿಕೊಪ್ಪ ಕಡೆಯಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಅಶೋಕ್ ಲೈಲ್ಯಾಂಡ್ ಪಿಕ್ ಅಪ್ ವಾಹನ ಮತ್ತು ಬೆಂಗಳೂರಿನಿಂದ ಮಡಿಕೇರಿಗೆ ಬರುತ್ತಿದ್ದ ಮಹೇಂದ್ರ ಕಾರಿನ ನಡುವೆ ಅವಘಡ ಸಂಭವಿಸಿದೆ. ಇದರಿಂದ ಕಾರಿನ ಚಾಲಕ ಸ್ಟೇರಿಂಗ್ ನಡುವೆ ಅರ್ಧ ಗಂಟೆ ಸಿಕ್ಕಿಕೊಂಡು ಗಂಭೀರವಾಗಿ ಗಾಯಗೊಂಡಿದ್ದ.

ನೆರವಿಗೆ ಧಾವಿಸಿ ಬಂದ ಸ್ಥಳೀಯರು ಇನ್ನೊಂದು ಲಾರಿಯಿಂದ ಕಾರಿನ ಮುಂಭಾಗಕ್ಕೆ ಹಗ್ಗ ಕಟ್ಟಿ ಎಳೆದು, ಚಾಲಕನನ್ನು ಹೊರಕ್ಕೆ ತಂದು ಆಸ್ಪತ್ರೆಗೆ ಸಾಗಿಸಲಾಗಿದೆ.