ಆರೋಗ್ಯಕರ ಕೋಶಗಳನ್ನು ನಿರ್ಮಿಸಲು ನಿಮ್ಮ ದೇಹಕ್ಕೆ ಕೊಲೆಸ್ಟ್ರಾಲ್ ಅಗತ್ಯವಿದೆ, ಆದರೆ ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ನಿಮ್ಮ ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಕೊಲೆಸ್ಟ್ರಾಲ್ನೊಂದಿಗೆ, ನಿಮ್ಮ ರಕ್ತನಾಳಗಳಲ್ಲಿ ಕೊಬ್ಬಿನ ನಿಕ್ಷೇಪಗಳನ್ನು ನೀವು ಅಭಿವೃದ್ಧಿಪಡಿಸಬಹುದು. ಅಂತಿಮವಾಗಿ, ಈ ನಿಕ್ಷೇಪಗಳು ಬೆಳೆಯುತ್ತವೆ, ನಿಮ್ಮ ಅಪಧಮನಿಗಳ ಮೂಲಕ ಸಾಕಷ್ಟು ರಕ್ತ ಹರಿಯಲು ಕಷ್ಟವಾಗುತ್ತದೆ. ಕೊಲೆಸ್ಟ್ರಾಲ್ ಆರೋಗ್ಯದ ಹದಗೆಡುವಂತೆ ಮಾಡಿ, ಅಯೋಮಯವಾಗಿಸುತ್ತದೆ. ಆದ್ದರಿಂದ ಆರೋಗ್ಯದ ಕಡೆ ಹೆಚ್ಚಿನ ಗಮನವಿರಲಿ…
ಕೇವಲ ಮೂರು ನಿಮಿಷದ ಓದು…ತಪ್ಪದೆ ಓದಿ!
ಈಗಂತೂ ಯಾರನ್ನು ಕೇಳಿದರೂ ನನಗೆ ಕೊಲೆಸ್ಟ್ರಾಲ್ ಇದೆ, ಅದಕ್ಕೆ ಔಷಧಿಯನ್ನು ತೆಗೆದು ಕೊಳ್ಳುತ್ತಿದ್ದೇನೆ ಎನ್ನುವವರ ಸಂಖ್ಯೆ ಬಹಳ ಹೆಚ್ಚಿದೆ. ತಾವೇ ಲ್ಯಾಬ್ ಗಳಿಗೆ ಹೋಗಿ ಯವಾಗಂದರೆ ಆವಾಗ, ಸಮಯವೇ ಇಲ್ಲದೆ ಈ ಪರೀಕ್ಷೆಯನ್ನು ಮಾಡಿಸಿ ಕೊಂಡು ಅದರಲ್ಲಿ ಕಾಣುವ ಅಂಶವನ್ನು ನೋಡಿ ಗಾಬರಿಯಾಗಿ ತಿಂಗಳುಗಟ್ಟಲೆ ಔಷಧಿ ತೆಗೆದು ಕೊಳ್ಳುವವರ ಸಂಖ್ಯೆ ಬಹಳಷ್ಟು ಇದೆ.
ಕೊಲೆಸ್ಟ್ರಾಲ್ ಎಂಬುದು ಸಸ್ತನಿ ಜಾತಿಯ ಪ್ರಾಣಿಗಳಲ್ಲಿ ಅತ್ಯವಶ್ಯಕವಾಗಿ ಬೇಕಾಗುವ ದೈಹಿಕ ರಚನಾತ್ಮಕ ಅಂಶ. ಇದು ಶರೀರದಲ್ಲಿ ಪಿತ್ತರಸ ಆಮ್ಲ, ಸ್ಟೆರಾಯ್ಡ್ ಹಾರ್ಮೋನ್ ಮತ್ತು ಹಲವು ಕೊಬ್ಬಿನಲ್ಲಿ ಕರಗುವ ವಿಟಾಮಿನ್ ತಯಾರಿಕೆಯಲ್ಲಿ ಪ್ರಮುಖ ಅಂಶವಾಗಿ ಬಳಸಲ್ಪಡುತ್ತದೆ. ಕೊಲೆಸ್ಟರಾಲ್ ಪ್ರಾಣಿಗಳ ದೇಹದಲ್ಲಿ ಸಂಯೋಜಿಸಲ್ಪಡುವ ಪ್ರಮುಖ ಸ್ಟೆರಾಲ್ ಆಗಿದೆ, ಆದರೆ ಕೆಲವೊಂದು ಸಸ್ಯ ಹಾಗೂ ಫಂಗಸ್‌ಗಳಲ್ಲಿ ಕೂಡಾ ಇದು ಕಡಿಮೆ ಪ್ರಮಾಣದಲ್ಲಿ ಸಂಯೋಜಿಸಲ್ಪಡುತ್ತದೆ. ಕೊಲೆಸ್ಟರಾಲ್ ಹೇರಳವಾಗಿರುವ ತಿನಿಸುಗಳಲ್ಲಿ ಸ್ಯಾಚುರೇಟಡ್ ಇಲ್ಲವೆ ಟ್ರಾನ್ಸ್ ಕೊಬ್ಬು ಹೆಚ್ಚಾಗಿರುತ್ತದೆ. ಇಂತಹ ತಿನಿಸುಗಳ ಅತಿಯಾದ ಸೇವನೆಯಿಂದ ನಿಮ್ಮ ದೇಹದ ಕೊಲೆಸ್ಟರಾಲ್ ಮಟ್ಟ ಏರಿದಾಗ, ಅದು ಅಧಿಕ ರಕ್ತದೊತ್ತಡ, ಹೃದ್ರೋಗ ಹಾಗು ಪಾರ್ಶ್ವವಾಯುವಿನಂತಹ ಗಂಭೀರ ಕಾಯಿಲೆಗಳಿಗೆ ದಾರಿ ಮಾಡಿಕೊಡಬಹುದು.
ಕೊಲೆಸ್ಟರಾಲ್ ಪದವು, ಕೊಲೆ -(ಪಿತ್ತರಸ) ಮತ್ತು ಸ್ಟೇರಿಯೊಸ್ (ಗಟ್ಟಿಯಾದ) ಎನ್ನುವ ಗ್ರೀಕ್ ಭಾಷೆಯ ಪದಗಳಿಂದ ಹುಟ್ಟಿದೆ. ಇದರಲ್ಲಿರುವ ಹೆಚ್ಚು ಕೇಂದ್ರಿಕೃತ LDL ಮತ್ತು ಕಡಿಮೆ ಕೇಂದ್ರಿಕೃತ ಕ್ರಿಯಾತ್ಮಕ HDL ಗಳು ಹೃದಯ ರೋಗಕ್ಕೆ ಸಂಬಂಧಿಸಿರುತ್ತವೆ. ಏಕೆಂದರೆ ಇವು ಧಮನಿಗಳ ಒಳ ಪದರುಗಳಲ್ಲಿ ಕೊಬ್ಬಿನ ಅಂಶ ಬೆಳೆಯುವುದನ್ನು ಉತ್ತೇಜಿಸುತ್ತದೆ (ಅಥೆರೋಸ್‌ಕ್ಲೀರೋಸಿಸ್). ಈ ರೋಗವು ಹೃದಯಾಘಾತ, ಆಘಾತ, ಹೃದಯನಾಳದ ಹೊರವಲಯದ ರೋಗಗಳಿಗೆ ದಾರಿ ಮಾಡಿಕೊಡುತ್ತದೆ. LDL ಕಣಗಳು ಕೆಲವೊಮ್ಮೆ “ಕೆಟ್ಟ ಕೊಲೆಸ್ಟರಾಲ್” ಎಂದು ಕರೆಯಲ್ಪಡುತ್ತವೆ. ಏಕೆಂದರೆ ಅವುಗಳು ಎಥೆರೋಮಾ ಬೆಳೆಯಲು ಸಹಕಾರಿಯಾಗಿವೆ. ಇನ್ನೊಂದು ಕಡೆ, ಕೊಲೆಸ್ಟರಾಲನ್ನು ಜೀವಕೋಶಗಳಿಂದ ಮತ್ತು ಎಥೆರೋಮಾದಿಂದ ತೆಗೆಯುವ ಕ್ರಿಯಾತ್ಮಕ HDL ನ ಹೆಚ್ಚಿನ ಸೇರ್ಪಡೆಯಿಂದಾಗಿ, ಭದ್ರತೆಯನ್ನು ಕೊಡುತ್ತದೆ ಮತ್ತು ಅದನ್ನು ಕೆಲವೊಮ್ಮೆ “ಒಳ್ಳೆಯ ಕೊಲೆಸ್ಟರಾಲ್” ಎನ್ನುತ್ತಾರೆ. ಹೆಚ್ಚಿನ LDL ಕಣಗಳು ಇರುವ ಸಂದರ್ಭಗಳಲ್ಲಿ, ಅದರಲ್ಲೂ “ಚಿಕ್ಕ ಸಾಂದ್ರತೆ” (sdLDL) ಕಣಗಳು, ಧಮನಿಗಳ ಪದರುಗಳಲ್ಲಿ ಎಥೆರೋಮಾ ಬೆಳೆಯಲು ಸಹಕರಿಸುತ್ತವೆ. ಈ ಸ್ಥಿತಿಯನ್ನು ಅಥೆರೋಸ್‌ಕ್ಲೀರೋಸಿಸ್ ಎನ್ನುತ್ತಾರೆ. ಇದು ಹೃದಯದ ಪರಿಧಮನಿಯ ರೋಗ ಮತ್ತು ಬೇರೆ ರೀತಿಯ ಹೃದ್ರೋಗಕ್ಕೆ ಪ್ರಮುಖ ಕಾರಣವಾಗುತ್ತದೆ. ಇದಕ್ಕೆ ವಿರುದ್ಧವಾಗಿ, HDL ಕಣಗಳು(ಅದರಲ್ಲೂ ದೊಡ್ಡ HDL), ಕೊಲೆಸ್ಟರಾಲ್ ಮತ್ತು ಪ್ರಚೋದಕ ಮಧ್ಯವರ್ತಿಗಳನ್ನು ಎಥೆರೋಮ ಬೆಳೆಯದಂತೆ ತಡೆಯುತ್ತದೆ. LDL ಒಳ್ಳೆಯದಲ್ಲ, ಯಾಕೆಂದರೆ ಇದು ನಿಮ್ಮ ರಕ್ತನಾಳಗಳಲ್ಲಿ ಸಂಗ್ರಹಗೊಂಡು ರಕ್ತಸಂಚಾರಕ್ಕೆ ಅಡ್ಡಿಪಡಿಸುತ್ತದೆ. HDL ಒಳ್ಳೆಯ ಕೊಲೆಸ್ಟರಾಲ್ ಆಗಿದೆ, ಯಾಕೆಂದರೆ ಇದು ರಕ್ತನಾಳಗಳಿಂದ ಹೆಚ್ಚುವರಿ LDL ಅನ್ನು ಲಿವರ್‌ಗೆ ಸಾಗಿಸುತ್ತದೆ. ಲಿವರ್ ಅದನ್ನು ದೇಹದಿಂದ ಹೊರಹಾಕುತ್ತದೆ.
೨೦೦೭ರ ಅಧ್ಯಯನದ ಒಟ್ಟುಗೂಡಿಸಿದ ಅಂಕಿ ಅಂಶಗಳ ಮೇಲೆ, ರಕ್ತದ ಒಟ್ಟು ಕೊಲೆಸ್ಟರಾಲ್ ಪ್ರಮಾಣ ಹೃದಯ ನಾಳದ ಮತ್ತು ಮರಣ ಪ್ರಮಾಣದ ಮೇಲೆ ಘಾತೀಯ ಪ್ರಭಾವ ಬೀರುತ್ತದೆ ಎಂದು ೬೧ ವಯಸ್ಸಿನ ಮೇಲ್ಪಟ್ಟ ಸುಮಾರು ೯೦೦,೦೦೦ ಜನರ ಗುಂಪುಗಳಲ್ಲಿ ರುಜುವಾತು ಪಡಿಸಿದ್ದಾರೆ. ಆದರೂ, ಯುವ ಜನಾಂಗದವರಲ್ಲಿ ಹೃದಯನಾಳದ ರೋಗ ತುಲನಾತ್ಮಕವಾಗಿ ತುಂಬಾ ವಿರಳವಾಗಿರುವುದರಿಂದ, ಆರೋಗ್ಯದ ಮೇಲೆ ಅಧಿಕ ಕೊಲೆಸ್ಟರಾಲ್‌ನ ಬಲವಾದ ಪ್ರಭಾವ ವಯಸ್ಸಾದ ಜನರಲ್ಲಿ ಹೆಚ್ಚಾಗಿದೆ.
ರಾಷ್ಟ್ರೀಯ ಕೊಲೆಸ್ಟರಾಲ್ ಅಧ್ಯಯನ ಕಾರ್ಯಕ್ರಮದ ವರದಿಯ ಪ್ರಕಾರ ರಕ್ತದಲ್ಲಿ ಸಾಮಾನ್ಯ ಕೊಲೆಸ್ಟರಾಲ್ ನ ಪ್ರಮಾಣ < 200 mg/dL ಇರಬೇಕೆಂದು ಸೂಚಿಸುತ್ತವೆ, 200-239 mg/dL ಸ್ವಲ್ಪ ಹೆಚ್ಚು, >240 mg/dL ಹೆಚ್ಚು ಕೊಲೆಸ್ಟರಾಲ್ ಎಂದು ಪರಿಗಣಿಸಲಾಗುತ್ತದೆ
ಕೊಲೆಸ್ಟರಾಲ್ ಅನ್ನು HDL, LDL, ಮತ್ತು VLDL ಗಳ ಮೊತ್ತ ಎಂದು ವ್ಯಾಖ್ಯಾನಿಸಲಾಗಿದೆ. ಹೃದಯ ಸಂಬಂಧಿ ರೋಗದಲ್ಲಿ ಕೊಲೆಸ್ಟರಾಲ್‌ನ ಪಾತ್ರ ಮುಖ್ಯ.
೨೦೦೯ ರಲ್ಲಿ ತೀವ್ರವಾಗಿ ಪರಿಧಮನಿಯ ರೋಗ ಲಕ್ಷಣಗಳಿರುವ ರೋಗಿಗಳನ್ನು ಅಧ್ಯಯನ ಮಾಡಿ ಹೈಪರ್ ಕೊಲೆಸ್ಟರಾಲೇಮಿಯಾಗೂ ಹೆಚ್ಚಿನ ಮರಣ ಪ್ರಮಾಣದ ಫಲಿತಾಂಶಗಳಿಗೂ ಸಂಬಂಧವನ್ನು ಕಂಡು ಹಿಡಿದಿದೆ. ಅಮೇರಿಕನ್ ಹಾರ್ಟ್ ಅಸೋಸಿಯೇಶನ್ ನ ಸಲಹೆಯ ಪ್ರಕಾರ, ೨೦ ವರ್ಷ ಮೀರಿದವರು ಪ್ರತೀ ಐದು ವರ್ಷಗಳಿಗೊಮ್ಮೆ ಕೊಲೆಸ್ಟರಾಲ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ೧೨-ತಾಸುಗಳ ಉಪವಾಸದ ನಂತರ ಈ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಒಬ್ಬ ವ್ಯಕ್ತಿಯ ದೇಹದಲ್ಲಿ ಕೊಲೆಸ್ಟರಾಲ್ ಒಟ್ಟೂ ಪ್ರಮಾಣ ೨೦೦ mg/dL ಕ್ಕಿಂತ ಜಾಸ್ತಿ ಇದ್ದರೆ ಅಥವಾ ಆ ವ್ಯಕ್ತಿ ೪೫ ವರ್ಷ ದಾಟಿದ್ದ ಗಂಡಾಗಿದ್ದು ಅಥವಾ ೫೦ ವರ್ಷವಾಗಿದ್ದ ಹೆಣ್ಣಾಗಿದ್ದು HDL (ಒಳ್ಳೆಯ) ಕೊಲೆಸ್ಟರಾಲ್ ೪೦ mg/dL ಗಿಂತ ಕಡಿಮೆ ಇದ್ದರೆ ಆ ವ್ಯಕ್ತಿ ೫ ವರ್ಷ ಕ್ಕೊಮ್ಮೆ ಅಲ್ಲದೇ ಇನ್ನೂ ಹೆಚ್ಚು ಬಾರಿ ಕೊಲೆಸ್ಟರಾಲ್ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಆ ವ್ಯಕ್ತಿಗೆ ಹೃದ್ರೋಗ ಅಥವಾ ಲಕ್ವಾದಂತಹ ಇತರ ರೋಗಗಳ ಸಾಧ್ಯತೆ ಹೆಚ್ಚಾಗಿರುತ್ತದೆ.
ರಕ್ತದಲ್ಲಿ ಹೆಚ್ಚಿನ ಮಟ್ಟದ LDL ಕೊಲೆಸ್ಟರಾಲ್ ಇದ್ದಾಗ, ದಪ್ಪ ಮೇಣದಂತಹ ಪದಾರ್ಥ ರಕ್ತನಾಳಗಳ ಒಳಗೆ ಜಮೆಯಾಗುತ್ತದೆ. ಇದನ್ನು ಪ್ಲಾಕ್ಸ್ ಎನ್ನುವರು. ದಿನ ಕಳೆದಂತೆ ಇದು ತಡೆಯನ್ನು ನಿರ್ಮಿಸಿಸು ವುದರಿಂದ, ರಕ್ತ ಸಂಚಾರಕ್ಕೆ ಅಡ್ಡಿಯಾಗಿ, ರಕ್ತನಾಳಗಳ ಒಳಗಿನ ಅಗಲ ಕಿರಿದಾಗುತ್ತದೆ. ಇದನ್ನು ಆ್ಯಥೆರೊಸ್‌ಕ್ಲೆರೋಸಿಸ್ ಎನ್ನುವರು. ಇದು ಇನ್ನಷ್ಟು ಕ್ಲಿಷ್ಟವಾದ ಸಮಸ್ಯೆಗಳನ್ನು ತಂದೊಡ್ಡಬಹುದು. ಕಿರಿದಾದ ರಕ್ತನಾಳಗಳು ರಕ್ತಸಂಚಾರವನ್ನು ಅಡ್ಡಿಪಡಿಸಿ, ರಕ್ತದೊತ್ತಡ BP ಹೆಚ್ಚಲು ಕಾರಣವಾಗುತ್ತವೆ. ನಿಮ್ಮ ರಕ್ತನಾಳಗಳ ಅಗಲ ಕಿರಿದಾದಷ್ಟೂ, ನಿಮ್ಮ ರಕ್ತದೊತ್ತಡ ಮೇಲಕ್ಕೇರುವುದು. ದಿನ ಕಳೆದಂತೆ ಇದು ಹೃದ್ರೋಗದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಎಡೆಮಾಡಿಕೊಡುವುದು.
ರಕ್ತನಾಳಗಳ ಒಳಗೆ ಪ್ಲಾಕ್ ಶೇಖರಣೆ ಯಾಗುವುದರಿಂದ, ಹೃದಯಕ್ಕೆ ರಕ್ತದ ಮೂಲಕ ತಲುಪಬೇಕಾದ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಎದೆನೋವು ಬರುತ್ತದೆ. ಇದಕ್ಕೆ ಆ್ಯಂಜಿನ ಎಂದು ಕರೆಯುತ್ತಾರೆ. ಇದು ಕೊರೊನರಿ ಆರ್ಟರಿ ರೋಗದ ಲಕ್ಷಣವಾಗಿದ್ದು, ನೀವು ಹೃದಯಾಘಾತಕ್ಕೆ ತುತ್ತಾಗುವ ಸಾಧ್ಯತೆ ಇದೆಯೆಂದು ಸೂಚಿಸುತ್ತದೆ. ಪ್ಲಾಕ್ ಹರಿದರೆ ಇಲ್ಲವೆ ಅದರ ಚಿಕ್ಕ ಚೂರೊಂದು ಮುರಿದು ಬಿದ್ದರೆ ರಕ್ತ ಹೆಪ್ಪುಗಟ್ಟಿ, ರಕ್ತಸಂಚಾರಕ್ಕೆ ಮತ್ತಷ್ಟು ತಡೆಯೊಡ್ಡಬಹುದು ಇಲ್ಲವೆ ರಕ್ತನಾಳ ಪೂರ್ತಿ ಮುಚ್ಚಿಕೊಳ್ಳಬಹುದು. ಹೃದಯಕ್ಕೆ ಹೋಗುವ ರಕ್ತನಾಳಗಳಲ್ಲೊಂದರಲ್ಲಿ ಹೀಗಾದರೆ ಹೃದಯಾಘಾತವಾಗುತ್ತದೆ.
ಮೇಲ್ಕಂಡ ಪ್ರಕ್ರಿಯೆ ಮೆದುಳಿಗೆ ಹೋಗುವ ರಕ್ತನಾಳ ಗಳಲ್ಲೊಂದರಲ್ಲಿ ಸಂಭವಿಸಿದರೆ, ಅದು ಪಾರ್ಶ್ವವಾಯುವಿನಲ್ಲಿ ಕೊನೆ ಯಾಗುತ್ತದೆ..
ಅಧಿಕ ಕೊಲೆಸ್ಟರಾಲ್‌ನ ಕಾರಣದಿಂದ ಮೆದುಳಿನ ರಕ್ತನಾಳಗಳಲ್ಲಿ ತಡೆ ಉಂಟಾಗಿ, ಅದರಿಂದಾಗುವ ರಕ್ತಸಂಚಾರದಲ್ಲಿನ ವ್ಯತ್ಯಯವು ಯೋಚನಾ ಶಕ್ತಿಯನ್ನು ಕುಗ್ಗಿಸಿ, ಮರೆವು ಇಲ್ಲವೆ ಚಲನಾ ಶಕ್ತಿ ಕಳೆದು ಕೊಳ್ಳುವಿಕೆಗೆ ಎಡೆ ಮಾಡಿಕೊಡುತ್ತದೆ.
ಪಿತ್ತರಸವನ್ನು(ಬೈಲ್) ಹುಟ್ಟುಹಾಕಲು ಕೊಲೆಸ್ಟರಾಲ್ ಅತ್ಯಗತ್ಯ, ಜೀರ್ಣಕ್ರಿಯೆಗೆ ಸಹಕಾರಿಯಾಗುವ ಈ ಪಿತ್ತರಸವನ್ನು ಲಿವರ್ ಉತ್ಪಾದಿಸುತ್ತದೆ. ಆದರೆ ನಿಮ್ಮ ಪಿತ್ತರಸದಲ್ಲಿ ಹೆಚ್ಚು ಕೊಲೆಸ್ಟರಾಲ್ ಇದ್ದರೆ ಅದರಿಂದ ನಿಮ್ಮ ಪಿತ್ತ ಕೋಶದಲ್ಲಿ, ತುಂಬ ನೋವು ಕೊಡುವ ಪಿತ್ತ ಕೋಶದ ಕಲ್ಲುಗಳು ಉತ್ಪತ್ತಿ ಯಾಗ ಬಹುದು.
ಮೀನೆಣ್ಣೆ, ಸೋಯಾ ಉತ್ಪನ್ನಗಳು ಹಾಗೂ ಹಸಿರು ಸೊಪ್ಪಿನ ತರಕಾರಿಗಳು ಉತ್ತಮ ಕೊಲೆಸ್ಟ್ರಾಲ್( Good cholesterol) ಮೂಲಗಳು. ಉತ್ತಮ ಕೊಬ್ಬನ್ನು ಹೆಚ್ಚಿಸುವ ಅತ್ಯುತ್ತಮ ವಿಧಾನಗಳಲ್ಲಿ ಒಂದೆಂದರೆ, ವ್ಯಾಯಾಮ. ವಾರದಲ್ಲಿ ಕನಿಷ್ಠ ಐದು ದಿನ 30 ನಿಮಿಷಕ್ಕೂ ಹೆಚ್ಚು ಕಾಲ ಏರೋಬಿಕ್ಸ್, (ನಡಿಗೆ, ಓಟ, ಮೆಟ್ಟಿಲು ಹತ್ತುವಂತಹ) ಕಸರತ್ತಿನಲ್ಲಿ ತೊಡಗುವಿರಾದರೆ ಬಹಳ ಒಳ್ಳೆಯದು
ಧೂಮಪಾನಿಯಾಗಿದ್ದರೆ, ಅದನ್ನು ಬಿಡುವ ಮೂಲಕ ನಿಮ್ಮ ಉತ್ತಮ ಕೊಬ್ಬಿನ ಪ್ರಮಾಣವನನ್ನು ಹೆಚ್ಚಿಸಿಕೊಳ್ಳಬಹುದು.
ನೀವು ಧೂಮಪಾನ ಮಾಡಿದಾಗಲೆಲ್ಲಾ ಅದರಲ್ಲಿನ ರಸಾಯನಿಕಗಳು ನಿಮ್ಮಲ್ಲಿನ ಉತ್ತಮ ಕೊಬ್ಬನ್ನು ಕಡಿಮೆ ಮಾಡುತ್ತದೆ. ಮುಖ್ಯವಾಗಿ ನೆನೆಸಿಟ್ಟ ಬಾದಾಮಿ, ವಾಲ್ ನಟ್ಸ್ , ಒಣಖರ್ಜೂರ, ಇತರ ಕೆಲವು ಬೀಜಗಳು ಹೃದಯಕ್ಕೆ ಒಳ್ಳೆಯದು ಎಂದು ಅಧ್ಯಯನಗಳು ಕಂಡುಕೊಂಡಿವೆ. ದಿನಕ್ಕೆ ಸ್ವಲ್ಪ ಒಣ ಬೀಜ ಗಳನ್ನು ತಿಂದರೂ ಸಾಕು, ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ನಿಯಂತ್ರಿಸ ಬಹುದು! ಅಷ್ಟೇ ಅಲ್ಲದೇ ಇದರಲ್ಲಿ ಇರುವಂತಹ ಇತರ ಹಲವಾರು ರೀತಿಯ ಪೋಷಕಾಂಶಗಳು ಕೂಡ ಹೃದಯದ ಆರೋಗ್ಯವನ್ನು ಕಾಪಾಡುವುದು.
ನಾಳೆ ಮುಂದುವರೆಯುತ್ತದೆ…ಸಶೇಷ