ಶಿಲೆಗಳಲ್ಲಿ ಕಲೆ ಅರಳಿಸುವ, ಕಸದಿಂದ ರಸಗೊಳಿಸುವ, ಕರದಿಂದ ಮರದ ದಿಮ್ಮಿಗೂ ರೂಪ ಕೊಡುವ ಜಾಧೂಗಾರ ಈ ಕಲಾವಿದ…!
ಶಿಲ್ಪಕಲೆ ಹಾಗು ಮರದ ಕೆತ್ತನೆಗಳಲ್ಲಿ ಭಾರತದ ಶ್ರೇಷ್ಠತೆ ಅಮೋಘವಾದಂತಹದ್ದು. ಭಾರತೀಯ ಶಿಲ್ಪ ಕಲಾಕೃತಿಗಳು, ಮರದ ಕೆತ್ತನೆಗಳು ಇಂದಿಗೂ ಇಡೀ ಜಗತ್ತಿಗೇ ಅಚ್ಚರಿ ಹುಟ್ಟಿಸುವಂತಹದ್ದು. ವಿಶ್ವಕರ್ಮ, ಜಕ್ಕಣಾಚಾರ್ಯ, ಮಾಯಾ ಕಾಲದಿಂದ ಈಗಿನ ಹೊಸ ಯುಗದ ಶಿಲ್ಪಕಲಾ, ಕೆತ್ತನೆಯ ಕಲಾವಿದರಾದ ರಾಮ್ ಕಿಂಕರ್ ಬಾಯೆಜ್, …