Author: Rajath dh

ಗುಂಡೇಟಿಗೆ ವೃದ್ಧ ಬಲಿ, ಸೊಸೆಯಿಂದ ಕೊಲೆ ಶಂಕೆ

ವೃದ್ದರೊಬ್ಬರು ಗುಂಡೇಟಿನಿಂದ ಸಾವನಪ್ಪಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಕಿಕ್ಕರಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಹಿರಿಯ ಕೆ.ಎ.ಮಂದಣ್ಣ (73) ಎಂಬುವವರು ಮೃತ ವ್ಯಕ್ತಿಯಾಗಿದ್ದು,ತನ್ನ ಮಗನ ಹೆಂಡತಿ (ಸೊಸೆ) ನೀಲಮ್ಮ ಅಲಿಯಾಸ್ ಜ್ಯೋತಿ(28) ಎಂಬಾಕೆಯಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು ಈಕೆಯನ್ನು ಪೊಲೀಸರು ವಶಕ್ಕೆ ಪಡೆದು…

ಮಡಿಕೇರಿಯಲ್ಲಿ ಬಿರುಸು ಕಾಂಗ್ರೆಸ್ ಬಾಂಡ್ ವಿತರಣೆ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾಂಗ್ರೆಸ್ ಗ್ಯಾರಂಟಿ ಬಾಂಡ್ ವಿತರಣೆ ಕಾರ್ಯಕ್ರಮ ಮಡಿಕೇರಿ ನಗರದಲ್ಲಿ ಬಿರುಸಿನಿಂದ ನಡೆಯುತ್ತಿದೆ.ಕುಟುಂಬದ ಪ್ರತಿ ಮಹಿಳೆಯರಿಗೆ ಮಾಸಿಕ ಎರಡು ಸಾವಿರ ರೂಗಳು ,ಉಚಿತ 200 ಯೂನಿಟ್ ಕರೆಂಟ್ ಎಂಬ ಗ್ಯಾರೆಂಟಿ ಬಾಂಡ್ ಗೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್…

ಸೋಮವಾರಪೇಟೆಯಲ್ಲಿ ಜರುಗಿದ ಬಿಜೆಪಿ ಯುವ ಶಕ್ತಿ ಸಂಗಮ

ಭಾರತೀಯ ಜನತಾ ಪಾರ್ಟಿ ಕೊಡಗು ಜಿಲ್ಲಾ ಯುವ ಮೋರ್ಚಾ ಆಶ್ರಯದಲ್ಲಿ ಸೋಮವಾರಪೇಟೆ ಒಕ್ಕಲಿಗ ಕಲ್ಯಾಣ ಮಂಟಪದಲ್ಲಿ ಯುವ ಶಕ್ತಿ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಯುವ ಮೋರ್ಚಾದ ರಾಜ್ಯಾಧ್ಯಕ್ಷ ಡಾ.ಸಂದೀಪ್ ಕುಮಾರ್ ಉದ್ಘಾಟಿಸಿದರು. ಶಾಸಕರಾದ ಅಪ್ಪಚ್ಚು ರಂಜನ್,ಕೆ.ಜಿ ಬೋಪಯ್ಯ, ಎಂ.ಎಲ್ಸಿ ಸುಜಾಕುಶಾಲಪ್ಪ,…

ಬಿಜೆಪಿ ಬ್ಯಾನರ್ ಹರಿದು ಹಾಕಿದ ಕಿಡಿಗೇಡಿಗಳು

ಸೋಮವಾರಪೇಟೆಯಲ್ಲಿ ಹಮ್ಮಿಕೊಂಡಿರುವ ಬಿಜೆಪಿಯ ಯುವ ಶಕ್ತಿ ಸಂಗಮ ಕಾರ್ಯಕ್ರಮದ ಅಂಗವಾಗಿ ಕೋವರ್ ಕೊಲ್ಲಿ ಜಂಕ್ಷನ್ ನಲ್ಲಿ ಅಳವಡಿಸಿದ್ದ ಪಕ್ಷದ ಕಾರ್ಯಕರ್ತರ ಸ್ವಾಗತ ಬ್ಯಾನರ್ ಅನ್ನು ಅರ್ಧಕ್ಕೆ ಹರಿದು ಹಾಕಿರುವ ಘಟನೆ ನಡೆದಿದೆ. ಈ ಕೃತ್ಯಕ್ಕೆ ಸೋಮವಾರಪೇಟೆ ಮಂಡಲದ ಮುಖಂಡರಿಂದ ತೀವ್ರ ಆಕ್ರೋಶ…

ಗೋವಾದಲ್ಲಿ ಕಳ್ಳತನ ,ಜಿಲ್ಲೆಯ ವ್ಯಕ್ತಿ ಬಂಧನ

ಗೋವಾದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ ಆರೋಪಿ ಸೇರಿದಂತೆ ಮೂವರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.ಸಿದ್ದಾಪುರದ ಹೈಸ್ಕೂಲ್ ಪೈಸರಿ ನಿವಾಸಿ ಶಾಜಿ ಸೇರಿದಂತೆ ಕೇರಳ ರಾಜ್ಯದ ಶರೀಫ್ ಮತ್ತು ಶ್ರೀತು ಮತ್ತಿಬ್ಬರು ಬಂಧಿತ ಆರೋಪಿಗಳು. ಗೋವಾದ ರಾಜಧಾನಿ ಪಣಾಜಿ,ಪೆರನಮ್ ಸೇರಿದಂತೆ…

ಗೋಣಿಕೊಪ್ಪ ಸಂಪೂರ್ಣ ಕೇಸರಿಮಯ: ವಿರೋಧ ಪಕ್ಷದ ವಿರುದ್ಧ ಘಟಾನುಗಟಿ ನಾಯಕರ ಟೀಕಾ ಪ್ರಹಾರ

ರಾಜ್ಯದ ನಾಲ್ಕು ದಿಕ್ಕುಗಳು ಆರಂಭಗೊಂಡ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಗೋಣಿಕೊಪ್ಪ ಸಮೀಪಿಸುತ್ತಿದಂತೆ ಎಲ್ಲೆಲ್ಲೂ ಕೇಸರಿಮಯ.ಘಟಾನುಘಟಿ ನಾಯಕರು ರಥ,ವೇದಿಕೆ ಏರಿ ಮುಖ್ಯವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದು ಸಾಮಾನ್ಯವಾಗಿತ್ತು. ಯಾತ್ರೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ,…

ಸುಂಟಿಕೊಪ್ಪದ ನೂತನ ಗ್ರೇಡ್-1 ಗ್ರಾ.ಪಂ ಕಾರ್ಯಾಲಯ ಉದ್ಘಾಟನೆ

ಕುಶಾಲನಗರ ನೂತನವಾಗಿ ತಾಲ್ಲೂಕು ಕೇಂದ್ರವಾದ ಬೆನ್ನಲ್ಲೇ ಅತೀ ಹೆಚ್ಚು ಕಾಫಿ ಬೆಳೆಗಾರರು ಮತ್ತು ಕಾರ್ಮಿಕರು ಇರುವ ಸುಂಟಿಕೊಪ್ಪದ ನೂತನ ಕಾರ್ಯಾಲಯ ಇಲ್ಲಿನ ಮಾರುಕಟ್ಟೆಯ ಆವರಣದಲ್ಲಿ ಉದ್ಘಾಟನೆಗೊಂಡಿತ್ತು. ಕಟ್ಟಡ ಉದ್ಘಾಟಿಸಿದ ಶಾಸಕ ಅಪ್ಪಚ್ಚು ರಂಜನ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸುಂಟಿಕೊಪ್ಪ ಇದೀಗ ಗ್ರೇಡ್ 1…

ಅಪಪ್ರಚಾರ ಬಿಜೆಪಿಯ ಶಕ್ತಿಯನ್ನು ಕುಂದಿಸುವುದಿಲ್ಲ: ಕೆ.ಜಿ ಬೋಪಯ್ಯ ಭರವಸೆ

ಅಪಪ್ರಚಾರಕ್ಕೆ ಕಿವಿಗೊಡಬೇಡಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ, ಅಪಪ್ರಚಾರ ಬಿಜೆಪಿಯನ್ನು ಏನೂ ಮಾಡಲಾಗದು ಕಾಯ೯ಕತ೯ರೇ ಬಿಜೆಪಿ ಶಕ್ತಿ ಎಂದು ಶಾಸಕರಾದ ಕೆ.ಜಿ ಬೋಪಯ್ಯ ಭರವಸೆಯ ಮಾತನ್ನಾಡಿದರು. ಕೊಡಗಿಗೆ ಅತ್ಯಧಿಕ ಅನುದಾನ ಬರುವಲ್ಲಿ ಕೆ.ಎಸ್. ಈಶ್ವರಪ್ಪ ಕೂಡ ಕಾರಣ, ಜಮ್ಮಾ ಬಾಣೆ ಸಮಸ್ಯೆ ನಿವಾರಿಸುವಲ್ಲಿ…

ದೇಶಭಕ್ತರ ಜಿಲ್ಲೆಯಾದ ಕೊಡಗಿನ ಹುಲಿಮರಿಗಳು ಬಿಜೆಪಿಯ ನಿಜವಾದ ಶಕ್ತಿ: ಕೆ.ಎಸ್ ಈಶ್ವರಪ್ಪ

ಗೋಣಿಕೊಪ್ಪ: ಟಿಪ್ಪು ಸಂತತಿ ಬೆಳೆಸುತ್ತಿರುವವರಿಗೆ ತಕ್ಕ ಪಾಠ ಕಲಿಸಿ ಎಂದು ಸಿದ್ದರಾಮಯ್ಯ ವಿರುದ್ದ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಗೋಣಿಕೊಪ್ಪದ ಬಿಜೆಪಿಯ ವಿಜಯ ಸಂಕಲ್ಪ ರಥ ಯಾತ್ರೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ, ಅಮಿತ್ ಶಾ ಬಿಟ್ಟರೆ ಬಿಜೆಪಿಗೆ ನಾಯಕರಿಲ್ಲ. ಭ್ರಷ್ಟಾಚಾರ…

ಗೋಣಿಕೊಪ್ಪಲುವಿನಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ

ಕೊಡಗು ಜಿಲ್ಲೆಗೆ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಪ್ರವೇಶಿಸಿದೆ.ವಿರಾಜಪೇಟೆ ವಿಧಾನಸಭೆಯ ಗೋಣಿಕೊಪ್ಪದ ಮೂಲಕ ರಥಯಾತ್ರೆ ಇಲ್ಲಿನ ಎಪಿಎಂಸಿಯಿಂದ ಆರಂಭಗೊಂಡಿತು. ಮಾಜಿ ಮುಖ್ಯ ಮಂತ್ರಿ ಡಿ.ವಿ ಸದಾನಂದಗೌಡ, ಸ್ಥಳೀಯ ಶಾಸಕ ಕೆ.ಜಿ ಬೋಪಯ್ಯ, ಮಡಿಕೇರಿ ವಿಧಾನಸಭೆಯ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಸೇರಿದಂತೆ…