ಕುಶಾಲನಗರ ನೂತನವಾಗಿ ತಾಲ್ಲೂಕು ಕೇಂದ್ರವಾದ ಬೆನ್ನಲ್ಲೇ ಅತೀ ಹೆಚ್ಚು ಕಾಫಿ ಬೆಳೆಗಾರರು ಮತ್ತು ಕಾರ್ಮಿಕರು ಇರುವ ಸುಂಟಿಕೊಪ್ಪದ ನೂತನ ಕಾರ್ಯಾಲಯ ಇಲ್ಲಿನ ಮಾರುಕಟ್ಟೆಯ ಆವರಣದಲ್ಲಿ ಉದ್ಘಾಟನೆಗೊಂಡಿತ್ತು.

ಕಟ್ಟಡ ಉದ್ಘಾಟಿಸಿದ ಶಾಸಕ ಅಪ್ಪಚ್ಚು ರಂಜನ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸುಂಟಿಕೊಪ್ಪ ಇದೀಗ ಗ್ರೇಡ್ 1 ಮಟ್ಟಕ್ಕೆ ಬೆಳೆಯಬೇಕು, ಪಂಚಾಯ್ತಿಯಲ್ಲಿ ಅದೇನೇ ಅಸಮಧಾನಗಳಿದ್ದರೂ ನೂತನವಾಗಿ ನಿರ್ಮಿಸಿರುವ ಕಟ್ಟಡದಲ್ಲಿ ಉತ್ತಮ ಆಡಳಿತ ನಡೆಸುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪಂಚಾಯ್ತಿಯ ಎಲ್ಲಾ ಸದಸ್ಯರು, ವಿವಿಧ ಪಕ್ಷದ ಮುಖಂಡರು ಹಾಜರಿದ್ದರು.