ಅಪಪ್ರಚಾರಕ್ಕೆ ಕಿವಿಗೊಡಬೇಡಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ, ಅಪಪ್ರಚಾರ ಬಿಜೆಪಿಯನ್ನು ಏನೂ ಮಾಡಲಾಗದು ಕಾಯ೯ಕತ೯ರೇ ಬಿಜೆಪಿ ಶಕ್ತಿ ಎಂದು ಶಾಸಕರಾದ ಕೆ.ಜಿ ಬೋಪಯ್ಯ ಭರವಸೆಯ ಮಾತನ್ನಾಡಿದರು.
ಕೊಡಗಿಗೆ ಅತ್ಯಧಿಕ ಅನುದಾನ ಬರುವಲ್ಲಿ ಕೆ.ಎಸ್. ಈಶ್ವರಪ್ಪ ಕೂಡ ಕಾರಣ, ಜಮ್ಮಾ ಬಾಣೆ ಸಮಸ್ಯೆ ನಿವಾರಿಸುವಲ್ಲಿ ಸದಾನಂದಗೌಡರ ಕೊಡುಗೆ ಸ್ಮರಣೀಯ. ರಾಜ್ಯ ಸಕಾ೯ರದ ಸಾಧನೆಗಳನ್ನು ಜನರ ಮುಂದಿಡಬೇಕಿದೆ. ಬಿಜೆಪಿ ಸದಾ ಜನಪರವಾಗಿದೆ ಎಂಬುದನ್ನು ಮತದಾರರಿಗೆ ತಿಳಿಸಬೇಕಾಗಿದೆ.
ಬೊಮ್ಮಾಯಿ, ಯಡಿಯೂರಪ್ಪ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ನೀಡಿದ ಜನಪರ ಸೌಲಭ್ಯಗಳನ್ನು ಜನರಿಗೆ ಮತ್ತೊಮ್ಮೆ ನೆನಪಿಸಬೇಕಾಗಿದೆ
ರಸ್ತೆಗಳ ಪ್ರಗತಿ ಆಗುತ್ತಿದೆ. ವಿಪರೀತ ಮಳೆಯಿಂದಾಗಿ ರಸ್ತೆ ದುರಸ್ಥಿ ವಿಳಂಬವಾಗಿದೆ ಜನ ಅಥ೯ ಮಾಡಿಕೊಳ್ಳಬೇಕು ಎಂದರು.
ಕೆ.ಎಸ್. ಈಶ್ವರಪ್ಪ, ಡಿ.ವಿ.ಸದಾನಂದ ಗೌಡ, ವಿರಾಜಪೇಟೆ ಕ್ಷೇತ್ರದ ಜನತೆ ಮೇಲೆ ಪ್ರೀತಿಯಿಟ್ಟು ಇಲ್ಲಿಗೆ ಬಂದಿದ್ದಾರೆ ಎಂದು ಬೋಪಯ್ಯ ಕೖತಜ್ಞತೆ ಅರ್ಪಿಸಿದರು.