ಕೊಡಗು ಜಿಲ್ಲೆಗೆ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಪ್ರವೇಶಿಸಿದೆ.ವಿರಾಜಪೇಟೆ ವಿಧಾನಸಭೆಯ ಗೋಣಿಕೊಪ್ಪದ ಮೂಲಕ ರಥಯಾತ್ರೆ ಇಲ್ಲಿನ ಎಪಿಎಂಸಿಯಿಂದ ಆರಂಭಗೊಂಡಿತು.

ಮಾಜಿ ಮುಖ್ಯ ಮಂತ್ರಿ ಡಿ.ವಿ ಸದಾನಂದಗೌಡ, ಸ್ಥಳೀಯ ಶಾಸಕ ಕೆ.ಜಿ ಬೋಪಯ್ಯ, ಮಡಿಕೇರಿ ವಿಧಾನಸಭೆಯ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಸೇರಿದಂತೆ ಸಹಸ್ರಾರು ಬಿಜೆಪಿ ಕಾರ್ಯಕರ್ತರು ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಖಾಸಗಿ ಬಸ್ ನಿಲ್ದಾಣದ ವೇದಿಕೆಗೆ ಆಗಮಿಸಿತು. ರಥ ಯಾತ್ರೆಗೆ ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಸಹ ಸಾಥ್ ನೀಡಿದ್ದರು.

ಮುಸ್ಸಂಜೆಯಾದರೂ ಗೋಣಿಕೊಪ್ಪಲು ತಲುಪದ ಸಂಕಲ್ಪ ಯಾತ್ರೆ ಆನೆಚೌಕೂರಿನಿಂದ ಬೈಕ್ ಜಾಥಾ, ಕಾಲ್ನಡಿಗೆಯಲ್ಲಿ ಸಾಗುತ್ತಿರುವ ಬಿಜೆಪಿ ಕಾಯ೯ಕತ೯ರ ಮೇರೆ ಮೀರಿದ ಸಂಭ್ರಮಯಿಂದ ಸಾಗಿತ್ತು. ಕಮಲ ಪಡೆಯ ಶಕ್ತಿ ಪ್ರದರ್ಶನಿಂದ ಗೋಣಿಕೊಪ್ಪ ಸಂಪೂರ್ಣ ಕೇಸರಿಮಯ ವಾಗಿದೆ.