ಗೋಣಿಕೊಪ್ಪ: ಟಿಪ್ಪು ಸಂತತಿ ಬೆಳೆಸುತ್ತಿರುವವರಿಗೆ ತಕ್ಕ ಪಾಠ ಕಲಿಸಿ ಎಂದು ಸಿದ್ದರಾಮಯ್ಯ ವಿರುದ್ದ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಗೋಣಿಕೊಪ್ಪದ ಬಿಜೆಪಿಯ ವಿಜಯ ಸಂಕಲ್ಪ ರಥ ಯಾತ್ರೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ, ಅಮಿತ್ ಶಾ ಬಿಟ್ಟರೆ ಬಿಜೆಪಿಗೆ ನಾಯಕರಿಲ್ಲ. ಭ್ರಷ್ಟಾಚಾರ ಮಿತಿ ಮೀರಿ ಹೋಗಿದೆ. ದೇಶ ಕೋಮುವಾದಿಗಳ ಗಲಭೆಯಿಂದ ತತ್ತರಿಸಿದೆ. ಭಯೋತ್ಪಾದಕ ಚಟುವಟಿಕೆಗಳಿಗೆ ಕಾರಣವಾಗಿದೆ ಎಂಬ ಸುಳ್ಳು ಆರೋಪ ಮಾಡುತ್ತಿರುವ ಸಿದ್ದರಾಮಯ್ಯ ಅವರಿಗೆ ಇಂಥ ಮಾತು ಹೇಳಲು ಯೋಗ್ಯತೆಯಿಲ್ಲ. ವಿಶ್ವವೇ ಮೋದಿಯನ್ನು ವಿಶ್ವನಾಯಕ ಎಂದು ಪರಿಗಣಿಸಿದೆ. ಹೀಗಿರುವಾಗ ಮೋದಿ ವಿರುದ್ಧ ಅಪಪ್ರಚಾರದಲ್ಲಿ ಕಾಂಗ್ರೆಸ್ ತೊಡಗಿದೆ. ಪಾಕಿಸ್ತಾನ ಒಬ್ಬಂಟಿಯಾಗಿದೆ. ಜಗತ್ತಿನ ಎಲ್ಲಾ ದೇಶಗಳು ಒಂದಾಗಿದೆ – ಇದು ನರೇಂದ್ರ ಮೋದಿ ಶಕ್ತಿ ಎಂದು ಈಶ್ವರಪ್ಪ ಬಣ್ಣಿಸಿದರು.

ಉಕ್ಕಿನ ಮನುಷ್ಯ ಅಮಿತ್ ಶಾ ಈಗ ದೇಶದ ಗೖಹ ಮಂತ್ರಿ. ಕಾಶ್ಮೀರದಲ್ಲಿ ಭಾರತದ ತ್ರಿವಣ೯ ಧ್ವಜ ಹಾರಿಸಿದ ಕೀತಿ೯ ಅಮಿತ್ ಶಾ ಅವರದ್ದು. ಕಾಂಗ್ರೆಸ್ ವಿರುದ್ಧ ಕಟು ಮಾತುಗಳಿಂದ ಕಿಡಿಕಾರಿದ ಈಶ್ವರಪ್ಪ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡಿದ್ದನ್ನು ಮರೆಯಬೇಡಿ, ಭಾರತ ವೀರರ ದೇಶ ಎಂದು ಜಗತ್ತಿಗೇ ತೋರಿಸಿದ ಹಿರಿಮೆ ಮೋದಿ ನೇತೖತ್ವದ ಬಿಜೆಪಿ ಸಕಾ೯ರದ್ದು. ದೇಶಪ್ರೇಮಿಗಳ ಕೊಡಗು ಜಿಲ್ಲೆ ನನ್ನಂಥ ನಾಯಕರಿಗೆ ಪ್ರೇರಣೆ ನೀಡಬಲ್ಲದು ಎಂದರು.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಎಲ್ಲಿದ್ದೀರಿ.. ಗೋಣಿಕೊಪ್ಪಲು ಬಿಜೆಪಿ ಸಮಾವೇಶ ನೋಡಲು ಬನ್ನಿ ಎಂದು ಈಶ್ವರಪ್ಪ ಘರ್ಜಿಸಿದರು.

ರಾಹುಲ್ ಗಾಂಧಿ ಕಾಶ್ಮೀರಕ್ಕೆ ತೆರಳಿದ ಸಂದಭ೯ ರಾಹುಲ್ ಭಾರತ್ ಜೋಡೋಗೆ ಮುಕ್ತ ಅವಕಾಶ ನೀಡಿತ್ತು. ಯಾವುದೇ ಭಯೋತ್ಪಾದಕ ಸಮಸ್ಯೆಯಿರಲಿಲ್ಲ – ಇದು ಬಿಜೆಪಿ ಸಾಧನೆಯಲ್ಲವೇ?

ಸೋನಿಯಾ , ರಾಹುಲ್ ಗಾಂಧಿ ಬಿಟ್ಟರೆ ಕಾಂಗ್ರೆಸ್ ನಲ್ಲಿ ಯಾರಿದ್ದಾರೆ. ಎಲ್ಲಾ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಧೂಳೀಪಟವಾಗುತ್ತಿದೆ.

ರಾಷ್ಟ್ರಭಕ್ತ ಯುವಪೀಳಿಗೆಯಿಂದ ಬಿಜೆಪಿ ಪ್ರಬಲವಾಗಿ ಬೆಳೆಯುತ್ತಿದೆ ಇವರ ಮೇಲೆ ಭಾರತ ನಿಂತಿದೆ ಕೊಡಗಿನ ಹುಲಿಮರಿಗಳು ಬಿಜೆಪಿಯ ನಿಜವಾದ ಶಕ್ತಿ ,ಹಿಂದುಳಿದ ಮತ್ತು ದಲಿತ ವಗ೯ಕ್ಕೆ ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ಅನೇಕ ನೆರವು ನೀಡಿದ್ದಾರೆ. ಸಿದ್ದರಾಮಯ್ಯ ಯಾವ ಕೊಡುಗೆ ನೀಡಿದ್ದಾರೆ ಎಂದರು. ಬಿಜೆಪಿಯ ಸವಾಲಿನ ಪ್ರಶ್ನೆಗಳಿಗೆ ಉತ್ತರಿಸಲು ಕಾಂಗ್ರೆಸ್ ಅಶಕ್ತವಾಗಿದೆ ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ರಾಜಕೀಯ ಭವಿಷ್ಯ ನಿನಾ೯ಮವಾಗಲಿದೆ ಸರಿಯಾದ ಕ್ಷೇತ್ರಕ್ಕಾಗಿ ಸಿದ್ದರಾಮಯ್ಯ ಈಗ ಪರದಾಡುತ್ತಿದ್ದಾರೆ.ಬಾದಾಮಿಯಲ್ಲಿ ಠೇವಣಿಯೇ ಸಿಗೋದಿಲ್ಲ ಎಂದು ಈಶ್ವರಪ್ಪ ಲೇವಡಿ ಮಾಡಿದರು.