ಗೋವಾದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ ಆರೋಪಿ ಸೇರಿದಂತೆ ಮೂವರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.ಸಿದ್ದಾಪುರದ ಹೈಸ್ಕೂಲ್ ಪೈಸರಿ ನಿವಾಸಿ ಶಾಜಿ ಸೇರಿದಂತೆ ಕೇರಳ ರಾಜ್ಯದ ಶರೀಫ್ ಮತ್ತು ಶ್ರೀತು ಮತ್ತಿಬ್ಬರು ಬಂಧಿತ ಆರೋಪಿಗಳು.
ಗೋವಾದ ರಾಜಧಾನಿ ಪಣಾಜಿ,ಪೆರನಮ್ ಸೇರಿದಂತೆ ಸುತ್ತಮುತ್ತಲಿನ ಪ್ರವಾಸಿತಾಣಗಳಲ್ಲಿ, ಜನನಿಬಿಡ ಪ್ರದೇಶದಲ್ಲಿ ಪ್ರವಾಸಿಗರನ್ನು ಗುರಿಯಾಗಿರಿಸಿ ಹಣ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದರು.
ಬಂಧಿತರಿಂದ ಅಪಾರ ಪ್ರಮಾಣದ ಹಣ,ಕ್ಯಾಮರಾ, ಲೆನ್ಸ್, ಮೊಬೈಲ್,ಲ್ಯಾಪ್ ಟಾಪ್,ಆಭರಣ ಸೇರಿದಂತೆ 13 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ.