ಕಳೆದ ಶುಕ್ರವಾರ ದಿಂದ ಮೂರು ದಿನಗಳ ವಾರಾಂತ್ಯ ಮುಗಿಸಿ ಕೊಡಗಿನತ್ತ ಪ್ರವಾಸಿಗರು ಸೋಮವಾರದ ದೈನಂದಿನ ಕೆಲಸಕ್ಕೆ ತೆರಳುತ್ತಿದ್ದಾರೆ.

ಪುಟ್ಟ ಕಾರಿನಿಂದ ಹಿಡಿದು, ಐಷಾರಾಮಿ ಕಾರು, ಟಿ.ಟಿ ವಾಹನ, ಸುಪರ್ ಬೈಕುಗಳು ತಮ್ಮ ಊರಿನತ್ತ ಮರಳುತ್ತಿದ್ದರೆ, ಇತ್ತ ಸಂಕಷ್ಟ ಎದರಿಸುತ್ತಿರುವುದು ಮಾತ್ರ ಕುಶಾಲನಗರ ಜನತೆ.

ಮಡಿಕೇರಿ-ಮೈಸೂರು ನಡುವಿನ ರಾಷ್ಟ್ರೀಯ ಹೆದ್ದಾರಿ 275 ನಲ್ಲಿ ಸಾಲು ಸಾಲು ವಾಹನಗಳು ಮತ್ತೆ ತಮ್ಮ ಊರಿನತ್ತ ವಾಪಸ್ಸಾಗುತ್ತಿದ್ದರೆ, ವಾಣಿಜ್ಯ ಪಟ್ಟಣ ಕುಶಾಲನಗರದಲ್ಲಿ ಊಟಕ್ಕಾಗಿ,ಶಾಪಿಂಗ್ ಜೊತೆಗೆ ವಾಹನ ದಟ್ಟಣೆಯಿಂದ ರಸ್ತೆ ದಾಟುವುದಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಮಾತ್ರ ಸಂಚಾರ ನಿಯಂತ್ರಣ ಮಾಡಲು ಹರಸಾಹಸ ಪಡುತ್ತಿದ್ದಾರೆ.