ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಅಜ್ಜಾವರದಲ್ಲಿ ಕೃಷಿ ಹೊಂಡಕ್ಕೆ ಬಿದ್ದ ನಾಲ್ಕು ಆನೆಗಳನ್ನು ಅರಣ್ಯ ಇಲಾಖೆ ರಕ್ಷಣೆ ಮಾಡಿ ಕಾಡಿಗೆ ಬಿಡಲಾದರೂ ಹಿಂಡಿನಲ್ಲಿದ್ದ ಮೂರು ತಿಂಗಳ ಮರಿಯಾನೆ ತನ್ನ ತಾಯಿಯೊಂದಿಗೆ ತೆರಳದೆ ಮತ್ತೆ ಒಂಟಿಯಾಗಿ ಗ್ರಾಮದತ್ತ ಬರುತ್ತಿರುವುದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಕಳೆದ ಗುರುವಾರ ಮರಿಯನ್ನು ರಕ್ಷಿಸಿ ಅರಣ್ಯ ಸಿಬ್ಬಂದಿಗಳು ಪೋಷಣೆ ಮಾಡಿದ್ದು, ಅತ್ತ ತಾಯಿಯೂ ಬರುತ್ತಿಲ್ಲ, ಇತ್ತ ಮರಿಯಾನೆ ಅಮ್ಮನ ಬಳಿಯೂ ತೆರೆದ ಹಿನ್ನಲೆಯಲ್ಲಿ ಮರಿಯಾನೆಯನ್ನು ದುಬಾರೆ ಸಾಕಾನೆ ಶಿಬಿರಕ್ಕೆ ವರ್ಗಾಯಿಸಲಾಗಿದೆ.