ಶಾಲೆಗೆ ಸರಿಯಾಗಿ ತೆರಳದ ಹಿನ್ನಲೆಯಲ್ಲಿ ಪೋಷಕರು ಬುದ್ಧಿಹೇಳಿದಕ್ಕೆ ಯುವಕನೋರ್ವ ನೇಣಿಗೆ ಶರಣಾದ ಘಟನೆ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಿವಕುಮಾರ್ ಎಂಬುವವರ ಪುತ್ರ ಫಾತಿಮಾ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ರಿಜುಕುಮಾರ್ (14) ಆತ್ಮಹತ್ಯೆಗೆ ಶರಣದವನು. ಘಟನೆ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.