ಗುಡ್ ಫ್ರೈಡೆ, ಎರಡನೇ ಶನಿವಾರ, ಭಾನುವಾರದಿಂದ ವಾರಾಂತ್ಯದಲ್ಲಿ ಸಾಲು ಸಾಲು ರಜೆ ಇರುವ ಹಿನ್ನಲೆಯಲ್ಲಿ ಕುಶಾಲನಗರ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿತಾಣ ದುಬಾರೆ, ಕಾವೇರಿ ನಿಸರ್ಗಧಾಮ ಮತ್ತು ಬೈಲಕುಪ್ಪೆಯ ಟಿಬೆಟಿಯನ್ ಕ್ಯಾಂಪಿನತ್ತ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ದುಬಾರೆಯ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿರುವ ಹಿನ್ನಲೆಯಲ್ಲಿ ಬೋಟ್ ಸಂಚಾರವಿಲ್ಲದಿದ್ದರೂ ನದಿಯ ಕಲ್ಲುಗಳ ಮೂಲಕ ಕ್ಯಾಂಪಿನತ್ತ ತೆರಳುತ್ತಿದ್ದು, ಅಪಾಯಕಾರಿ ಸ್ಥಳದಲ್ಲಿ ನಾಮಫಲಕ, ರೆಡ್ಟೇಪ್ ಅಳವಡಿಸಲಾಗಿದೆ. ಇತ್ತ ನಿಸರ್ಗಧಾಮದಲ್ಲೂ ಪ್ರವಾಸಿಗರ ವಾಹನಗಳು ಹೆಚ್ಚಾಗಿದ್ದು, ವಾಹನ ದಟ್ಟಣೆ ಉಂಟಾಗುತ್ತಿದೆ.