ಕಾಡಾನೆಯೊಂದು ದಾಳಿ ಮಾಡಿ ನಿಲ್ಲಿಸಿದ್ದ ಕಾರನ್ನು ರಾಷ್ಟ್ರೀಯ ಹೆದ್ದಾರಿಗೆ ತಳ್ಳಿಕೊಂಡು ಬಂದಿರುವ ಘಟನೆ ಇಂದು ನಸುಕಿನ ವೇಳೆ 4.30ರ ಸಮಯದಲ್ಲಿ ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆಯ ಮೆಟ್ನಳದಲ್ಲಿ ನಡೆದಿದೆ.
ಮೆಟ್ನಳ್ಳದ ಹೆದ್ದಾರಿ ಬದಿಯ ಖಾಲಿ ಜಾಗದಲ್ಲಿ ಸ್ವಿಫ್ಟ್ ಮತ್ತು ಸ್ಯಾಂಟ್ರೋ ಕಾರುಗಳು ನಿಲುಗಡೆಗೊಂಡಿದ್ದು, ಮೊದಲು ಕಾಡಾನೆ ಸ್ಯಾಂಟ್ರೋ ಕಾರಿನ ಮೇಲೆ ಎರಗಿದೆ. ನಂತರ ಸಾನಿಪ್ ಎಂಬುವವರ ಸ್ವಿಫ್ಟ್ ಕಾರಿನ ಮೇಲೆ ದಾಳಿ ಮಾಡಿ ಹೆದ್ದಾರಿವರೆಗೆ ತಳ್ಳಿಕೊಂಡು ಬಂದಿದೆ. ಕಾರನ್ನು ಅಲ್ಲಿಯೇ ಬಿಟ್ಟು ಕಾಡಾನೆ ಅಲ್ಲಿಂದ ಕಾಲ್ಕಿತ್ತಿದೆ.ಘಟನೆಯಲ್ಲಿ ಎರಡು ಕಾರುಗಳು ಹಾನಿಗೊಳಗಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ಪರಿಶೀಲನೆ ನಡೆಸಲಾಗಿದೆ.