ಕಾಂಗ್ರೆಸ್ ಟಿಕೇಟ್ ದೊರಕದೇ ಇದ್ದಲ್ಲಿ ಜೆಡಿಎಸ್ ಗೆ ಜೀವಿಜಯ ತೆರಳಲಿದ್ದಾರೆ ಎಂಬ ವದಂತಿಗೆ ಮಾಜಿ ಸಚಿವ ಜೀವಿಜಯ ಸ್ಪಷ್ಟನೆ ನೀಡಿದ್ದಾರೆ.
“ತಾನು ಈಗಾಗಲೇ ಜೆಡಿಎಸ್ ತೊರೆದು ಬಂದಿದ್ದು, ಮತ್ತೆ ಖಂಡಿತವಾಗಿ ಜೆಡಿಎಸ್ ಪಕ್ಷಕ್ಕೆ ಹೋಗಲಾರೆ. ಕುಮಾರಸ್ವಾಮಿ ಜತೆ ಯಾವುದೇ ಸಂಪಕ೯ದಲ್ಲಿಲ್ಲ, ಮಡಿಕೇರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯಥಿ೯ ಆಕಾಂಕ್ಷಿ ಹೌದು ಆದರೆ ಹೈಕಮಾಂಡ್ ನಿಧಾ೯ರಕ್ಕೆ ತಾನು ಬದ್ಧನಾಗಿದ್ದೇನೆ. ಸ್ಪಧೆ೯ಗೆ ಅವಕಾಶ ದೊರೆತಲ್ಲಿ ಗೆಲ್ಲುವ ವಿಶ್ವಾಸವಿದ್ದು, ಬೆಂಬಲಿಗರು ಸ್ಪಧೆ೯ಗೆ ಒತ್ತಾಯಿಸುತ್ತಿದ್ದಾರೆ. ಸೋಮವಾರದೊಳಗೆ ಹೈಕಮಾಂಡ್ ಮಡಿಕೇರಿ ಕ್ಷೇತ್ರದ ಅಭ್ಯಥಿ೯ ಯಾರೆಂದು ನಿಧ೯ರಿಸಲಿದೆ.” ಎಂದು ಅವರು ತಿಳಿಸಿದ್ದಾರೆ.