(ನೈಜ ಘಟನೆ ಆಧಾರಿತ ಕಥೆ)

   

ಅದು ಜುಲೈ 12, 2019 ರಾತ್ರಿ ಸಮಯ. ಬೆಳಕು ಮಂಕಾಗಿ ಕತ್ತಲ ಚಂದ್ರನಿರದ ಇರುಳು. ಫ್ಲೋರಿಡಾ ಪೊಲೀಸ್ ಠಾಣೆಗೆ ಟೆಲಿಫೋನ್ ಕರೆಯೊಂದು ಬರುತ್ತದೆ. ಅತ್ತಲಿನಿಂದ ಮಾತನಾಡಿದ ಆ್ಯಡಂ ಕ್ರಿಸ್ಪೋ ಎಂಬಾತ,

‘ನನ್ನ ಪ್ರೇಯಸಿ ಸಿಲ್ವಿಯಾ ಗಾಲ್ವಾ ಈಟಿಯನ್ನು ಎದೆಗೆ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದಯವಿಟ್ಟು ಬೇಗ ಬನ್ನಿ’ ಎಂದು ಅವಸರದಿಂದ ಮನೆಯ ವಿಳಾಸ ಹೇಳಿದ.

ಪೊಲೀಸರು ಘಟನಾ ಸ್ಥಳಕ್ಕೆ ಬಂದು ಮನೆ ಹೊಕ್ಕಿದರೆ ಕಂಡಿದ್ದ ರಕ್ತಸಿಕ್ತವಾದ ಸಿಲ್ವಿಯಾ ಗಾಲ್ವಾಳ ಮೃತದೇಹ. ನೆತ್ತರಿನ ಮಡುವಿನಲ್ಲಿ ನಿರ್ಜೀವ ಶವವಾಗಿ ಬಿದ್ದಿದ್ದಳು‌. ಅಲ್ಲೇ ಕೋಣೆಯ ಮೂಲೆಯಲ್ಲಿ ಗೋಡೆಗೆ ಒರಗಿಕೊಂಡು ಮುದುರಿಕೊಂಡಿದ್ದ ಅವಳ ಪ್ರಿಯತಮ ಆ್ಯಡಂ ಕ್ರಿಸ್ಟೋ‌. ತೀರಾ ಭಯಭೀತ ಹಾಗು ವಿಚಲಿತನಾಗಿದ್ದ ಅವನು ನಡುಗುತ್ತಿದ್ದ.

ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳದ ಸುತ್ತಲೂ ಪೊಲೀಸ್ ಬ್ಯಾರಿಯರ್ ಟೇಪ್ ಹಾಕಿ, ತನಿಖೆಯನ್ನು ಆರಂಭಿಸಲು ಶುರು ಮಾಡಿದರು. ಸುತ್ತಲೂ ನೆರೆದಿದ್ದ ಜನರನ್ನು ದೂರ ಹೋಗಲು ಹೇಳಿ ಪ್ರಾಥಮಿಕ ತನಿಖೆ ಮಾಡಲು ಅಣಿಯಾದರು. ಘಟನಾ ಸ್ಥಳದ ವಿವರಗಳಿರುವ ಪೊಟೋ ವೀಡಿಯೋಗಳನ್ನು ದಾಖಲೀಕರಣ ಮಾಡಿದರು.

ಕೊಲೆಗೆ ಬಳಸಲಾಗಿದ್ದ ಅಸ್ತ್ರ ‘ಈಟಿ

ಪೊಲೀಸರು ಸ್ಥಳ ಪರಿಶೀಲನೆಯಲ್ಲಿ ಕೊಲೆ ನಡೆದಾಗ ಅವಳ ರಕ್ತದ ಕಲೆಗಳು ಹರಡಿದ ರೀತಿಯ ಬಗ್ಗೆ ಗಾಢ ಅಧ್ಯಯನ ನಡೆಸಿದರು. ಸ್ಥಳದಲ್ಲಿ ಸಿಲ್ವಿಯಾ ಗಾಲ್ವಾಳ ಎದೆಗೆ ಇರಿತವಾಗಿದ್ದ ಅಸ್ತ್ರವಾದ ಈಟಿಯನ್ನು ಸಂಗ್ರಹಿಸಲಾಯಿತು. ಬೆರಳಚ್ಚು ತಜ್ಞರು ಎಲ್ಲವನ್ನೂ ಸೂಕ್ಷ್ಮವಾಗಿ ಸಂಗ್ರಹ ಮಾಡಿಕೊಂಡು ತನಿಖೆಗೆ ಸಿದ್ಧವಾದರು.

ಸಾಂದರ್ಭಿಕ ಚಿತ್ರ

ಅಕ್ಕಪಕ್ಕದ ಮನೆಯವರನ್ನು ವಿಚಾರಿಸಿದಾಗ, ಸಿಲ್ವಿಯಾ ಸಾಯುವ ದಿನ ಆ್ಯಡಮ್ ಜೊತೆಗೆ ಜೋರಾಗಿ ಜಗಳ ಆಡಿದ್ದಳು. ವಾಗ್ವಾದ ತಿಳಿಯಾಗದೆ, ಮಾತಿನ ಚಕಮಕಿ ತೀವ್ರಗೊಂಡಿತು ಎಂಬ ವಿವರ ಪೊಲೀಸರಿಗೆ ದೊರೆಯುತ್ತದೆ.


Advertisement

ಕೆಲವು ದಿನಗಳ ಬಳಿಕ ದೊರೆತ ಅಟೋಪ್ಸಿ ವರದಿಯಲ್ಲಿ ಈಟಿಯಿಂದಾಗಿ ಆದ ಇರಿತದಿಂದ ಸಿಲ್ವಿಯಾ ಎದೆ ಭಾಗದಲ್ಲಿ ಮಾರಣಾಂತಿಕ ಗಾಯವಾಗಿತ್ತು. ಆಳವಾದ ಗಂಭೀರ ಇರಿತವಾಗಿದ್ದರಿಂದ ಸಾವು ಸಂಭವಿಸಿದೆ ಎಂಬ ಮಾಹಿತಿ ದೊರೆಯುತ್ತದೆ.

ಘಟನಾ ಸ್ಥಳದಲ್ಲಿ ದೊರೆತ ಬೆರಳಚ್ಚುಗಳು, ರಕ್ತದ ಕಲೆಗಳು ಹಾಗು ಇತರೆ ವಿಧಿ ವಿಜ್ಞಾನದ ಸಾಕ್ಷಿಗಳು ಎಲ್ಲವೂ ಅನುಮಾನಾಸ್ಪದವಾಗಿದ್ದವು. ಸಿಲ್ವಿಯಾ ಹೃದಯ ಭಾಗದಲ್ಲಿ ಆದ ಈಟಿಯ ಏಟು ಬಲವಾಗಿತ್ತು‌. ಆ ಈಟಿಯ ಮೇಲೆ ಇಬ್ಬರದೂ ಬೆರಳಚ್ಚು ಪತ್ತೆ ಆಗುತ್ತದೆ.


Advertisement

ತನಿಖಾಧಿಕಾರಿ ಆ್ಯಡಂ ಬಳಿ ಘಟನೆಯ ವಿವರ ಕೇಳಿದಾಗ,
‘ನನಗೂ ಅವಳಿಗೂ ತೀರಾ ಮಾತಿನ ಚಕಮಕಿ ನಡೆಯಿತು. ಅವಳು ತನ್ನ ಸ್ನೇಹಿತರೊಂದಿಗೆ ನೈಟ್ ಔಟ್ ಮುಗಿಸಿ ಬಂದ ನಂತರ ಪರಸ್ಪರ ಗಲಾಟೆ ಶುರು ಆಗಿತ್ತು. ಮುನಿಸಿನೊಂದಿಗೆ ಹೋಗಿ ಮಂಚದ ಮೇಲೆ ಮಲಗಿದ್ದ ಸಿಲ್ವಿಯಾಳ ಎರಡೂ ಪಾದಗಳನ್ನು ಹಿಡಿದು ಎಳೆಯಲಾರಂಭಿಸಿದ್ದೆ. ಮಂಚದ ಪಕ್ಕದಲ್ಲಿದ್ದ ಅಲಂಕಾರಿಕ ವಸ್ತುವಂತೆ ಇರಿಸಿದ್ದ ಈಟಿಯನ್ನು ತೆಗೆದುಕೊಂಡು ಅವಳ ಎದೆಗೆ ಇರಿದುಕೊಂಡು ಬಿಟ್ಟಳು‌. ತಕ್ಷಣ ನಾನು ಅವಳನ್ನು ಕಾಪಾಡುವ ಪ್ರಯತ್ನ ಮಾಡಿದೆ‌. ಅವಳ ಸ್ನೇಹಿತರಿಗೂ ಕರೆ ಮಾಡಿದೆ‌. ನಂತರ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಅನ್ನುವಷ್ಟರಲ್ಲಿ ಅಸುನೀಗಿದಳು. ನಂತರ ಪೊಲೀಸ್ ಸ್ಟೇಷನ್ ಗೆ ಕರೆ ಮಾಡಿ ನಿಮಗೆ ವಿಷಯ ತಿಳಿಸಿದೆ’. ಎಂದು ಮ್ಲಾನವಾಗಿ ಮೆಲು ಧ್ವನಿಯಲ್ಲಿ ಉಸುರಿದ‌.


Advertisement

ಇಷ್ಟು ಸಾಕ್ಷಿ, ಪುರಾವೆಗಳ ಲಭ್ಯವಾದರೂ, ಆ್ಯಡಮ್ ಈ ಕೊಲೆಯನ್ನು ಮಾಡಿದ್ದಾನೆ ಎಂದು ನಿಖರವಾಗಿ ಹೇಳಲು ಪುಷ್ಠಿ ಕೊಡುವ ಏನೂ ಲಭ್ಯವಾಗಿರಲಿಲ್ಲ‌. ಆಗಲೇ ಪೊಲೀಸರಿಗೆ ಕೊಲೆ ನಡೆದ ಕೊಠಡಿಯಲ್ಲಿ ದೊರೆತಿದ್ದು,Amazon Echo Speaker Device. ಅದಕ್ಕೆ ಅಲೆಕ್ಸಾ ಎಂದು ಜನ ಕರೆಯುತ್ತಾರೆ.

Amazon Echo Speaker Device with Alexa feature

ಪೊಲೀಸರು ಅದನ್ನು ಸಾಕ್ಷಿಯಾಗಿ ಪರಿಗಣಿಸಿ, ಅದರ ಆಡಿಯೋ ರೆಕಾರ್ಡಿಂಗ್ ಗಳನ್ನು ಸಂಗ್ರಹಿಸಿ ಕೊಡುವಂತೆ ಅದರ ಉತ್ಪಾದನಾ ಸಂಸ್ಥೆಯಾದ ಅಮೇಜಾ಼ನ್ ಗೆ ಮನವಿ ಮಾಡಿಕೊಂಡರು. Alexa ಮಾಲಿಕರ ಕಮಾಂಡ್ ಗಳನ್ನು ಆಲಿಸಿ, ಪಾಲಿಸುವ ತಂತ್ರಜ್ಞಾನವಿದ್ದ ಆಡಿಯೋ ಸ್ಪೀಕರ್. ಹಾಗಾಗಿ ಅದು ಮಾಲಿಕರ ಎಲ್ಲಾ ಮಾತುಗಳನ್ನು ರೆಕಾಡ್೯ ಮಾಡಿಕೊಂಡು ಅದಕ್ಕೆ ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡುತ್ತದೆ. ಅದರ ಪೇಟೆಂಟ್ ಅಲ್ಲಿ ಕೊಡಲಾದ ವಿವರಗಳನ್ನು ಸವಿಸ್ತಾರವಾಗಿ ಓದಿ ತಿಳಿದುಕೊಂಡಿದ್ದ ಪೊಲೀಸರು ಈ ಮನವಿಯನ್ನು ಅಮೇಜ಼ಾನ್ ಕಂಪೆನಿಗೆ ನಂತರವೇ ಇಟ್ಟಿದ್ದರು.


Advertisement

ಆದರೆ ಅಮೇಜ಼ಾನ್ ಕಂಪೆನಿ ಅದು ಗ್ರಾಹಕರ ಖಾಸಗಿ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಿದಂತೆ ಆಗುತ್ತದೆ.‌ಖಾಸಗಿ ಹಕ್ಕಿಗೆ ಚ್ಯುತಿ ಆಗುತ್ತದೆ ಎಂಬ ವಿವರಣೆ ನೀಡಿ ಬೇಡಿಕೆಯನ್ನು ಸುತ್ತಾರಾಂ ತಿರಸ್ಕರಿಸುತ್ತದೆ.

ಆಗ ಪೊಲೀಸರು ಅಲೆಕ್ಸಾ ಡಿವೈಸ್ ಅಲ್ಲಿ ನೀಡಲಾದ ಪೇಟೆಂಟ್ ಮಾಹಿತಿಗಳನ್ನು ಆಧರಿಸಿ,ಕೊಲೆಯ ಸಂದರ್ಭ ಅಲೆಕ್ಸಾ ಸಂಗ್ರಹಿಸಿರಬಹುದಾದ ಆಡಿಯೋ ರೆಕಾರ್ಡಿಂಗ್ ಗಳನ್ನು ಸಂಗ್ರಹಿಸಿಕೊಡಲು ನ್ಯಾಯಾಲಯದ ಮೊರೆ ಹೋಗುತ್ತಾರೆ‌. ಆಗ ನ್ಯಾಯಾಲಯವು ಸಚ್೯ ವಾರೆಂಟ್  ಹೊರಡಿಸಿ, ಅಮೇಜಾ಼ನ್ ಕಂಪೆನಿಗೆ ತನಿಖೆಗೆ ಸಹಕರಿಸುವಂತೆ ಸೂಚಿಸುತ್ತದೆ.

ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದ ಸಂದರ್ಭ ಆ್ಯಡಂ ಕ್ರಿಸ್ಟೋ 65 ಸಾವಿರ ಡಾಲರ್ ಗಳ ಬಾಂಡ್ ಬರೆದುಕೊಟ್ಟು ಬೇಲ್ ಮೇಲೆ ಹೊರ ಬಂದಿದ್ದ. ಆದರೆ ಈ ಅಲೆಕ್ಸಾದ ಸುಳಿವು ಅವನಿಗೆ ಅಪರಾಧಿಯ ಪಟ್ಟ ಹೊತ್ತುಕೊಳ್ಳಲು ಸಾಕ್ಷಿ ನುಡಿದಿತ್ತು. ಇದನ್ನು ಸೆಕೆಂಡ್ ಡಿಗ್ರಿ ಮರ್ಡರ್ ಎಂದು ನ್ಯಾಯಾಲಯವು ನಿರ್ಧರಿಸಿತು.

ಹಂತಕ ಪ್ರಿಯಕರ ಆ್ಯಡಂ ಕ್ರಿಸ್ಟೋ

ಅಮೇಜ಼ಾನ್ ಕಂಪೆನಿ ಬೇರೆ ದಾರಿ ಇರದೆ, ಆ ಪ್ರಕರಣಕ್ಕೆ ಸಂಬಂಧಿಸಿದ ಅಲೆಕ್ಸಾ ಉಪಕರಣದ ಎಲ್ಲಾ ರೆಕಾರ್ಡಿಂಗ್ ಗಳನ್ನು ಪೊಲೀಸರಿಗೆ ನೀಡುತ್ತದೆ.


Advertisement
Advertisement

ಅದರಲ್ಲಿ ಪೊಲೀಸರಿಗೆ ಅವರ ನಡುವೆ ನಡೆದ ಎಲ್ಲಾ ವಾದ-ವಿವಾದ, ಜಗಳ, ಪ್ರಾಣ ಉಳಿಸಿಕೊಳ್ಳಲು ಸಿಲ್ವಿಯಾ ಓಡಾಡಿದ ಸದ್ದು, ಇರಿತಕ್ಕೆ ಒಳಗಾದ ಸಿಲ್ವಿಯಾ ಗಾಲ್ವಾಳ ಹೃದಯವಿದ್ರಾವಕ ನರಳಾಟ, ಚೀರಾಟ ಎಲ್ಲವೂ ಸಿಕ್ಕಿತ್ತು.

ಸಿಲ್ವಿಯಾ ಗಾಲ್ವಾ ಹಾಗು ಹಂತಕ ಪ್ರಿಯಕರ ಆ್ಯಡಂ ಕ್ರಿಸ್ಟೋ

ಅತಿ ಆಪ್ತವಾಗಿದ್ದ ಪ್ರಿಯತಮನೇ ಸಿಲ್ವಿಯಾ ಗಾಲ್ವಾ ಎಂಬ ಮುದ್ದು ಹುಡುಗಿಯ ಹೃದಯಕ್ಕೆ ಈಟಿಯಲ್ಲಿ ಇರಿದಿದ್ದ. ಮುಂಗೋಪದ ಕೈಗೆ ಅವನ ಬುದ್ಧಿ ಕೊಟ್ಟು ಅಮಾನುಷವಾಗಿ ಅವಳನ್ನು ನಿರ್ದಯತೆಯೊಂದಿಗೆ ಕೊಂದು ಮುಗಿಸಿದ್ದ. ಅಲೆಕ್ಸಾ ಎಂಬ ಒಂದು ನಿರ್ಜೀವ ತಾಂತ್ರಿಕ ಉಪಕರಣ ಅವಳ ಸಾವಿನ ಸಾಕ್ಷಿ ನುಡಿದು ಮಡಿದ ಹೆಣ್ಣು ಮಗಳಿಗೆ ನ್ಯಾಯ ಸಿಗುವಂತೆ ಮಾಡಿತ್ತು.