ಕಾವೇರಿ ಪದವಿ ಮತ್ತು ಕಾವೇರಿ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಜನರಲ್ ಕೆ.ಎಸ್ಸ್.ತಿಮ್ಮಯ್ಯನವರ ನಿನ್ನೆ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಭಾರತದ ರಕ್ಷಣಾ ಕ್ಷೇತ್ರಕ್ಕೆ ತನ್ನದೆ ಆದ ಕೊಡುಗೆ ನೀಡಿದ ಜನರಲ್ ಕೊಡಂದೇರ ಸುಬ್ಬಯ್ಯ ತಿಮ್ಮಯ್ಯ ಅವರ ೧೧೭ ನೇ ಜನ್ಮದಿನವನ್ನು ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಉಪಪ್ರಾಂಶುಪಾಲರಾದ ಡಾ.ಎ.ಎಸ್ಸ್.ಪೂವಮ್ಮದೇಶದ ರಕ್ಷಣಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಅಪ್ರತಿಮ ವೀರಸೇನಾನಿ ಅಂದಿನ ದಿನಗಳಲ್ಲಿ ಕಾಶ್ಮೀರ ಸಮಸ್ಯೆಯನ್ನು ಇತ್ಯರ್ಥ ಪಡಿಸಲು ಶ್ರಮಿಸಿದರು.ಭಾರತ ಪಾಕಿಸ್ತಾನ ಸಂದಿಗ್ಧ ಸಂದರ್ಭದಲ್ಲಿ ಸೇನಾಕ್ಷೇತ್ರದಲ್ಲಿ ಚತುರತೆಯಿಂದ ಕಾರ್ಯನಿರ್ವಹಿಸಿದರು.ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡ ಇವರು 1957 ರಲ್ಲಿ ಭಾರತೀಯ ಸೇನೆಯ ಆರನೇ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು,ಸತತ 35 ವರ್ಷಗಳ ಕಾಲ ಭಾರತೀಯ ಸೇನಾ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದರು.ಬರ್ಮಾ ಯುದ್ದದ ದೈರ್ಯ, ಪರಾಕ್ರಮ ಹಾಗೂ ಚಾಣಾಕ್ಷತನಕ್ಕೆ ತಿಮ್ಮಯ್ಯನವರಿಗೆ ಡಿಸ್ವಿಂಗಿಶ್ಡ್ ಸರ್ವಿಸ್ ಆರ್ಡರ್ (DSO) ಇತ್ತು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ಎಂ.ಬಿ.ಕಾವೇರಪ್ಪ, ಪ್ರೋ.ಎಸ್ಸ್.ಎಸ್ಸ್.ಮಾದಯ್ಯ, ಪ್ರಾಧ್ಯಾಪಕರಾದ ಪ್ರೊ.ಭಾರತಿ, ಕ್ಯಾಪ್ಟನ್ ಬ್ರೈಟಾಕುಮಾರ್, ಲೆಫ್ಟಿನೆಂಟ್ ಅಕ್ರಂ, ಲೆಫ್ಟಿನೆಂಟ್ ಲೇಪಾಕ್ಷಿ, ಉಪನ್ಯಾಸಕರಾದ.ಪದ್ಮಾ,ಸುಜಯ್,ಶಬ್ನಾ ಸೋಮಯ್ಯ ಮತ್ತು ಎನ್.ಸಿ.ಸಿ.ಕೆಡೆಟ್ಗಳು ಹಾಜರಿದ್ದರು.