ನೆರೆಯ ಜಿಲ್ಲೆಗಳಿಂದ ಜನ ಕರೆದುಕೊಂಡು ಬಂದು ಕಾಂಗ್ರೆಸ್ಸಿಗರು ಈ ವ್ಯಾಪ್ತಿಯಲ್ಲಿ ಸಮಾವೇಶ ಮಾಡಿದ್ದು ಅದೇ ರೀತಿ ಹಣದ ಆಸೆಗೆ ಪಕ್ಷದ ಕಾರ್ಯಕರ್ತರು ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ತಿಳಿಸಿದ್ದಾರೆ.

ಬಿಜೆಪಿ ಇಂದು ನೈಜ ಕಾಯ೯ಕತ೯ರ ಬಲದಿಂದ ಈ ಸಮಾವೇಶ ಆಯೋಜಿಸಿದೆ.
ಪೊನ್ನಂಪೇಟೆಯಯಲ್ಲಿ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು ಕಳೆದ ಶನಿವಾರ ದಾವಣಗೆರೆಯಲ್ಲಿ ಬಿಜೆಪಿ ಅತ್ಯಂತ ಬೖಹತ್ ಮಟ್ಟದ ಸಮಾವೇಶ ಆಯೋಜಿಸಿದ್ದು,
ಪ್ರಧಾನಿ ಮೋದಿ ಜಗತ್ತಿನ ಗಮನ ಸೆಳೆದಿದ್ದರು ರಾಜ್ಯದಲ್ಲಿಮತ್ತೆ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ,ಆದರೆ ಕಾರ್ಯಕರ್ತರು ಬಿಜೆಪಿ ವಿರುದ್ಧ ಬೇರೆ ಬೇರೆ ಕಡೆ ಅಪಪ್ರಚಾರ ಮಾಡಲಾಗುತ್ತಿದೆ. ಜಾತೀಯ ವ್ಯವಸ್ಥೆಗೆ ಹಿಂದುತ್ವ ಆದಾರಿತ ದೇಶವನ್ನು ಒಳಪಡಿಸುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ
ಹಿಂದುತ್ವ ಉಳಿಸುವುದೇ ಬಿಜೆಪಿಯ ಗುರಿಯಾಗಿದೆ ಹಿಂದುತ್ವ ಉಳಿಸುವಲ್ಲಿ ಎಸ್ ಸಿ ಎಸ್ ಟಿ ಸಮುದಾಯದವರು ಗಮನಾಹ೯ ಕೊಡುಗೆ ನೀಡಿದ್ದಾರೆ.

ಹಿಂದುತ್ವದ ಆಧಾರದಲ್ಲಿ ಈ ಬಾರಿಯ ಚುನಾವಣೆ ನಡೆಯಲಿದೆ. ಇದೇ ಆಧಾರದಲ್ಲಿ ಕೊಡಗಿನ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವಂತೆ ರಾಬಿನ್ ಕರೆ ನೀಡಿದರು.ಇದಕ್ಕೂ ಮೊದಲು ಪಟ್ಟಣದ ಮುಖ್ಯ ದೇವಾಲಯದ ವೃತ್ತದಿಂದ ವೇದಿಕೆ ವರೆಗೆ ಅಂಬೇಡ್ಕರ್ ಭಾವಚಿತ್ರದೊಂದಿಗೆ ಬೃಹತ್ ಮೆರವಣಿಗೆ ಏರ್ಪಡಿಸಲಾಗಿತ್ತು.

ಕಾಯ೯ಕ್ರಮದಲ್ಲಿ ಶಾಸಕ ಕೆ.ಜಿ.ಬೋಪಯ್ಯ, ಸುಜಾಕುಶಾಲಪ್ಪ ಪ್ರತಾಪ್, ನೆಲ್ಲೀರ ಚಲನ್, ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.