ಎಲನ್ ಮಸ್ಕ್ ತನ್ನ ದೂರದೃಷ್ಟಿಯ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಉದ್ಯಮಿಯಾಗಿ ಮಹತ್ವಾಕಾಂಶಿ ಹೆಜ್ಜೆಗಳನ್ನು ಇಡುತ್ತಿರುವುದು ಆಗಿಂದಾಗ್ಗೆ ಸುದ್ದಿ ಆಗುತ್ತಲೇ ಇರುತ್ತದೆ. ಕಠಿಣಾತಿ ಕಠಿಣವಾದ ಸವಾಲುಗಳು ಎದುರಾದರೂ ಅವುಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕ್ರಾಂತಿಕಾರಕ ಉದ್ಯಮಿಯಾಗಿ ರೂಪುಗೊಳ್ಳುತ್ತಿದ್ದಾರೆ. ಈಗ ಅವರು ಹಾಗೆ ಮತ್ತೆ ಸುದ್ದಿಯಲ್ಲಿರುವುದು ಟೆಸ್ಲಾ ಲಾಂಚ್ ಮಾಡಿರುವ ಮೊಬೈಲ್ ಫೋನ್ ಬಗ್ಗಿನ ಬಲವಾಗಿ ಹರಡಿರುವ ಗುಮಾನಿಯಿಂದ…
ಟೆಸ್ಲಾ ಕಂಪೆನಿ “ಮೊಡಲ್ Pi” ಎಂಬ ಮೊಬೈಲನ್ನು ಮಾರುಕಟ್ಟೆಗೆ ಸದ್ಯದಲ್ಲೇ ಇಳಿಸಲಿದೆ ಎಂಬ ಗುಮಾನಿ ದೊಡ್ಡದಾಗಿ ಹರಡಿ ಎಲೊನ್ ಮಸ್ಕ್ ಮತ್ತೆ ಸುದ್ದಿಯಲ್ಲಿ ಇರುವಂತೆ ಮಾಡಿದೆ…!
ಬರಿಯ ಬಿಡುಗಡೆ ಬಗ್ಗೆ ಮಾತ್ರವಲ್ಲದೆ, ಗಾಳಿ ಸುದ್ದಿ ಈಗ ಅದರ ಗುಣಲಕ್ಷಣಗಳ ಬಗ್ಗೆಯೂ ವ್ಯಾಪಕವಾಗುತ್ತಿದೆ. ಹೊಸ ಟೆಸ್ಲಾ ಮೊಬೈಲ್ ಹೀಗಿರಲಿದೆ ಹಾಗಿರಲಿದೆ ಎಂಬ ಊಹಾಪೋಹಗಳು ಪ್ರಸಿದ್ಧಿ ಪಡೆಯುತ್ತಿದೆ. ಎಲೆನ್ ಮಸ್ಕ್ ಕಂಪೆನಿಯಿಂದ ಯಾವುದೇ ಅಧಿಕೃತ ಆದೇಶ, ಆಕರ್ಷಕ ಜಾಹಿರಾತುಗಳು ಬಿಡುಗಡೆ ಆಗದಿದ್ದರೂ, ಹವಾ ಎಬ್ಬಿಸುತ್ತಿದೆ ಟೆಸ್ಲಾ. ಇನ್ನೇನಾದರೂ ನಿಜವಾಗಿಯೂ ತನ್ನ ಮೊಬೈಲ್ ಮಾರುಕಟ್ಟೆಗೆ ತಂದು ಬಿಟ್ಟರೆ, Game Changer ಆಗುವ ಎಲ್ಲಾ ಮುನ್ಸೂಚನೆಗಳೂ ಕಾಣುತ್ತಿದೆ.
ಈ ಬಗ್ಗೆ ಈಗಾಗಲೇ ಚರ್ಚೆಗಳು ವ್ಯಾಪಕವಾಗುತ್ತಿದ್ದು, ಟೆಸ್ಲಾ ಕಂಪೆನಿಯ “ಮೊಡಲ್ Pi” ಈ ಕೆಳಗಿನ ಗುಣಲಕ್ಷಣಗಳನ್ನು ಹೊಂದಿರಲಿವೆ ಎಂದು ಅಂದಾಜಿಸಲಾಗುತ್ತಿದೆ.
*ಸ್ಪೇಸ್ ಎಕ್ಸ್ ನ ಸ್ಟಾರ್ ಲಿಂಕ್ ಉಪಗ್ರಹಗಳ ಮೂಲಕ ಜಾಗತಿಕ ಇಂಟರ್ನೆಟ್ ಸಂಪರ್ಕವನ್ನು ಹೈ ಸ್ಪೀಡ್ ಅಲ್ಲಿ ಒದಗಿಸುವುದು.
*ಸೌರ ಚಾರ್ಜಿಂಗ್ ಸಾಮರ್ಥ್ಯಗಳನ್ನು ಬಳಸುವುದು. ಸೂರ್ಯನ ಶಾಕದಿಂದ ಆದಷ್ಟು ಬೇಗ ಮೊಬೈಲ್ ಚಾಜ್೯ ಆಗುವಂತೆ ತಂತ್ರಜ್ಞಾನವನ್ನು ಅಳವಡಿಸಿರುವುದು.
*ರಿಮೋಟ್ ಕಂಟ್ರೋಲ್ ಹಾಗು ಟೆಸ್ಲಾ ಕಾರಿನೊಂದಿಗೆ ಅದರ ಮೇಲ್ವಿಚಾರಣೆಗೆ ಬೆಸೆಯುವುದು.
*ತಲ್ಲೀಣತೆಯನ್ನು ಉಂಟು ಮಾಡುವ ಅನುಭವಕ್ಕಾಗಿ ಸುಧಾರಿತ AR ಮತ್ತು VR ಸಾಮರ್ಥ್ಯಗಳನ್ನು ಅಳವಡಿಸಿರುವುದು.
*ಬ್ಲಾಕ್ ಚೇನ್ ಆಧರಿತ ಎನ್ಸ್ ಕ್ರಿಪ್ಷನ್ ಸೇರಿದಂತೆ ದೃಢವಾದ ಭದ್ರತಾ ವೈಶಿಷ್ಟ್ಯಗಳನ್ನು ಅಳವಡಿಸುವುದು.
ಮೊದಲಿಗೆ ಟೆಸ್ಲಾ ಮಾಡೆಲ್ ‘Pi” ಮೊಬೈಲ್ ಯುನೈಟೆಡ್ ಸ್ಟೇಟ್ಸ್, ಯುರೋಪ್ ಅಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಕೆಲ ವಾರಗಳ ಅಂತರದಲ್ಲಿ ನಂತರ ಭಾರತಕ್ಕೂ ಬರಲಿದೆ ಎನ್ನುತ್ತಿದ್ದಾರೆ ಜನ. ಭಾರತದಲ್ಲಿ ಇದರ ದರ ಸುಮಾರು 69,999 ರೂಪಾಯಿಗಳಾಗಿರಲಿದೆ ಎಂದು ಅಂದಾಜು ಮಾಡಲಾಗುತ್ತಿದೆ.
ಒಂದು ವೇಳೆ ಈ ಊಹಾಪೋಹವೇನಾದರೂ ನಿಜವಾಗಿ ಬಿಟ್ಟರೆ, ಸ್ಯಾಮ್ ಸಂಗ್, ಆ್ಯಪಲ್, ರೆಡ್ಮಿ ಅಂತಹ ಕಂಪೆನಿಗಳಿಗೆ ದೊಡ್ಡ ಟಕ್ಕರ್ ಟೆಸ್ಲಾ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ…!