ನಿನ್ನೆ ಸಾಮಾಜಿಕ ಜಾಲ ತಾಣದಲ್ಲಿ ವೀರ ಸೇನಾನಿ ಗಳಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ವಿರುದ್ಧ ಶ್ರೀವತ್ಸ ಭಟ್ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅವಹೇಳನಕಾರಿ ಪೋಸ್ಟ್ ಮಾಡಿದ್ದ ಮಡಿಕೇರಿ ವಕೀಲ ಕೆ.ವಿ ವಿದ್ಯಾಧರ್ ಗೌಡ ಅವರನ್ನು ಪೊಲೀಸರು ಬಂಧಿಸಿ, ಮಡಿಕೇರಿಯ ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು.
ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರಿಂದ ಆಕ್ಷೇಪ ಪತ್ರ ಪಡೆದು ಆರೋಪಿಗೆ ಶರತ್ತು ಬದ್ಧ ಜಾಮೀನನ್ನು ತಡರಾತ್ರಿ ಮಂಜೂರು ಮಾಡಿದ ಹಿನ್ನಲೆ ಆರೋಪಿ ವಿದ್ಯಾಧರ್ ಬಿಡುಗಡೆ ಆಗಿದ್ದಾರೆ.
ಘಟನೆಯ ವಿರುದ್ಧ ವಿವಿಧ ಕೊಡವ ಸಮಾಜ, ಹಾಗೂ ಸಂಘಟನೆಗಳು ಈಗಾಗಲೇ ಖಂಡಿಸಿದ್ದು, ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆಗೆ ಸಜ್ಜಾಗಿವೆ ಎಂದು
ತಿಳಿದು ಬಂದಿದೆ.