ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ಕೊಡಗು ಏಕೀಕರಣ ರಂಗ ಪ್ರತಿವರ್ಷದಂತೆ ನಡೆಸಿಕೊಂಡು ಬರುತ್ತಿರುವ ಅನ್ನಪ್ರಸಾದ ಯಶಸ್ವಿಯಾಗಿ ಪೂರ್ಣಗೊಂಡಿದ್ಧು ಕಳೆದ 30 ದಿನದಲ್ಲಿ 1.60 ಲಕ್ಷ ಭಕ್ತರಿಗೆ ನೀಡಲಾಗಿದೆ. ಕಳೆದ 30 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಅನ್ನಸಂತರ್ಪಣೆ ಬೆಳಗ್ಗಿನ ಉಪಹಾರದ ಭಾಗವಾಗಿ 45 ಸಾವಿರ ಭಕ್ತರಿಗೆ ಇಡ್ಲಿ, ವಡೆ, ಉಪ್ಪಿಟ್ಟು, ಕೇಸರಿಬಾತ್ ನೀಡಲಾದರೆ ಮದ್ಯಾಹ್ನದ ಊಟಕ್ಕೆ ಅನ್ನ, ಸಾಂಬಾರ್, ಪಲ್ಯ, ಮೊಸರು, ಮಜ್ಜಿಗೆ, ಉಪ್ಪಿನಕಾಯಿ ಮತ್ತು ಪಾಯಸವನ್ನು ವಿತರಿಸಲಾಗಿದೆ. ಅಕ್ಟೋಬರ್ 16ರ ತುಲಾಸಂಕ್ರಮಣ ದಿಂದ ನವೆಂಬರ್ 16ರ ಕಿರುಸಂಕ್ರಮಣ ವರೆಗೆ ದಾನಿಗಳ ಧನಸಹಾಯ ಹಾಗೂ ಅಕ್ಕಿ, ತರಕಾರಿ ಕ್ಷೇತ್ರದ ಅನ್ನಸಂತರ್ಪಣೆಗೆ ದೊರೆತಿದ್ದು 15 ಮಂದಿ ಬಾಣಸಿಗರು ಮತ್ತು ಸಹಾಯಕ ಸಿಬ್ಬಂಧಿಗಳು ಕಾರ್ಯನಿರ್ವಾಹಿಸಿದ್ದಾರೆ.