ಆಹಾರ ಅರಸಿ ಬಂದಿದ್ದ ಕಾಡಾನೆ ಅರಣ್ಯದಂಚಿನಲ್ಲಿ ಅಳವಡಿಸಲಾಗಿರುವ ಬ್ಯಾರಿಕೇಡ್ ನ ಅಡಿಯಲ್ಲಿ ಸಿಲುಕಿ ಕೆಲ ಸಮಯ ಬಂಧಿಯಾದ ಘಟನೆ ವಾಲ್ ನೂರಿನಲ್ಲಿ ನಡೆದಿದೆ.
ಕಾಡಾನೆ ರೈಲ್ವೇ ಬ್ಯಾರಿಕೇಡ್ ನ ಅಡಿಯಿಂದ ನುಸುಳಿ ತೆವಳಿಕೊಂಡು ದಾಟಲು ಯತ್ನಿಸುತ್ತಿದ್ದಾಗ ಬೆನ್ನು ಮೂಳೆ ಬ್ಯಾರಿಕೇಡ್ ಗೆ ಬಲವಾಗಿ ತಾಗಿಕೊಂಡಿದೆ. ಅದರಿಂದ ಬಿಡಿಸಿಕೊಂಡು ಹೊರ ಬರಲಾಗದೇ ಕಾಡಾನೆ ಸಾಕಷ್ಟು ಬಸವಳಿದಿದೆ. ವಿಷಯವರಿತ ಅರಣ್ಯ ಇಲಾಖೆಯವರು ಬ್ಯಾರಿಕೇಡ್ ನ ನೆಟ್ ಬೋಲ್ಟ್ ಗಳನ್ನು ಸಡಿಲಗೊಳಿಸುವ ಮೂಲಕ ಕಾಡಾನೆಗೆ ಪುನರ್ ಜನ್ಮ ನೀಡಿದ್ದಾರೆ. “ಸಧ್ಯ ಬದುಕಿದರೆ ಬರಿ ಹೊಟ್ಟೆಯಲ್ಲಿ ಬದುಕುತ್ತೇನೆ. ಆದ್ರೆ ಬ್ಯಾರಿಕೇಡ್ ಗೆ ಸಿಕ್ಕಿ ಕೇಡು ತಂದುಕೊಳ್ಳಲಾರೆ” ಎಂದು ಕಾಡಾನೆ ಅಡವಿಯೊಳಗೆ ಓಡಿದೆ.