“Once You become fearless, You become limitless”

ಕೆಂದಾವರೆ ಡೆಸ್ಕ್: ಪದಾತಿದಳ ದಿನ (Infantry Day) ಅನ್ನು ಈ ದಿನ ಪ್ರತಿ ವರ್ಷ ಕರಾಳ ದಿನವನ್ನಾಗಿ ಕೂಡ ಆಚರಿಸಲಾಗುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ 1947, ಆಕ್ಟೋಬರ್ 26ರಂದು ಪಾಕಿಸ್ತಾನದ ಅತಿಕ್ರಮಣಕಾರರು ಕಾಶ್ಮೀರವನ್ನು ಕಾನೂನು ಬಾಹಿರವಾಗಿ ಪ್ರವೇಶಿಸಿದರು. ಕಾಶ್ಮೀರದ ರಾಜ ಹರಿಸಿಂಗ್ ಭಾರತಕ್ಕೆ ಸೇರಿಕೊಳ್ಳಲು ಒಪ್ಪಿ ಸಹಿ ಹಾಕಿದ್ದರ ಪ್ರತೀಕಾರಕ್ಕೆ ಪಾಕಿಸ್ತಾನದ ಅತಿಕ್ರಮಣಕಾರರು ಭಾರತದ ಗಡಿಯನ್ನು ಪ್ರವೇಶಿಸಿದ್ದರು. ಅವರಿಂದ ಆಗಬಹುದಾದ ಅಪಾಯ ತಡೆಯಲು ಇಂದು ಆ ವರ್ಷ  ಭಾರತವು ಸ್ವತಂತ್ರ್ಯ ಭಾರತದ ಮೊದಲ ಸೇನಾ ಕಾರ್ಯಾಚರಣೆ  ನಡೆಸಿತು.

ಲೆಫ್ಟಿನೆಂಟೆ ಕೊಲೊನಲ್ ದಿವಾನ್ ರಂಜಿತ್ ರಾಯ್ ಅವರು ಸಿಖ್ ರೆಜಿಮೆಂಟ್ ಮೊದಲ ಬೆಟಾಲಿಯನ್ ಅನ್ನು ಈ ಮೊದಲ ಸೇನಾ ಕಾರ್ಯಾಚರಣೆಗೆ ನೇತೃತ್ವ ವಹಿಸಿದ್ದರು. ಪಾಕಿಸ್ತಾನಿ ಬುಡಕಟ್ಟಿಗೆ ಸೇರಿದ ಅತಿಕ್ರಮಣಕಾರರನ್ನು ತಡೆಯಲು ಇವರ ಪಡೆಯನ್ನು ಶ್ರೀನಗರಕ್ಕೆ ಏರ್ ಲಿಫ್ಟ್ ಮಾಡಲಾಗಿತ್ತು.

ಹೆಚ್ಚುವರಿ ಸೇನಾ ಪಡೆಗಳು ಬರುವ ಮುಂಚೆಯೇ ಶ್ರೀನಗರದಲ್ಲಿ ದಿವಾನ್ ರಂಜಿತ್ ರಾಯ್ ಅವರ ಪಡೆ ಭಾರತೀಯ ಸೇನೆಗೆ ಜಯವನ್ನು ತಂದುಕೊಡುವಲ್ಲಿ ದೊಡ್ಡ ಪಾತ್ರವನ್ನು ವಹಿಸಿತ್ತು.

ಕ್ರಮಬದ್ಧವಾಗಿ ಘಟನೆಗಳು ಹೀಗೆ ನಡೆದಿತ್ತು:

ಆಕ್ಟೋಬರ್ 22, 1947ರಂದು ಅತಿಕ್ರಮಣಕಾರರು ಈಗಿನ ಖೈಬರ್ ಪಕ್ತುಂಕ್ವಾದ ಭಾಗದ ಮೂಲಕ ಅಕ್ರಮ ಪ್ರವೇಶವನ್ನು ಮಾಡಲಾರಂಭಿಸಿದ್ದರು. ಇದರಲ್ಲಿ ಪಾಕಿಸ್ತಾನದ ಬುಡಕಟ್ಟುಗಳಾದ ವಜ಼ೀರ್, ಮಸೂದ್, ಟುರಿ, ಅಫ್ರಿದಿ,‌ ಮಲಖಂಡ್ ಯೂಸುಫ್ ಜಯಾಗೆ ಸೇರಿದ ವ್ಯಕ್ತಿಗಳನ್ನು ಒಳಗೊಂಡಿದ್ದರು. ಇವರು ಪಾಕಿಸ್ತಾನದ ಸೇನೆಗೆ ಸಂಬಂಧಿಸಿದವರು ಆಗಿರಲಿಲ್ಲ ಬದಲಿಗೆ ಪಾಕಿಸ್ತಾನ ಬೆಂಬಲಿತ ಲಶ್ಕರ್ಗಳಾಗಿದ್ದರು. ಇವರು ಖಡ್ಗ, ಕೊಡ್ಲಿ ಹಾಗು ಅಕ್ರಮ ಪಿಸ್ತೂಲುಗಳನ್ನು ಹೊಂದಿದ್ದರು.
ಭಾರತೀಯ ಸೇನೆ ದಿಟ್ಟತನದಿಂದ ಧೈರ್ಯವಾಗಿ ಈ ಅಕ್ರಮ ನುಸುಳುಕೋರರನ್ನು ಹಿಮ್ಮೆಟ್ಟಿಸಿ, ಶ್ರೀನಗರ ವಿಮಾನ ನಿಲ್ದಾಣವನ್ನು ಸುರಕ್ಷಿತಗೊಳಿಸಲು ಯಶಸ್ವಿಯಾಯಿತು. 27ರಂದು ಪಾಕಿಸ್ತಾನದ ನುಸುಳುಕೋರರನ್ನು ಹೆಡೆಮುರಿ ಕಟ್ಟಲು ಭಾರತೀಯ ಸೇನೆ ಯಶ ಕಂಡಿತು.

ಈ ದಿನವನ್ನು ದೇಶಾದ್ಯಂತ ವಿವಿಧ ಸೇನಾ ಕೇಂದ್ರಗಳಲ್ಲಿ ಯೋಧರ ಶೌರ್ಯ ಹಾಗು ತ್ಯಾಗವನ್ನು ಸ್ಮರಿಸಿ ಗೌರವಿಸಲಾಗುತ್ತದೆ.

ಸೇನಾ ಕೇಂದ್ರಗಳಲ್ಲಿ ಪಥಸಂಚಲನ, ವೈಮಾನಿಕ ಕಸರತ್ತು, ಬೈಕ್ Rally ಮತ್ತು ಯೋಧರಿಂದ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ.