ಇಂದು ವಿಶ್ವ ಆನಿಮೇಷನ್ ದಿನ




                                                      

ಅನಿಮೇಷನ್ ಕಲೆ ಮತ್ತು ಅದರ ಸೃಷ್ಟಿಕರ್ತರನ್ನು ಗೌರವಿಸಲು ಪ್ರತಿ ವರ್ಷ ಅಕ್ಟೋಬರ್ 28 ರಂದು ಅಂದರೆ ಇಂದು ಅಂತರರಾಷ್ಟ್ರೀಯ ಅನಿಮೇಷನ್ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು 1892 ರಲ್ಲಿ ಚಾರ್ಲ್ಸ್-ಎಮೈಲ್ ರೆನಾಡ್ ಅವರು ಅನಿಮೇಷನ್‌ನ ಮೊದಲ ಸಾರ್ವಜನಿಕ ಪ್ರದರ್ಶನದ ನೆನಪಿಗಾಗಿ ಇಂಟರ್ನ್ಯಾಷನಲ್ ಅನಿಮೇಟೆಡ್ ಫಿಲ್ಮ್ ಅಸೋಸಿಯೇಷನ್ (ASIFA) 2002 ರಲ್ಲಿ ಸ್ಥಾಪಿಸಿದರು.



ರೇನಾಡ್ ಅವರ “ಥಿಯೇಟ್ರೆ ಆಪ್ಟಿಕ್” ಪ್ಯಾರಿಸ್  ನಲ್ಲಿರುವ ಗ್ರೆವಿನ್ ಮ್ಯೂಸಿಯಂನಲ್ಲಿ ಅವರ ಅನಿಮೇಟೆಡ್ ಚಲನಚಿತ್ರಗಳಾದ “ಪೌವ್ರೆ ಪಿಯರೋಟ್,” “ಅನ್ ಬಾನ್ ಬಾಕ್,” ಮತ್ತು “ಲೆ ಕ್ಲೌನ್ ಎಟ್ ಸೆಸ್ ಚಿಯೆನ್ಸ್” ಅನ್ನು ಪ್ರದರ್ಶಿಸಿತು. ಈ ಘಟನೆಯು ಅನಿಮೇಷನ್ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸಿತು. ಈ ಸೃಜನಶೀಲ ಕಲಾ ಪ್ರಕಾರದ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿತು.

2024 ರಲ್ಲಿ ಈ ದಿನದಂದು ಪ್ರದರ್ಶನಗಳು, ಉಪನ್ಯಾಸಗಳು ಮತ್ತು ಕಾರ್ಯಾಗಾರಗಳು ಸೇರಿದಂತೆ ವಿಶ್ವದಾದ್ಯಂತ ವಿವಿಧ ಕಾರ್ಯಕ್ರಮಗಳೊಂದಿಗೆ ಅಂತರರಾಷ್ಟ್ರೀಯ ಅನಿಮೇಷನ್ ದಿನವನ್ನು ಆಚರಿಸಲಾಗುತ್ತದೆ.
ಅನಿಮೇಷನ್ ಅಲ್ಲಿ 2ಡಿ, 3ಡಿ, ಸ್ಟಾಪ್ ಮೋಷನ್, ಆನಿಮೆ, ಮೋಷನ್ ಗ್ರಾಫ಼ಿಕ್ಸ್ ಹಾಗು ಪ್ರಾಯೋಗಿಕ ಅನಿಮೇಷನ್ ಎಂಬ ಹಲವಷ್ಟು ವಿಧಗಳಿವೆ. ಅನಿಮೇಷನ್ ಕ್ಷೇತ್ರವು ನಿರಂತರ ಹಲವಷ್ಟು ನಾವಿನ್ಯತೆಗಳಿಗೆ ಹಾಗು ತಾಂತ್ರಿಕ ಪ್ರಗತಿಗೆ ಸಾಕ್ಷಿಯಾಗಿ ಇಂದು ಬೃಹದಾಕಾರವಾಗಿ‌ ಬೆಳೆದಿದೆ.
19ನೇ ಶತಮಾನದ ಕೊನೆ ಭಾಗದಲ್ಲಿ ಎಡ್ವಡ್೯ ಮುಯ್ ಬ್ರಿಡ್ಜ್ ಸ್ಟಾಪ್ ಮೋಷನ್ ಫೊಟೋಗ್ರಾಫಿ಼ಯ ತಂತ್ರಜ್ಞಾನವನ್ನು ಬಳಸಿ ಸಿನಿಮಾಗಳನ್ನು ಮಾಡಿ, ಹೊಸ ಮೈಲಿಗಲ್ಲನ್ನು ಅನಿಮೇಷನ್ ಕ್ಷೇತ್ರದಲ್ಲಿ ಇಟ್ಟರು.
ಆನಿಮೇಷನ್ ಕ್ಷೇತ್ರದ ಹೊನ್ನಿನ ಯುಗ:
20ನೇ ಶತಮಾನದ ಪೂರ್ವ ಭಾಗದಲ್ಲಿ ಅಮೇರಿಕಾದಲ್ಲಿ ಡಿಸ್ನಿ ಹಾಗು ವಾರ್ನರ್ ಬ್ರೋಸ್ ಸ್ಟೂಡಿಯೋಗಳ ಸ್ಥಾಪನೆ ಆಯಿತು.‌ ವಾಲ್ಟ್ ಡಿಸ್ನಿ ಅವರು ಆರಂಭಿಸಿದ್ದ ಡಿಸ್ನಿ ಸ್ಟೂಡಿಯೋ ವರ್ಣರಂಜಿತ ಅನಿಮೇಷನ್ ಮೂಲಕ ಸದ್ದಿನ ಸರಿಹೊಂದಿಸುವಿಕೆಯನ್ನು ಮಾಡಿ, ಮಲ್ಟಿಪ್ಲೇನ್ ಕ್ಯಾಮರಾಗಳನ್ನು ಬಳಸುವುದು ಆರಂಭವಾಯಿತು. ಅನಿಮೇಷನ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಆರಂಭವಾದವು.ಟೆಲಿವಿಷನ್ ಹಾಗು ಜಾಹಿರಾತುಗಳ ಮೂಲಕ ಆನಿಮೇಷನ್ ದೊಡ್ಡ ವರ್ಗದ ಜನರನ್ನು ಮುಟ್ಟಲು ಸಾಧ್ಯವಾಯಿತು.

ಜಪಾನಿನ ಆನಿಮೇ ವಿಶಿಷ್ಟವಾಗಿತ್ತು:


ಜಪಾನಿನ ಆನಿಮೇ ವಿಶಿಷ್ಟವಾಗಿತ್ತು, ಮಾತ್ರವಲ್ಲದೆ ಜಗತ್ಪ್ರಸಿದ್ಧಿಯನ್ನು ಪಡೆಯಿತು. ಜಪಾನಿನ “ಆಸ್ಟೋ ಬಾಯ್” ಹಾಗು “ಪೊಕೆಮಾನ್” ಕಾರ್ಟೂನ್ ಗಳು ಲೋಕಾದ್ಯಂತ ಖ್ಯಾತವಾದವು.

ಡಿಜಿಟಲ್ ಯುಗ
ಕಂಪ್ಯೂಟರ್ ಆನಿಮೇಷನ್: ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಆದ ವಿಕಸನದಿಂದಾಗಿ ಕಂಪ್ಯೂಟರ್ ಗಳು ಇಮೇಜರಿಗಳನ್ನು ಡಿಜಿಟಲ್ ಆಗಿ ಉತ್ಪನ್ನಿಸುವಷ್ಟು ಅಭಿವೃದ್ಧಿಯನ್ನು ಕಂಡಿವೆ. ಪಿಕ್ಸರ್ ಹಾಗು ಡ್ರೀಮ್ ವಕ್ಸ್೯ಗಳು ಸಿಜಿಐಗಳನ್ನು ಬಳಸಿ ಚಕಿತರಾಗುವಂತಹ ಆನಿಮೇಷನ್ ಮಾಡಲು ಸಾಧ್ಯವಾಗಿದೆ.

ಆನಿಮೇಷನ್ ಯಾವುದೋ ಒಂದು ದೇಶಕ್ಕೆ ಸೀಮಿತವಾಗದೆ ಇಡೀ ಜಗತ್ತಿನಾದ್ಯಂತ ಒಂದು ಕಲೆಯಂತೆ ಹರಡಿ ಖ್ಯಾತಿ ಪಡೆದಿದೆ‌. ಹಲವಾರು ರಾಷ್ಟ್ರಗಳು ಆನಿಮೇಷನ್ ಅಭಿವೃದ್ಧಿಗೆ ಕೊಡುಗೆ ನೀಡಿದೆ.

ಪ್ರಮುಖ ಉದ್ದೇಶಗಳು:ಮನರಂಜನೆಅನಿಮೇಷನ್ ಮೂಲಕ ಸಿನಿಮಾ, ಟೆಲಿವಿಷನ್ ಶೋ, ವಿಡಿಯೋ ಗೇಮ್‌ ಗಳನ್ನು ಸೃಷ್ಟಿಸಿ, ಜನರಿಗೆ ಭರಪೂರ ಮನರಂಜನೆ ನೀಡಲಾಗುತ್ತಿದೆ.

ಶಿಕ್ಷಣ ಅನಿಮೇಷನ್ ಮೂಲಕ ಶಿಕ್ಷಣ ನೀಡುವುದು ಬಹಳ ಪರಿಣಾಮಕಾರಿ ಆಗಿರುತ್ತದೆ. ಶೈಕ್ಷಣಿಕ ವಿಡಿಯೊಗಳು ಹಾಗು ಪ್ರೆಸೆಂಟೇಷನ್ಗಳನ್ನು ತೀರಾ ಆಕರ್ಷಕವಾಗಿ ನೀಡಬಹುದು‌.

ಜಾಹಿರಾತು: ಅನಿಮೇಷನ್ ಅನ್ನು ಬಳಸಿ ಒಂದು ನಿರ್ದಿಷ್ಟ ಉತ್ಪನ್ನ ಅಥವಾ ಸೇವೆಯ ಕುರಿತು ಗಮನ ಸೆಳೆಯುವಂತೆ ಜಾಹಿರಾತನ್ನು ಜನರಿಗೆ ಮುಟ್ಟಿಸಬಹುದು.

ವಿಷುವಲ್ ಎಫೆಕ್ಟ್ಸಿನಿಮಾ ಅಥವಾ ಟಿವಿ ಶೋಗಳಿಗೆ ಆನಿಮೇಷನ್ ಬಳಸಿ ವಿಷುವಲ್ ಎಫೆಕ್ಟ್ ನೀಡಿ, ವೀಕ್ಷರನ್ನು ಚಕಿತರನ್ನಾಗಿಸಲು ಸಹಕಾರಿ ಆಗುತ್ತದೆ.
ಕೆಲವು ವಿಶ್ವ ಪ್ರಸಿದ್ಧ ಕಾರ್ಟೂನ್ ಶೋಗಳನ್ನು ಇಲ್ಲಿ ಹೆಸರಿಸುವುದಾದರೆ ಅವು ಇಂತಿವೆ:

ಟಾಮ್ ಆಂಡ್ ಜೆರ್ರಿ:


ಇದು ಕ್ಲಾಸಿಕ ಕಾರ್ಟೂನ್ ಶೋ ಆಗಿತ್ತು. ಇದನ್ನು ವೀಕ್ಷಿಸದ ಮಕ್ಕಳೇ ಇದ್ದಿರಲಿಕ್ಕಿಲ್ಲ ಎಂದರೆ ತಪ್ಪೇನಿಲ್ಲ. ಕಾರ್ಟೂನ್ ಲೋಕದಲ್ಲಿ ಹೊಸ ದಾಖಲೆ ಬರೆದ ಟಾಮ್ ಆಂಡ್ ಜೆರ್ರಿ ಜನರನ್ನು ಪ್ರತಿಭಾರಿಯೂ ನಕ್ಕು ನಗಿಸಿ ಆನಂದದ ಕಡಲಿನಲ್ಲಿ ತೇಲುವಂತೆ ಮಾಡಲು ವಿಫಲವಾಗುತ್ತಿರಲಿಲ್ಲ. ಇದು ಅತ್ಯಂತ ದೀರ್ಘ ಕಾಲ ಯಶಸ್ವಿಯಾಗಿ ಅತ್ಯಂತ ಹೆಚ್ಚು ಲಾಭ  ಗಳಿಕೆ ಮಾಡಿದ್ದ ಆನಿಮೇಷನ್ ಶೋ ಎಂದು ಇವತ್ತಿಗೂ ಜಗದ್ಪ್ರಸಿದ್ಧಿ ಪಡೆದಿದೆ. ವಿಲಿಯಮ್ ಹನ್ನ ಹಾಗು ಜೋಸೆಫ್ ಬಾರ್ಬೆರ ಇದರ ಸೃಷ್ಟಿಕರ್ತರಾಗಿದ್ದರು.

ದಿ ಸಿಮ್ಸನ್:


ಈ ಕಾರ್ಟೂನ್ ಶೋ ಇವತ್ತಿಗೂ ಒಂದು ಅಚ್ಚರಿ ಏಕೆಂದರೆ ಇದರಲ್ಲಿ ತೋರಿಸಲಾದ ಹಲವು ಘಟನೆಗಳು ಪ್ರಪಂಚದಲ್ಲಿ ನಿಜವಾಯಿತು. ಭವಿಷ್ಯದ  ಹಲವು ಘಟನೆಗಳನ್ನು ಹಿಂದೆಯೇ ಇದು ಆನಿಮೇಷನ್ ಮೂಲಕ ತೋರಿಸಿತ್ತು ಎಂಬುದು ಇದರ ವಿಚಿತ್ರ ಸಂಗತಿ. ಮ್ಯಾಟ್ ಗೋಯಿನಿಂಗ್ ಈ ಕಾರ್ಟೂನ್ ಶೋ ಮೂಡಿ ಬರಲು ಹಿಂದಿದ್ದ ರೂವಾರಿಯಾಗಿದ್ದರು.

ಮಿಕ್ಕಿ ಮೌಸ್:


ಇದು 20ನೇ ಶತಮಾನದ ತೀರಾ ಪ್ರಸಿದ್ಧ ಕಾರ್ಟೂನ್ ಕ್ಯಾರೆಕ್ಟರ್ ಇದ್ದ ಶೋ ಆಗಿತ್ತು. ವಾಲ್ಟ್ ಡಿಸ್ನಿಯ ಪರಿಕಲ್ಪನೆಯಂತೆಯೇ ಮಿಕ್ಕಿ ಮೌಸ್ ಶೋ ಮೂಡಿ ಬಂದಿತ್ತು. ಮಿಲಿಯನ್ ಗಟ್ಟಲೆ ಜನರು ಇದನ್ನು ಮನರಂಜನೆಗೆ ವೀಕ್ಷಸಿ, ಸಂತೋಷ ಪಡುತ್ತಿದ್ದರು. 1928ರಲ್ಲಿ ಶುರುವಾದ ಮಿಕ್ಕಿ ಮೌಸ್ ಶೋವನ್ನುವಾಲ್ಟ್ ಡಿಸ್ನಿ ಹಾಗು ಇಬ್ ಇವಕ್೯ ಯಶಸ್ವಿಗೊಳಿಸಲು ತಮ್ಮ ಪ್ರತಿಭೆಯನ್ನು ಪೂರ್ತಿ ಬಳಸಿದ್ದರು.

ಒಟ್ಟಿನಲ್ಲಿ, ಮುಗ್ಧತೆ ಹೊಂದಿರುವ ಮಕ್ಕಳು ಮನರಂಜನೆಗಾಗಿ ಕಾರ್ಟೂನ್ ವೀಕ್ಷಿಸುವುದು ಇಂದಿಗೂ ಸಾಮಾನ್ಯ. ನಮ್ಮ ಬಾಲ್ಯದ ನೆನಪುಗಳಲ್ಲೂ ಹಲವು ಕಾರ್ಟೂನ್ ಶೋಗಳು ಇರುತ್ತವೆ. ವಯಸ್ಸಿನಲ್ಲಿ ಹಿರಿಯರಾಗುತ್ತಾ ಹೋದರೂ ನಮ್ಮಗಳ ಒಳಗಿರುವ ಒಂದು ಮಗುವಿನ ಮನಸ್ಸನ್ನು ಜಾಗೃತಗೊಳಿಸಲು ಕಾರ್ಟೂನ್ ಗಳನ್ನು ನಾವೂ ಆಗಿಂದಾಗ್ಗೆ ವೀಕ್ಷಿಸಿದರೆ ತಪ್ಪೇನಲ್ಲ ಬಿಡಿ.

ಒಟ್ಟಾರೆಯಾಗಿ ಚಾರ್ಲ್ಸ್-ಎಮೈಲ್ ರೆನಾಡ್ ಜ್ಞಾಪಕಾರ್ತವಾಗಿ ಶುರುವಾದ ವಲ್ಡ್ ಆನಿಮೇಷನ್ ದಿನವನ್ನು  ಇಂಟರ್ನ್ಯಾಷನಲ್ ಅನಿಮೇಟೆಡ್ ಫಿಲ್ಮ್ ಅಸೋಸಿಯೇಷನ್ (ಎ.ಎಸ್.ಐ.ಎಫ್.ಎ) ಯುನೆಸ್ಕೋದ ಸದಸ್ಯತ್ವ ಹೊಂದಿದ್ದು, ಅರ್ಥಪೂರ್ಣವಾಗಿ ಆಚರಿಸುತ್ತದೆ. ಈ ದಿನ ಎಕ್ಸಿಬಿಷನ್, ಕಾರ್ಯಾಗಾರ, ತಾಂತ್ರಿಕ ಪ್ರದರ್ಶನಗಳನ್ನು ಜನರಿಗೆ ಏರ್ಪಡಿಸಿ ಅನಿಮೇಷನ್ ಇತಿಹಾಸವನ್ನು ವಿಶ್ವಕ್ಕೆ ಸಾರಿ ಹೇಳುವ ಯತ್ನ ಮಾಡುತ್ತದೆ.

ಜಗತ್ತಿನ ಹಲವು ಮಾದ್ಯಮಗಳೂ ಕೂಡ ಆನಿಮೇಷನ್ ಕ್ಷೇತ್ರದ ಪ್ರಾಮುಖ್ಯತೆಗೆ ಮಾನ್ಯತೆ ನೀಡಿ, ಒಂದು ಕಲೆಯಾಗಿ ಅದನ್ನು ಗೌರವಿಸುತ್ತದೆ. ಜನರು ಅನಿಮೇಷನ್ ಕಡೆ ಒಲವು ಬೆಳೆಸಿಕೊಳ್ಳಲು ಹುರಿದುಂಬಿಸುತ್ತವೆ.