ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಪೊನ್ನಂಪೇಟೆ ತಾಲೂಕು ಸಂಘದ ಅಧ್ಯಕ್ಷರಾಗಿ ಕಿರಿಯಮಾದ ರಾಜ್ ಕುಶಾಲಪ್ಪ ಅವಿರೋಧ ಆಯ್ಕೆಯಾದ್ರು. ಇಂದು ಪೊನ್ನಂಪೇಟೆ ಗೋಲ್ಡನ್ ಗೇಟ್ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಸ್ ಮುರುಳಿದರ್ ಅದ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾ ಪೊನ್ನಂಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಮೈಸೂರು ಮಿತ್ರ ಪತ್ರಿಕೆಯ ಗೌರವ ವರದಿಗಾರ ಕಿರಿಯಮಾದ ರಾಜ್ ಕುಶಾಲಪ್ಪ ಅವಿರೋಧ ಆಯ್ಕೆ ಆಗಿದ್ದಾರೆ. ಸಭೆಯಲ್ಲಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಜಿ ರವಿಕುಮಾರ್, ನಿರ್ದೇಶಕ ಪ್ರವೀಣ್ ಉಪಸ್ಥಿತರಿದ್ದರು.