ನಾಳೆ ಮೈಸೂರು ವಿಭಾಗ ಮಟ್ಟದ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ ಹಾಕಿ ಪಂದ್ಯಾಟಕ್ಕೆ ಚಾಲನೆ ದೊರೆಯಲಿದೆ.ಹಾಸನ,ಮೈಸೂರು,ಕೊಡಗು, ದಕ್ಷಿಣ ಕನ್ನಡ, ಉಡುಪಿ, ಮಂಡ್ಯ, ಚಾಮರಾಜನಗರ,ಚಿಕ್ಕಮಗಳೂರು ಜಿಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ತಂಡಗಳು ಭಾಗವಹಿಸಲಿದ್ದು 25ಅಕ್ಟೂಬರ್ ಸಂಜೆ ಹೊತ್ತಿಗೆ ಎಲ್ಲಾ ವರ್ಗಗಳ ಫೈನಲ್ ಪಂದ್ಯಗಳು ನಡೆಯಲಿದ್ದು ಇಲ್ಲಿ ಗೆದ್ದ ತಂಡಗಳು 27ರ ಅಕ್ಟೊಬರ್ ನಿಂದ 30ರವರಗೆ ಪೊನ್ನಂಪೇಟೆಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಹಾಕಿ ಪಂದ್ಯಾಟದಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸಲಿವೆ, ಎಲ್ಲಾ ಕ್ರೀಡಾಪಟುಗಳಿಗೆ ವೈದ್ಯಕೀಯ, ಉಟೊಪಚಾರ, ಸಾರಿಗೆ ವ್ಯವಸ್ಥೆಯೊಂದಿಗೆ ಸ್ಥಳಿಯ ಸಂತ ಅಂತೋಣಿ ಪ್ರೌಢ ಮತ್ತು ಪ್ರಾಥಮಿಕ ಶಾಲೆ, ಅಪ್ಪಚ್ಚುಕವಿ ವಿದ್ಯಾಲಯ, ಸಾಯಿ ಸಂಕರ್ ವಿದ್ಯಾ ಸಂಸ್ಥೆ, ಸರ್ವದೈವತಾ ವಿದ್ಯಾಸಂಸ್ಥೆ, ಕೆಪಿಎಸ್ ಸರ್ಕಾರಿ ವಿದ್ಯಾ ಸಂಸ್ಥೆಯಲ್ಲಿ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆಯೆಂದು ಕ್ರೀಡಾಕೂಟದ ಪ್ರಧಾನ ಸಂಚಾಲಕರಾದ ಮಾದಂಡ ತಿಮ್ಮಯ್ಯನವರು ಮತ್ತು ,ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೆಶಕರಾದ ರಂಗದಾಮಪ್ಪನವರು ತಿಳಿಸಿರುತ್ತಾರೆ