ಮಡಿಕೇರಿ ನಗರಸಭಾ ನಿಧಿಯಿಂದ ಗೌಳಿಬೀದಿಯ ಕಂಚಿಕಾಮಾಕ್ಷಿ ಬಳಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆ ಹಾಗೂ ಕೋದಂಡರಾಮ ದೇವಸ್ಥಾನ ಬಳಿ ನಿರ್ಮಿಸಿರುವ ಟಾರು ರಸ್ತೆ ಕಾಮಗಾರಿಯನ್ನು ಶಾಸಕರಾದ ಡಾ.ಮಂತರ್ ಗೌಡ ಉದ್ಘಾಟಿಸಿದರು.
ಮಡಿಕೇರಿ ನಗರ ರಸ್ತೆಗಳು ಗುಂಡಿಮಯವಾಗಿದ್ದು, ಕೆಲವು ರಸ್ತೆಗಳ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಮಡಿಕೇರಿ ನಗರದ ಎಲ್ಲಾ ರಸ್ತೆಯ ಕಾಮಗಾರಿ ಕೈಗೊಳ್ಳಲು ಮುಂದಾಗಲಾಗಿದೆ ಎಂದರು.
ತಾತ್ಕಾಲಿಕ ಕೋಳಿ ಅಂಗಡಿ ವೀಕ್ಷಣೆ ಮಾಡಿದರು. ಚರಂಡಿ ಸರಿಪಡಿಸುವಂತೆ ನಗರಸಭಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ಸದಸ್ಯರಾದ ಆರ್.ಪಿ.ಚಂದ್ರಶೆಖರ್, ನಗರಸಭಾ ಸದಸ್ಯರಾದ ಯಾಕೂಬ್, ಸದಾ ಮುದ್ದಪ್ಪ, ಜಗದೀಶ್, ಪೌರಾಯುಕ್ತರಾದ ಎಚ್.ಆರ್.ರಮೇಶ್, ಎಂಜಿನಿಯರ್ ಸತೀಶ್, ಪ್ರಮುಖರಾದ ಪ್ರಕಾಶ್ ಆಚಾರ್ಯ, ಇತರರು ಇದ್ದರು.