ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ
ಬಡಜೀವಕೊಂದು ಆಸರೆಯಾಗೋಣ
ಅಭಿಯಾನದಡಿಯಲ್ಲಿ ಸೋಮವಾರಪೇಟೆ ತಾಲೂಕಿನ ಹಾನಗಲ್ ಗ್ರಾಮದ ರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದ ಕಿಡ್ನಿ ವೈಫಲ್ಯಗೊಂಡ ಶ್ರೀ ಗಣೇಶ ಕುಲಾಲ ಇವರಿಗೆ ಸಹಾಯ ಹಸ್ತ ಯೋಜನೆಗೆ ಧಾನಿಗಳಿಂದ ಸಂಗ್ರಹ ಗೊಂಡ ಮೊತ್ತವನ್ನು ಇತ್ತೀಚಿಗೆ ಅವರ ಮನೆಗೆ ತೆರಳಿ ನೀಡಲಾಯಿತು.

ಮಾನವೀಯ ನೆಲೆಯಲ್ಲಿ ಹೃದಯ ವೈಶಾಲ್ಯತೆ ಮೆರೆದು ಸಹಾಯ ಹಸ್ತ ನೀಡಿದ ಜಿಲ್ಲೆಯ ಮತ್ತು ಹೊರ ಜಿಲ್ಲೆಯ ಬಾಂಧವರಿಗೆ ಶ್ರೀ ಗಣೇಶ್ ಕುಲಾಲ್ ಅವರು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು.