ಕೊಡಗಿನಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ಕಾಫಿ ದಸರಾ ಕೊಡಗಿನ ದಸರಾ ಕಳೆಯನ್ನು ಹೆಚ್ಚಿಸಿದೆ. ವೇದಿಕೆಯ ಕೊನೆ ಭಾಗದಲ್ಲಿ ಎರಡೂ ಕಡೆಯಲ್ಲಿ ಇರುವ ಕಾಫಿಯ ಉತ್ಪನ್ನಗಳ ವಿವಿಧ ಮಳಿಗೆಗಳು ಕಲಾ ರಸಿಕರನ್ನು ಹಾಗು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ರಜತ್ ರಾಜ್ ಡಿ.ಹೆಚ್, ಮಡಿಕೇರಿ
ಮಳಿಗೆಗಳ ಪೈಕಿ ಕೊಡಗಿನ ಹಳೆಯ ಶರ್ಮಾ ಕಾಫಿ ವಕ್ಸ್೯ ಅವರ ಮಳಿಗೆಯೂ ಇದ್ದು, ಅವರ ಹೊಸ ವಿಭಿನ್ನ ಉತ್ಪನ್ನಗಳು ಲೋಕಾರ್ಪಣೆಗೊಂಡು ಈಗ ಸುದ್ದಿಯಲ್ಲಿದೆ.
ಇಂದು 6ನೇ ತಾರೀಕಿನಂದು ಇವರ ಉತ್ಪನ್ನಗಳು ಕರ್ನಾಟಕದ ಮಾನ್ಯ ಸಚಿವರುಗಳಾದ ಶ್ರೀ ಚೆಲುವರಾಯ ಸ್ವಾಮಿ ಹಾಗು ಶ್ರೀ ದಿನೇಶ್ ಗುಂಡುರಾವ್ ಅವರಿಂದ ಬಿಡುಗಡೆಯಾಗಿದೆ. ಸ್ಥಳೀಯ ಶಾಸಕರು ಆದ ಮಾನ್ಯ ಮಂತರ್ ಗೌಡ ಅವರು ಈ ಸಂದರ್ಭ ಉಪಸ್ಥಿತರಿದ್ದುದು ಗಮನೀಯವಾಗಿತ್ತು.
ಇವರ ವಿಭಿನ್ನ ಉತ್ಪನ್ನಗಳು:
*ಅಂಜುರ ಹಾಗು ಕಾಫಿ ಜಾಮ್,
*ಆ್ಯಪಲ್ ಹಾಗು ಕಾಫಿ ಜಾಮ್,
*ಕಾಫಿ ಹಾಗು ನೇರಳೆ ಜಾಮ್,
*ಆರೆಂಜ್ ಹಾಗು ಕಾಫಿ ಜಾಮ್,
*ಪೇರಳೆ ಹಾಗು ಮೆಣಸಿನಿ ಜಾಮ್,
- ವಿವಿಧ ಹಣ್ಣುಗಳ ಮಿಶ್ರದ ಜಾಮ್,
ಕೈಗೆಟಕುವ ಬೆಲೆಯಲ್ಲಿ ರುಚಿಕರವಾದ ಜಾಮ್ ಇವುಗಳಾಗಿದ್ದು, ವಿನೂತನ ಪ್ರಯತ್ನವಾಗಿದೆ. ಗ್ರಾಹಕರ ಅಭಿರುಚಿಗೆ ಹಿಡಿಸುವಂತೆ ಇವುಗಳನ್ನು ತಯಾರಿಸಲಾಗಿದೆ. ಇದು ಏಷ್ಯಾದಲ್ಲೇ ಪ್ರಥಮ ಚೊಚ್ಚಲ ಪ್ರಯತ್ನದ ಉತ್ಪನ್ನಗಳಾಗಿದ್ದು, ಗ್ರಾಹಕರಿಗೆ ಆಕರ್ಷಣೆಯ ಕೇಂದ್ರಬಿಂದುವಾಗಿದೆ.
ನೀವೂ ಕಾಫಿ ದಸರಾಗೆ ಹೋದರೆ ಗಾಂಧಿ ಮೈದಾನದಲ್ಲಿರುವ ಕಾಫಿ ಮಳಿಗೆಗಳಿಗೆ ಭೇಟಿ ನೀಡಿ, ಶರ್ಮಾ ಕಾಫಿ಼ ಅವರ ಈ ಹೊಸ ಉತ್ಪನ್ನಗಳನ್ನು ಕೊಂಡುಕೊಳ್ಳಬಹುದಾಗಿದೆ.
ಇವರ ಹೊಸ ಉತ್ಪನ್ನಗಳಲ್ಲಿ ಕಾಫಿ ಫ್ಲೇವರಿನ ಕೋಕೋನಟ್ ಪಲ್ಪ್ ಗಳ ಜ್ಯೂಸ್ ನಿಜಕ್ಕೂ ರುಚಿಕರವಾಗಿದ್ದು, ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಉತ್ಪನ್ನವನ್ನು ಶರ್ಮಾ ಕಾಫಿ ವರ್ಕ್ಸ್ ಗ್ರಾಹಕರಿಗಾಗಿ ಅಣಿಗೊಳಿಸಿ ಮಾರಾಟಕ್ಕೆ ಸಿದ್ಧಪಡಿಸಿದೆ.