ಜಗತ್ತಿನ ಜನ 17ನೇ ತಾರೀಕು ನಿನ್ನೆ ದಿನ ಬೆಚ್ಚಿ ಬಿದ್ದಿದ್ದರು. ಕಾರಣ ಸರಣಿ ಸ್ಪೋಟವಲ್ಲ ಬದಲಿಗೆ ಅದಕ್ಕೆ ಬಳಸಲಾಗಿದ್ದ ಪೇಜರ್ ಎಂಬ ಸಾಧು ಸಂವಹನದ ಉಪಕರಣದಿಂದಾಗಿ!
ಹೌದು ಪ್ರಪಂಚದಲ್ಲೇ ಮೊದಲ ಬಾರಿಗೆ ಲೆಬೆನಾನ್ ಹಾಗು ಸಿರಿಯಾದ ಹಲವೆಡೆ ನಡೆದ ಸರಣಿ ಸ್ಪೋಟಕ್ಕೆ ಪೇಜರ್ ಉಪಕರಣವನ್ನು ಬಳಸಲಾಗಿದೆ. ಪೇಜರ್ ಎಂದರೆ ಇವು ಸ್ಮಾಟ್೯ ಫೋನ್ ಗಳು ಮಾರುಕಟ್ಟೆಗೆ ಬರುವ ಮುನ್ನ ಸಂವಹನಕ್ಕೆ ಬಳಸಲಾಗುತ್ತಿದ್ದ ಉಪಕರಣವಾಗಿದ್ದವು.
ಅಂತರ್ಜಾಲ ಸಂಪರ್ಕ ಬಳಸದೆ ಕೇವಲ ರೇಡಿಯೋ ತರಂಗಗಳನ್ನು ಬಳಸಿ ಇದರ ಮೂಲಕ ಸಂವಹನ ನಡೆಸಬಹುದಿತ್ತು. ಪೇಜರ್ ಸಂಶೋಧಿಸಿದ್ದು, 1949ರಲ್ಲಿ ಅಲ್ಫೆಡ್೯ ಜೆ.ಗ್ರಾಸ್ ಎಂಬಾತ. ಅವನು ಮೊದಲ ಟೆಲಿಫೋನಿಕ್ ಪೇಜರ್ ಅನ್ನು ಕಂಡು ಹಿಡಿದಿದ್ದು. ಅದನ್ನು ನ್ಯೂಯಾಕ್೯ ನಗರದ ಜಿಯ್ಯುವಿಶ್ ಆಸ್ಪತ್ರೆಯಲ್ಲಿ ಮೊದಲಿಗೆ ಬಳಸಲಾಗಿತ್ತು.
ಪೇಜರ್ ಗಳು 1980s ಮತ್ತು 1990s ದಶಕದಲ್ಲಿ ದೊಡ್ಡ ಪ್ರಸಿದ್ಧಿ ಪಡೆದಿತ್ತು. ಆಗಿನ ಕಾಲದಲ್ಲಿ ಪೇಜರ್ ಗಳನ್ನು ಸದಾ ಸಂಪರ್ಕಕ್ಕೆ ಲಭ್ಯವಿರಲೆಂದು ಬಳಸುತ್ತಿದ್ದರು. ಈಗಲೂ ಇದನ್ನು ಪೇಜರ್ ಗಳನ್ನು ವಿರಳವಾಗಿ ಪ್ರಪಂಚದಲ್ಲಿ ಬಳಸುವುದುಂಟು.
ಸ್ಮಾಟ್೯ ಫೋನ್ ಗಳು ಜನರ ಬಳಕೆಗೆ ಸಲೀಸಾಗಿ ಲಭ್ಯವಾಗುತ್ತಾ ಹೋದಂತೆ, ಪೇಜರ್ ಜನರ ಉಪಯೋಗದಿಂದ ದೂರವಾದವು. ಇದೀಗ ಮತ್ತೆ ಪೇಜರ್ ಸುದ್ದಿಯಲ್ಲಿದೆ. ಕಾರಣ ಅದು ವಿದ್ವಂಸಕ ಸ್ಪೋಟಕ್ಕೆ ಬಳಕೆ ಆಗಿದೆ.
ಸಿರಿಯಾ, ಲೆಬೆನಾನ್ ದೇಶದ ವಿವಿಧೆಡೆ 3000 ಪೇಜರ್ ಗಳೊಂದಿಗೆ ಸ್ಪೋಟಕ ವಸ್ತು ಧ್ವಂಸ ಮಾಡಲು ಇಡಲಾಗಿತ್ತು. ಅದೃಷ್ಟವಶಾತ್ ಕೇವಲ 9 ಮಂದಿ ಮರಣ ಹೊಂದಿ, ಸಾವಿರಾರು ಜನಕ್ಕೆ ಗಂಭೀರ ಗಾಯ ಆಗಿದೆ.
ಹಿಜ್ಬುಲ್ಲಾ ಉಗ್ರ ಸಂಘಟನೆಯನ್ನು ಗುರಿಯಾಗಿಸಿ ಈ ಸ್ಪೋಟವನ್ನು ಇಸ್ರೇಲ್ ನಡೆಸಿರುವ ಬಗ್ಗೆ ಶಂಕಿಸಲಾಗಿದೆ. ಆದರೆ ಇಸ್ರೇಲ್ ಈ ಬಗ್ಗೆ ಈವರೆಗೆ ಯಾವ ಪ್ರತಿಕ್ರಿಯೆಯನ್ನು ನೀಡಿಲ್ಲ.
ಸ್ಪೋಟದ ಪತ್ತೆ ಆಗದೆ ಹೆಚ್ಚಿನ ಸಾವು ನೋವು ಆಗಬೇಕು ಎಂಬ ಉದ್ದೇಶದಿಂದ ಮೊಬೈಲ್ ಬದಲು ಪೇಜರ್ ಬಳಸಲಾಗಿದೆ. ಒಂದು ಸ್ಪೋಟಕ್ಕೆ ಪೇಜರ್ ಬಳಕೆ ಮಾಡಲಾಗಿದ್ದು ಇದೇ ಮೊದಲು. ಇಂತಹ ಕುಖ್ಯಾತಿ ಈ ಹಿಂದೆ ಎಂದಿಗೂ ಪೇಜರ್ ಉಪಕರಣಕ್ಕೆ ಇರಲಿಲ್ಲ.
ಹಿಂದೊಮ್ಮೆ ಉಪಕಾರಿ ಉಪಕರಣ
ವೈದ್ಯರುಗಳು, ದಾದಿಯರು ಹಾಗು ಹಲವು ಆರೋಗ್ಯ ಇಲಾಖೆಯ ವೃತ್ತಿಪರರು ತುರ್ತು ಸಂದರ್ಭ ಸಂವಹನಕ್ಕೆ ಬಳಸುತ್ತಿದ್ದರು. ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಸಂದೇಶ ರವಾನೆಗೆ ಪೇಜರ್ ಬಳಸುತ್ತಿದ್ದರು. ಕೆಲವು ಕಾರ್ಖಾನೆಗಳಲ್ಲಿ ಕಾರ್ಮಿಕರ ನಡುವೆ ಸಂಪರ್ಕ ಕೊಂಡಿಯಾಗಿ ಪೇಜರ್ ಬಳಕೆಯಲ್ಲಿದೆ. ಪಕ್ಷಿ ವೀಕ್ಷಣೆಗೆ ಈಗಲೂ ಕೆಲವರು ಪೇಜರ್ ಬಳಸುತ್ತಾರೆ. ಸ್ಪರ್ಧಾತ್ಮಕ ಪಕ್ಷಿ ವೀಕ್ಷಣೆಯಲ್ಲಿ ರೇಡಿಯೇಷನ್ ಇಲ್ಲದ ಸಂವಹನ ಆದ್ದರಿಂದ ಹೆಚ್ಚಾಗಿ ಪೇಜರ್ ಬಳಸುತ್ತಾರೆ.
ಒಟ್ಟಿನಲ್ಲಿ ಇನ್ನೇನು ಪೇಜರ್ ಗಳ ಬಳಕೆ ಮುಗಿದೇ ಹೋಯಿತು. ಮೂಲೆ ಸೇರಿ ಅಳಿಯಿತು ಎಂದು ಹೇಳುವ ಹೊತ್ತಿಗೆ ಎದೆ ಝಲ್ ಎನ್ನುವ ಸ್ಪೋಟಗಳಲ್ಲಿ ಇದು ಈಗ ಬಳಕೆಯಾಗಿದೆ. ಸರಳ, ರಹಸ್ಯಮಯ, ನಂಬಲಾರ್ಹ ಸಂವಹನ ಮಾಧ್ಯಮ ಪೇಜರ್ ಕುಖ್ಯಾತಿ ಪಡೆದಿದ್ದು ವಿಷಾದನೀಯ.
ಸಿನಿಮಾದಲ್ಲಿ ಹೀರೋ ಇನ್ನೇನು ಸತ್ತೇ ಹೋದ ಅಂತ ಅಂದುಕೊಳ್ಳುವ ಹೊತ್ತಿಗೆ ವಿಲನ್ ಆಗಿ ಎಂಟ್ರಿ ಆದ ಹಾಗೆ ಆಗಿದೆ ಪೇಜರ್ ಎಂಬ ಉಪಕರಣದ ಕಥೆ…