ಭಾರತದ ಆಡಳಿತಾರೂಢ ಎನ್.ಡಿ.ಎ ಮೈತ್ರಿಕೂಟದ ಸರಕಾರವು ಸದ್ಯದಲ್ಲೇ ‘ಒಂದು ದೇಶ, ಒಂದು ಚುನಾವಣೆ’ಯ ಅವರ ಕಲ್ಪನೆಯ ಕಾರ್ಯರೂಪಕ್ಕೆ ತರಲು ಉತ್ಸುಕವಾಗಿದೆ.
ಮೂರನೇ ಅವಧಿಯ 100ದಿನಗಳನ್ನು ಬಿಜೆಪಿ ನೇತೃತ್ವದ ಬಿ.ಜೆ.ಪಿ ಸರಕಾರ ಪೂರೈಸಿದ್ದು, ‘ಒಂದು ದೇಶ, ಒಂದು ಚುನಾವಣೆ’ಯ ವಿಚಾರವು ಮುನ್ನಲೆಗೆ ಬಂದಿದೆ.
ಆ ನಿಟ್ಟಿನಲ್ಲಿ ಹಲವು ಗಮನೀಯ ಹೆಜ್ಜೆಗಳನ್ನೂ ಕೂಡ ಇಟ್ಟಾಗಿದೆ. ಅವು ಇಂತಿವೆ:
*ಸಮಿತಿಗಳ ರಚನೆ:
ಒಂದು ಉನ್ನತ ಮಟ್ಟದ ಸಮಿತಿಯನ್ನು ಕೇಂದ್ರ ಸರಕಾರವು ಈಗಾಗಲೇ ರಚಿಸಿದ್ದು, ಅದರ ಅಧ್ಯಕ್ಷತೆಯನ್ನು ದೇಶದ ನಿಕಟಪೂರ್ವ ಮಾಜಿ ರಾಷ್ಟ್ರ ಪತಿಗಳಾದ ರಾಮನಾಥ ಕೋವಿಂದ್ ಅವರು ವಹಿಸಿದ್ದಾರೆ.
ಈ ಸಮಿತಿಯು ಹೊಸ ಆಲೋಚನೆಯ ಕಾರ್ಯ ಸಾಧ್ಯತೆಗಳ ಬಗ್ಗೆ ಪರಿಶೀಲಿಸುತ್ತಿದ್ದು, ಅಗತ್ಯವಿರುವ ಶಿಫಾರಸ್ಸುಗಳನ್ನು ಕೇಂದ್ರ ಸರಕಾರಕ್ಕೆ ಇದು ನೀಡಲಿದೆ.
*ತಿದ್ದುಪಡಿಗಳು ಅಗತ್ಯವಾಗಿದೆ:
ಏಕಕಾಲಕ್ಕೆ ಎಲ್ಲಾ ಚುನಾವಣೆಗಳು ನಡೆಸಬೇಕಾದರೆ ಸಂವಿಧಾನಕ್ಕೆ ಪ್ರಮುಖ ತಿದ್ದುಪಡಿಗಳ ಅವಶ್ಯಕತೆ ಇದ್ದು, ವಿಧಾನಸಭೆ ಹಾಗು ಲೋಕಸಭೆಯ ಎಲ್ಲಾ ಚುನಾವಣೆಗಳನ್ನು ಒಂದೇ ಸಮಯಕ್ಕೆ ನಡೆಸಲು ಸಾಂವಿಧಾನಿಕ ಕಾಯ್ದೆಗಳಾದ 83, 85, 172, 174 ಮತ್ತು 356ರ ತಿದ್ದುಪಡಿ ಮಾಡಬೇಕಿದೆ. ಈ ಸಾಂವಿಧಾನಿಕ ತಿದ್ದುಪಡಿಗಳಿಗೆ ಬೇಕಾದ ಕರಡು ಪ್ರತಿಯ ತಯಾರಿಯಲ್ಲಿ ಕೇಂದ್ರ ಸರಕಾರ ಈಗ ನಿರತವಾಗಿದೆ.
*ತಿದ್ದುಪಡಿಗೆ ಸಂಸತ್ತಿನ ಸಮ್ಮತಿ ಅನಿವಾರ್ಯ:
ಅಗತ್ಯವಿರುವ ತಿದ್ದುಪಡಿಯನ್ನು ಸಂವಿಧಾನಕ್ಕೆ ಮಾಡಲು ಅವು ಸಂಸತ್ತಿನ ಎರಡೂ ಮನೆಗಳಲ್ಲಿ ಮೂರನೇ ಎರಡು ಭಾಗದಷ್ಟಾದರೂ ಒಪ್ಪಿಗೆ ಸಿಕ್ಕು ಪಾಸ್ ಆಗಬೇಕು. ಅಷ್ಟೇ ಅಲ್ಲ, ರಾಜ್ಯ ಶಾಸಕಾಂಗದ ಕನಿಷ್ಠ ಅರ್ಧದಷ್ಟು ಅನುಮೋದನೆ ಬೇಕಾಗಿರುತ್ತದೆ.
*ಪಾಲುದಾರರನ್ನು ತೊಡಗಿಸಿಕೊಳ್ಳುವುದು:
ಬಿಜೆಪಿಯ ಪ್ರಮುಖ ಪಾಲುದಾರಿಕೆಯ ಮಿತ್ರ ಪಕ್ಷಗಳಾದ ತೆಲಗು ದೇಶಂ ಪಕ್ಷ(ಟಿ.ಡಿ.ಪಿ), ಜನತಾ ದಳ ಯುನೈಟೆಡ್(ಜೆ.ಡಿ.ಯು), ಜನ ಸೇನಾ ಪಕ್ಆಯಲೋಕ ಜನಶಕ್ತಿ ಪಕ್ಷ ಸೇರಿದಂತೆ ಇನ್ನೂ ಇತರೆ ಸಣ್ಣ ಪುಟ್ಟ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ಪಡೆದು ಈ ವಿಚಾರದ ಬಗ್ಗೆ ಚರ್ಚೆಗಳನ್ನು ನಡೆಸಲಾಗುತ್ತಿದೆ. ಹೊಸ ಬದಲಾವಣೆ ತರಲು ಮಿತ್ರ ಪಕ್ಷಗಳ ಅನುಮಾನಗಳನ್ನು ಪರಿಹರಿಸಿ, ಅವರ ಪೂರ್ಣ ಬೆಂಬಲವನ್ನು ಪಡೆಯಲಾಗುತ್ತಿದೆ.
*ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಿಕೆ:
ಸಾರ್ವಜನಿಕ ವೇದಿಕೆಗಳು, ಮಾಧ್ಯಮ ಹಾಗು ಶೈಕ್ಷಣಿಕ ಆಂಧೋಲನಗಳ ಮುಖಾಂತರ ‘ಒಂದು ದೇಶ, ಒಂದು ಚುನಾವಣೆ’ ಕುರಿತಾದ ಸವಾಲುಗಳ ಹಾಗು ಲಾಭಗಳ ಮಾಹಿತಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಜನತೆಯ ಬೆಂಬಲವನ್ನು Shar ಹಂತವಾಗಿ ಪಡೆಯಲಾಗುತ್ತಿದೆ.
*ವ್ಯವಸ್ಥಾಪನಾ ಯೋಜನೆ:
ಒಂದೇ ಸಮಯಕ್ಕೆ ಎಲ್ಲಾ ಚುನಾವಣೆಯನ್ನೂ ಶಿಸ್ತಾಗಿ ನಡೆಸಲು ವಿಸ್ತೃತ ವ್ಯವಸ್ಥಾಪನಾ ಯೋಜನೆಯನ್ನು ರೂಪಿಸಲಾಗುತ್ತಿದೆ. ಇದಕ್ಕಾಗಿ ಭಾರತದ ಚುನಾವಣಾ ನೀತಿ ಆಯೋಗ, ರಾಜ್ಯ ನೀತಿ ಆಯೋಗಗಳ ಹಾಗು ಸಂಬಂಧ ಪಟ್ಟ ಏಜೆನ್ಸಿಗಳನ್ನು ಸಂಯೋಜಿಸುವ ಕೆಲಸವನ್ನು ಮಾಡುತ್ತಿದೆ ಕೇಂದ್ರ.
ಸಂಪನ್ಮೂಲಗಳ ನಿಯೋಜನೆ:
ಇನ್ಮುಂದೆ ಜಂಟಿ ಆಗಿ ನಡೆಯಲಿರುವ ಎಲ್ಲಾ ಚುನಾವಣೆಗಳಿಗೆ ಮೂಲಸೌಕರ್ಯ,ತಂತ್ರಜ್ಞಾನ ಮತ್ತು ತರಬೇತಿಗೆ ಅಗತ್ಯವಾದ ಸಂಪನ್ಮೂಲಗಳನ್ನು ಕೇಂದ್ರ ನಿಯೋಜಿಸುತ್ತದೆ.
*ಕಾನೂನಾತ್ಮಕ ಚೌಕಟ್ಟಿನ ರಚನೆ:
ಏಕಕಾಲಕ್ಕೆ ನಡೆಯಬೇಕಿರುವ ಎಲ್ಲಾ ಚುನಾವಣೆಗಳಿಗೆ ಎದುರಾಗಬಹುದಾದ ಸಂಕೀರ್ಣತೆಗಳನ್ನು ಸಮಥ೯ವಾಗಿ ನಿಭಾಯಿಸಲು ಸಮಗ್ರ ಕಾನೂನಾತ್ಮಕ ಚೌಕಟ್ಟಿನ ರಚನೆ ಮಾಡಬೇಕಾಗುತ್ತದೆ. ನಡುವೆ ಬರುವ ಉಪ ಚುನಾವಣೆ ಹಾಗು ಮಧ್ಯಂತರ ಚುನಾವಣೆಗಳನ್ನು ನಡೆಸುವಂತೆ ಮಾಡುತ್ತಿದೆ.
ಇದಿಷ್ಟು ಕೇಂದ್ರ ಸರಕಾರವು ಏಕಕಾಲಕ್ಕೆ ಚುನಾವಣೆಗಳನ್ನು ನಡೆಸಲು ಕೈಗೊಂಡಿರುವ ಸಿದ್ಧತೆಗಳಾದರೆ, ಅದರ ಅನುಷ್ಠಾನದಿಂದಾಗುವ ಉಪಯೋಗಗಳೇನು ಎಂಬುದರ ಬಗ್ಗೆ ಬೆಳಕು ಚೆಲ್ಲುವುದಾದರೆ,
ಖರ್ಚುವೆಚ್ಚಕ್ಕೆ ಕಡಿವಾಣ:
ಮೇಲಿಂದಮೇಲೆ ಬೇರೆ ಬೇರೆ ಸಮಯಗಳಲ್ಲಿ ಚುನಾವಣೆಗಳು ನಡೆಯುತ್ತಲೇ ಇದ್ದರೆ, ಜನರ ತೆರಿಗೆ ಹಣ ನೀರಿನಂತೆ ಹರಿದು ಪೋಲಾಗುತ್ತದೆ. ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ, ದುಬಾರಿ ಚುನಾವಣೆಗಳು ನಡೆಯದಂತೆ ಇದು ತಡೆಯುತ್ತವೆ. ಇದು ಕೇಂದ್ರ ಹಾಗು ರಾಜ್ಯ ಸರಕಾರಗಳ ಬೊಕ್ಕಸಕ್ಕೆ ಲಾಭದಾಯಕವೇ ಆಗಿದೆ.
ಅಡಚಣೆಗಳ ನಿವಾರಣೆ:
ಬೇರೆ ಬೇರೆ ಸಮಯದಲ್ಲಿ ನಡೆಯುವ ಚುನಾವಣೆಗಳಿಂದಾಗಿ ಜಾರಿ ಆಗುವ ಮಾದರಿ ನೀತಿ ಸಂಹಿತೆಯಿಂದ ಸರಕಾರದ ನಿರತ ಯೋಜನೆ ಹಾಗು ನೀತಿಗಳಲ್ಲಿ ವಿಳಂಬ ಆಗುವುದು ಸಾಮಾನ್ಯ ಸಮಸ್ಯೆಯಾಗಿತ್ತು ಆದರೆ ಏಕ ಕಾಲದಲ್ಲಿ ನಡೆವ ಚುನಾವಣೆಯಿಂದ ಪ್ರಗತಿಯ ಯೋಜನೆಗಳಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಉತ್ತಮ ಆಡಳಿತವು ಅಡಚಣೆ ಇಲ್ಲದೆ ಮುಂದುವರಿಸಬಹುದಾಗಿದೆ.
ಸದೃಢ ಆಡಳಿತ: ಏಕಕಾಲಿಕ ಚುನಾವಣೆ ನಡೆದರೆ ಕೇಂದ್ರ ಹಾಗು ರಾಜ್ಯ ಸರಕಾರಗಳು ತಮ್ಮ ಪೂರ್ಣಾವಧಿಯ ಆಡಳಿತವನ್ನು ನಿರಾತಂಕವಾಗಿ ಮಾಡಬಹುದು. ದೀರ್ಘ ಕಾಲಿಕ ನೀತಿಗಳನ್ನು ಜಾರಿಗೆ ತರಬಹುದು.
ಮತದಾರ ಪ್ರಭುಗೆ ಅನುಕೂಲ:
ಪದೇ ಪದೇ ವಿವಿಧ ಚುನಾವಣೆಗಳಿಗೆ ಮತ ಚಲಾಯಿಸುವುದು ತಪ್ಪಿ ಒಮ್ಮೆಗೆ ಎಲ್ಲಾ ಚುನಾವಣೆಗೂ ಭಾಗಿ ಆಗುವಂತೆ ಮಾಡುತ್ತದೆ. ಇದು ಪ್ರಜೆಯ ಮತದಾನದ ಹಕ್ಕನ್ನು ಕಾಪಾಡಿ ಜನ ತಪ್ಪದೆ ಮತ ಚಲಾಯಿಸಲು ಅನುಕೂಲ ಮಾಡಿ ಕೊಡುತ್ತದೆ.
ಪ್ರಣಾಳಿಕೆಯ ಈಡೇರಿಕೆ:
ಈ ಬಾರಿ ಬಿಜೆಪಿಯ ಪ್ರಣಾಳಿಕೆಯಲ್ಲಿ ಸೂಚಿಸಿದಙತೆಯೇ ಏಕಕಾಲಿಕ ಚುನಾವಣೆಗಳನ್ನು ನಡೆಸಿದರೆ, ‘ನುಡಿದಂತೆ ನಡೆದಂತೆ’ ಆಗುತ್ತದೆ.
ಚುನಾವಣೆ ಪ್ರಜಾಪ್ರಭುತ್ವದ ಮಹಾನ್ ಹಬ್ಬವಾಗಿದೆ. ಅದರಲ್ಲಿ ಜನರ ಭಾಗವಹಿಸುವಿಕೆ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಕರ್ತವ್ಯವೇ ಆಗಿದೆ. ಮತದಾನದ ಸಂಖ್ಯೆಯನ್ನು ಹೆಚ್ಚಿಸಲು ಕೇಂದ್ರ ಸರಕಾರ ಈ ನಡೆ ಸಕಾರಾತ್ಮಕವಾಗಿ ಪರಿಣಮಿಸಲಿದೆ ಎಂದರೆ ಸುಳ್ಳಲ್ಲ.