ಚೀನಾ ದೇಶ ಅದೆಷ್ಟೇ ದೊಡ್ಡದಾಗಿ ಬೆಳೆದಿದ್ದರೂ ಕೂಡ ತನ್ನ ಚಿಲ್ಲರೆ ಬುದ್ಧಿಯನ್ನು ಆಗಿಂದಾಗ್ಗೆ ಕೆಲವು ವಿಚಾರಗಳಲ್ಲಿ ಅದು ಪ್ರದರ್ಶಿಸುತ್ತಲೇ ಇರುತ್ತದೆ. ಈಗ ಅಂತಹುದೇ ಒಂದು ವಿಚಾರ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಕಲವೇ ದಿನಗಳ ಹಿಂದಷ್ಟೇ ಚೀನಾದ ಶಾನ್ವೇಯ್ ಪ್ರಾಣಿ ಸಂಗ್ರಹಾಲಯದಲ್ಲಿ ಪಾಂಡ ಡಾಗ್ ಎಂದು ಸಾಕಲಾಗುತ್ತಿದ್ದ ಪ್ರಾಣಿ ಪ್ರವಾಸಿಗರನ್ನು ಕಂಡ ತಕ್ಷಣ ಬಾಲ ಅಲುಗಾಡಿಸುತ್ತಾ, ಬೊಗಳಲು ಶುರುವಿಟ್ಟಿತ್ತು. ಇದನ್ನು ಕಂಡ ಪ್ರವಾಸಿಗರು ‘ಅರೆ, ಪಾಂಡ ಡಾಗ್ ಗಳು ಹೀಗೆ ಮಾಡಲು ಹೇಗೆ ಸಾಧ್ಯ?!’ ಎಂದು ಅಚ್ಚರಿಗೊಂಡರು. ಅದನ್ನು ವಿಡಿಯೋ ಮಾಡಿ ಸಮಾಜಿಕ ಜಾಲಯಾಣದಲ್ಲಿ ಹರಿಬಿಟ್ಟರು.
ಅದು ಜನರ ನಡುವೆ ಹೆಚ್ಚೆಚ್ಚು ಹಂಚಿಕೆ ಆಗಿ ವಿಡಿಯೋ ವೈರಲ್ ಆಗಿ ಬಿಟ್ಟತು.

ನಕಲಿ ಪಾಂಡದ ವೇಷದಲ್ಲಿ ನಾಯಿ

ಹೀಗೆ ವಿಡಿಯೋ ಜನರಿಗೆ ಅತ್ಯಧಿಕ ಸಂಖ್ಯೆಯಲ್ಲಿ ತಲುಪುತ್ತಿದ್ದಂತೆ ಪ್ರಾಣಿ ಸಂಗ್ರಹಾಲಯದ ಪ್ರತಿನಿಧಿಗಳು ಅದು ಪಾಂಡ ಡಾಗ್ ಅಲ್ಲ. ಅದು “ಚೌ ಚೌ ಎಂಬ ಜಾತಿಗೆ ಸೇರಿದ ಶ್ವಾನ”.ಅದಕ್ಕೆ ಪಾಂಡಾದಂತೆ ಬಣ್ಣ ಬಳಿಯಲಾಯಿತು ಎಂದು ತಪ್ಪು ಒಪ್ಪಿಕೊಂಡಿದ್ದಾರೆ.

ಚೌ ಚೌ ತಳಿಯ ನಾಯಿ

ಈ ಬಗ್ಗೆ ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಜನರು ತೀವ್ರ ವ್ಯಂಗ್ಯ, ಅಪಹಾಸ್ಯ, ಟೀಕೆಗಳನ್ನು ಮಾಡುತ್ತಿದ್ದು, ಚೀನಾ ಕೃತಕವಾಗಿ ಏನನ್ನು ಬೇಕಾದರೂ ಮಾಡಬಲ್ಲದು ಎಂಬುದಕ್ಕೆ ಇದು ಚಿಕ್ಕ ನಿದರ್ಶನವಾಗಿದೆ.

ಇದ್ದ ಬದ್ದ ಪ್ರಾಣಿ ಪಕ್ಷಿ ಕ್ರಿಮಿ ಕೀಟಗಳನ್ನು ಆಹಾರಕ್ಕಾಗಿ ಬಡಿದು ಬಾಯಿಗೆ ಹಾಕಿಕೊಳ್ಳುವ ಹೊಟ್ಟೆಬಾಕತನ ಹೆಚ್ಚಿರುವ ಚೀನಾ ಅಳಿವಿನಂಚಿನಲ್ಲಿ ಇರುವ ಪಾಂಡಗಳ ರಕ್ಷಣೆ ಮಾಡಲು ಹೇಗೆ ಸಾಧ್ಯ ಹೇಳಿ. ಅದೇನಿದ್ದರೂ ಹೀಗೆ ನಾಯಿಗೆ ಪಾಂಡದ ಬಣ್ಣ ಬಳಿದು ಜನರನ್ನು ಮೂರ್ಖರಾಗಿಸಬೇಕಷ್ಟೆ!