ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರೇಣುಕಾಸ್ವಾಮಿ ಅವರ ಅಪಹರಣ ಹಾಗು ಕೊಲೆ ಪ್ರಕರಣದಲ್ಲಿ ಜೈಲು ವಾಸದಲ್ಲಿದ್ದು, ಶವ ಪರೀಕ್ಷೆ ವರದಿಯಲ್ಲಿ ಗಂಭೀರ ಗಾಯಗಳನ್ನು ರೇಣುಕಾ ಸ್ವಾಮಿಯ ದೇಹದಲ್ಲಿ ಗುರುತಿಸಲಾಗಿದೆ.

ಚಾಜ್೯ ಶೀಟ್ ಅಲ್ಲಿ ದರ್ಶನ್ ಹಾಗು ಪವಿತ್ರ ಗೌಡ ಅವರ ನಡುವಿನ ಸಂಬಂಧದ ಕುರಿತು ಹಲವಾರು ಆಶ್ಚರ್ಯಕರ ಸಂಗತಿಗಳನ್ನು ಸೂಚಿಸಲಾಗಿದೆ. 

ಘಟನೆ ನಡೆದ ಸ್ಥಳಗಳಲ್ಲಿ ಮಹಜರು ಮಾಡಲಾಗಿದ್ದು, ತನಿಖೆ ಮೂಲಕ ಹಲವಷ್ಟು ಸಾಕ್ಷಿಗಳನ್ನು ಸಂಗ್ರಹಿಸಲಾಗಿದೆ.

ಜೈಲಿನಲ್ಲಿ ಟಿವಿಯನ್ನು ಬಳಸಲು ದರ್ಶನ್ ಅವರಿಗೆ ಅನುಮತಿ ಇದ್ದು, ಪ್ರಗತಿಯಲ್ಲಿರುವ ಅವರ ಕೇಸ್ ಬಗ್ಗೆ ಮಾಧ್ಯಮಗಳಲ್ಲಿ ಬರುವ ಮಾಹಿತಿಗಳನ್ನು ತಿಳಿಯಲು ಒಪ್ಪಿಗೆ ನೀಡಲಾಗಿದೆ.

ಇದೀಗ ಮಾಧ್ಯಮಗಳು ದರ್ಶನ್ ಕ್ಯಾಮರಾ ಕಂಡು ಮಧ್ಯದ ಕೈ ಬೆರಳನ್ನು ತೋರಿಸಿದರೆಂಬ ಆರೋಪ ಮಾಡಿ, ಹೌಹಾರುತ್ತಿದ್ದಾರೆ. ಆದರೆ ಕೊಲೆ ಆರೋಪಿಗಳಲ್ಲಿ ಓರ್ವರಾದ ದರ್ಶನ್ ಅವರು, ನಾನು ವಿಘ್ನಹರ ಮುದ್ರೆಯನ್ನು ಮಾಡುತ್ತಿದ್ದೆ ಎಂದು ಪೊಲೀಸರಿಗೆ ವಿವರಣೆ ನೀಡಿದ್ದಾರೆ.

ಅಷ್ಟಕ್ಕೂ ಯಾವುದು ಇದು ವಿಘ್ನಹರ ಮುದ್ರೆ ಎಂದು ನೋಡುವುದಾದರೆ, ವಿಘ್ನಗಳ ಹರಣಕ್ಕಾಗಿ ಬಳಸಬಹುದಾದ ಕೈ ಸನ್ನೆಯ ಮುದ್ರೆ ಈ ವಿಘ್ನಹರ  ಮುದ್ರೆ ಆಗಿದೆ. ಇದಕ್ಕೆ ಗಣೇಶ ಮುದ್ರೆ ಎಂದೂ ಕೂಡ ಕರೆಯುತ್ತಾರೆ. ಭಗವಂತ ಗಣೇಶನ ನೆನೆಸಿಕೊಂಡು ಈ ಮುದ್ರೆ ಮಾಡಿದರೆ ವಿಘ್ನಗಳ ಹರಣವಾಗುತ್ತದೆ ಎಂಬುದು ನಂಬಿಕೆ ಆಗಿದೆ.

ಇದು ನಮ್ಮ ಮಾನಸಿಕ ಮತ್ತು ಭಾವನಾತ್ಮಕ ತೊಡಕುಗಳನ್ನು ನಿವಾರಿಸಲು ಸಹಕಾರಿ ಆಗುತ್ತದೆ. ದೈಹಿಕ ಆರೋಗ್ಯಕ್ಕೂ ಈ ಮುದ್ರೆ ಸಹಾಯಕವಾಗುತ್ತದೆ. ಈ ಮುದ್ರೆಯನ್ನು ಮಾಡುವುದರಿಂದ ಮಾನಸಿಕ ಸ್ಥೈರ್ಯ ಹೆಚ್ಚಾಗಿ ಎಂತಹ ಸವಾಲನ್ನು ಕೂಡ ಸಮರ್ಥವಾಗಿ ಎದುರಿಸುವ ಬಲ ಕೊಡುತ್ತದೆ ಎಂದು ಪ್ರತಿಪಾದಿಸಲಾಗಿದೆ.

ರಕ್ತ ಸಂಚಾರವನ್ನು ಈ ಮುದ್ರೆ ಹೆಚ್ಚಿಸುವುದಲ್ಲದೆ, ಮನಸ್ಸಿನಲ್ಲಿ ಎಲ್ಲ ವಿಚಾರಗಳಲ್ಲೂ ಕೂಡ ಸಹಾನುಭೂತಿಯನ್ನು ಹೆಚ್ಚಿಸುತ್ತದೆ.

ಒಟ್ಟಿನಲ್ಲಿ ನಟ ದರ್ಶನ್ ಅವರು ಮಾಡಿದ ಈ ಮುದ್ರೆ ಮಾಧ್ಯಮಗಳ ಕೆಂಗಣ್ಣಿಗೆ ಗುರಿಯಾಗಿದ್ದು ತೀರಾ ವಿಪರ್ಯಾಸ. ‘ಕುಂಬಳ ಕಾಯಿ ಕಳ್ಳ ಎಂದರೆ ಎದೆ ಮುಟ್ಟಿ ನೋಡಿಕೊಂಡ’ ಎನ್ನುವ ಗಾದೆ ಇದ್ದಂತೆ ಎಲ್ಲವೂ ತಮಗೇ ಗುರಿಯಾಗಿಸಿ, ಮಾಡಲಾಗಿದೆ ಎಂದು ಬಿಂಬಿಸುವ ಮಾಧ್ಯಮಗಳ ಪೂರ್ವಾಗ್ರಹ ಪೀಡಿತ ಮನಸ್ಥತಿಯನ್ನು ತ್ಯಜಿಸಬೇಕಿದೆ.

ಟಿ.ವಿ ಮಾಧ್ಯಮಗಳು ಮಾತ್ರ ಅವರಿಗೆ ಹೇಗೆ ಬೇಕೋ ಹಾಗೆ ಯಾರ ಬಗ್ಗೆ ಬೇಕಾದರೂ ತುಚ್ಛವಾಗಿ ಬೇಕಾದರೂ ವರದಿ ಮಾಡಬಹುದು ಆದರೆ ಅವರನ್ನು ಮಾತ್ರ ಯಾರು ಹೇಳುವಂತಿಲ್ಲ ಕೇಳುವಂತಿಲ್ಲ ಎಂಬಂತಹ ನಿರಂಕುಶ ಧೋರಣೆ ಸರಿ ಅಲ್ಲ.

ವಿನಾಕಾರಣ ಈ ವಿಚಾರವಾಗಿ ನಟ ದರ್ಶನ್ ಅವರ ಬಗ್ಗೆ ಸುದ್ದಿ ಬಿತ್ತರಿಸಿ, ಸಂಕಷ್ಟದಲ್ಲಿ ಇರುವ ಅವರ ಬಗ್ಗೆ ಅಪಪ್ರಚಾರ ಹೆಚ್ಚಾಗುವಂತೆ ಕೆಲವು ಟಿವಿ ಮಾಧ್ಯಮಗಳು ವರ್ತಿಸಿದ್ದು, ನಿಜಕ್ಕೂ ನಾಚಿಕೆಗೇಡಿನ ವಿಚಾರವೇ ಆಗಿದೆ.

ಈ ರೀತಿಯ ಕಾಮಾಲೆ ಕಣ್ಣಿನ ವರದಿಗಾರಿಕೆಯ ಪರಿಯನ್ನು ಬಿಟ್ಟು ಟಿವಿ ಮಾಧ್ಯಮಗಳು ವಿಷಯ ನಿಷ್ಠವಾಗಿ ವರದಿಗಳನ್ನು ಮಾಡಬೇಕಿದೆ. ಯಾರನ್ನೋ ಸತ್ಯ ವಿಷಯ ತಿಳಿಯದೆ ಬಲಿಪಶು ಮಾಡಿ ಬಿಡುವುದು ತರವಲ್ಲ!