ಸಿನಿ ಟಾಕ್ ಕಾಲಂ

ಸುಕ್ಕ ಸೂರಿ ಸಿನಿಮಾದ ಛಾಪು ಬ್ಯಾಡ್ ಮ್ಯಾನಸ್೯ನಲ್ಲಿ ಇಲ್ಲ!

ಪ್ರತಿ ಶುಕ್ರವಾರ

ಸಿನಿಮಾ: ಬ್ಯಾಡ್ ಮ್ಯಾನಸ್೯

ನಿರ್ದೇಶಕ: ಸೂರಿ

ನಿರ್ಮಾಪಕ: ಸುಧೀರ್ ಕೆ.ಎಂ

ಬರಹಗಾರರು: ಮಾಸ್ತಿ ಉಪ್ಪರಹಳ್ಳಿ, ಎಸ್.ಸುರೇಂದ್ರನಾಥ್, ಅಮ್ರಿ ಕೇಸರಿ

ತಾರಾಗಣ: ಅಭಿಷೇಕ್ ಅಂಬರೀಶ್, ರಚಿತಾ ರಾಮ್,

            ತಾರಾ, ಶರತ್ ಲೋಹಿತಾಶ್ವ, ದತ್ತಣ್ಣ, ತ್ರಿವಿಕ್ರಂ, ರೋಚಿತ್ ಶೆಟ್ಟಿ

ವಿಧ: ಕ್ರೈಂ ಡ್ರಾಮಾ

ಭರವಸೆಯ ನಿರ್ದೇಶಕನ ಆ್ಯಕ್ಷನ್ ಕಟ್, ಧೀಮಂತ ನಟನ ಮಗನ ಸಾರಥ್ಯದಲ್ಲಿ ತೆರೆ ಕಂಡ ಬಹು ನಿರೀಕ್ಷೆ ಹುಟ್ಟಿಸಿದ್ದ ಚಿತ್ರ ‘ಬ್ಯಾಡ್ ಮ್ಯಾನಸ್೯’ ಸುಕ್ಕ ಕಿಕ್ ಕೊಡುತ್ತದೆ ಎಂದು ನಂಬಿದ್ದವರಿಗೆ ಏಕೋ ಕಾಲಿ ಪಲಾವ್ ಅನ್ನಿಸಿದೆ.

ಸೂರಿ ಅವರ ಸಿನಿಮಾಗಳಲ್ಲಿ ಮಾಮೂಲಾಗಿ ಕಂಡು ಬರುವ ಅದೇ ರಕ್ತಪಾತ, ಭರಪೂರ ಕ್ರೌರ್ಯ, ಅಪರಾಧ, ಮಾಫಿಯಾ, ನಟೋರಿಯಸ್ ಗ್ಯಾಂಗ್, ಸಾವು, ಕಠೋರತನ, ಪೊಲೀಸ್ ಅಧಿಕಾರಿ ಎಲ್ಲವೂ ಈ ಸಿನಿಮಾದ ಕಥೆಯಲ್ಲಿ ಇದೆ ಆದರೂ ಕೂಡ ಹಳೆ ಸಿನಿಮಾಗಳಲ್ಲಿ ಇದ್ದ ಸೂರಿ ನಿರ್ದೇಶನದ ಮಾಂತ್ರಿಕತೆ ಏಕೋ missing ಅನ್ನಿಸುತ್ತದೆ.

ಚಲನಚಿತ್ರ ರಿವಸ್೯ ಸ್ಕ್ರೀನ್ ಪ್ಲೇ ಅಲ್ಲಿ ಪ್ರೇಕ್ಷಕ ಮಹಾ ಪ್ರಭುಗೆ ಕಥೆ ಹೇಳಲು ಹೊರಟು ತ್ರಾಸ ನೀಡಿ ಬಿಡುವುದು ವಿಪರ್ಯಾಸ. ಸುಕ್ಕ ಸೂರಿ ಅವರು ಕಥೆಗೆ ಆಲಾಪ ನೀಡುವ ಬರದಲ್ಲಿ ಶೃತಿ ತಪ್ಪಿದಂತೆ ತೋರುತ್ತದೆ.

ಕಥಾ ನಾಯಕ ರುದ್ರ ತನ್ನ ಬೇಜವಾಬ್ದಾರಿಯಿಂದ ಸರ್ವಿಸ್ ರಿವಾಕ್ವರ್ ಅನ್ನು ಕಳೆದುಕೊಳ್ಳುತ್ತಾನೆ. ಅದೇ ಮಾದರಿಯ ನಾಡ ಪಿಸ್ತೂಲು ತಯಾರು ಮಾಡಿಕೊಳ್ಳಲು ಗೋಡ ಎಂಬ ಕಲ್ಪನಾತ್ಮಕ  ಖತರ್ನಾಕ್ ಊರಿಗೆ ಪ್ರವೇಶಿಸುತ್ತಾನೆ. ಅಲ್ಲಿ ನಡೆವ ವಿವಿಧ ಘಟನೆಗಳ ಮೂಲಕ ಮುಂದುವರೆವ ಚಿತ್ರಕಥೆಯಲ್ಲಿ ನಾಯಕನ ಮಾತೇ ಕೊನೆಗೆ ಹೇಗೆ ಬ್ಯಾಡ್ ಮ್ಯಾನಸ್೯ ಆಗಿ ಹೇಗೆ ಪರಿಣಮಿಸುತ್ತದೆಂದು ಸಿನಿಮಾದಲ್ಲಿ ತೋರಿಸಿದ್ದಾರೆ.

ನೃತ್ಯ ಹಾಗು ನಟನೆ ವಿಷಯದಲ್ಲಿ ಅಭಿಷೇಕ್ ಅಂಬರೀಶ್ ಅವರ ಪ್ರಯತ್ನ ಏಕೋ ಸಕಾರಾತ್ಮಕ ಫಲಿತಾಂಶ ನೀಡಿದಂತೆ‌ ಕಂಡು ಬಂದಂತಿಲ್ಲ. ಪ್ರಥಮಾರ್ಧದಲ್ಲಿ ಪ್ರೇಕ್ಷಕನ ತಲೆಗೆ‌ ಹುಳ ಬಿಟ್ಟು ತೀರಾ ಗೊಂದಲ ಸೃಷ್ಟಿಸುವ ನಿರ್ದೇಶಕರು ಅವುಗಳನ್ನು ಸ್ಪಷ್ಟೀಕರಿಸಲು ವಿಫಲರಾಗುತ್ತಾರೆ. ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಅಭಿಷೇಕ್ ಅವರನ್ನು ವೈಭವೋಪೇತವಾಗಿ ಸಿನಿಮಾದ ಉದ್ದಕ್ಕೂ ತೋರಿಸುವ ಬರದಲ್ಲಿ ಬೇರೆ ಪಾತ್ರಗಳ ಪೋಷಣೆಯಲ್ಲಿ ತೀರಾ ನಿರ್ಲಕ್ಷ್ಯ೯ ನಿರ್ದೇಶಕರು ತೋರಿದಂತಿದೆ.

ಅಭಿಷೇಕ್ ಅಂಬರೀಶ್ ಅವರು ಅಮರ್ ಸಿನಿಮಾದಲ್ಲಿ ಲವರ್ ಬಾಯ್ ಆಗಿ ತಕ್ಕ ಮಟ್ಟಿಗೆ ಅಭಿನಯಿಸಿದ್ದಾರೆ. ಆದರೆ ಈ ಸಿನಿಮಾದಲ್ಲಂತೂ ಅವರ ನಟನೆ ತೀರಾ ನೀರಸವಾದಂತಿದೆ.

ಸೂರಿ ಹಳೆಯ ಸಿನಿಮಾಗಳಲ್ಲಿ ಇದ್ದ ಚಮತ್ಕಾರ ಆಗಲಿ ಜಾಧೂ ಆಗಲಿ ಯಾವುದೂ ಈ ಸಿನಿಮಾದಲ್ಲಿ ಕಂಡು ಬರುವುದಿಲ್ಲ. ಎಲ್ಲೋ ಒಂದು ಕಡೆ ಸೂರಿ ಅವರು ಚರ್ವಿತ್ತ ಚರ್ವಣ, ಅದೇ ರಾಗ ಅದೇ ಹಾಡು ಎಂಬಂತೆ ಒಂದೇ ಮಾದರಿಯ ಸಮಾಜಕ್ಕೆ ಮಾರಕವಾಗುವಂತಹ ರೌಡಿಸಂ ಸಿನಿಮಾಗಳನ್ನೇ ಮಾಡಿ ಅವರ ಚರಿಷ್ಮಾ ಹಾಳಾಗುವಂತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅನ್ನಿಸಿತು. ಸಮಾಜ ಘಾತುಕ ಶಕ್ತಿಗಳನ್ನು ವಿಜ್ರಂಭಿತವಾಗಿ ತೋರಿಸಿ ಸಮಾಜಕ್ಕೆ ತಪ್ಪು ಸಂದೇಶ ನೀಡುವ ಇಂತಹ ಪ್ರಯತ್ನಗಳನ್ನು ಸೂರಿ ಅವರು ಇನ್ನು ಮುಂದಾದರೂ ಕಡಿಮೆ ಮಾಡಬೇಕಿದೆ.

ಸಿನಿಮಾ ಮನರಂಜನೆ ನೀಡಲು ವಿಫಲವಾಗಿ ಮಧ್ಯಂತರದ ಹೊತ್ತಿಗೆ ಚಿತ್ರಮಂದಿರದಲ್ಲೇ ಕುಳಿತುಕೊಳ್ಳಲು ಕಷ್ಟವಾಗುವಷ್ಟು ಸಿನಿಮಾ ಹಳಿ ತಪ್ಪಿದ ರೈಲಿನಂತಾಗಿದೆ.