ಅನೇಕರಿಗೆ ಬೆಳಗ್ಗೆ ಎದ್ದ ತಕ್ಷಣ ಕಾಫಿ ಅಥವಾ ಟೀ ಕುಡಿಯವ ಚಟ ಇರುತ್ತದೆ. ಎಷ್ಟರ ಮಟ್ಟಿಗೆ ಎಂದರೆ ಕಾಫಿ ಅಥವಾ ಟೀ ಕುಡಿಯದೇ ಹೋದರೆ ಅವರಿಗೆ ಯಾವುದೇ ಕೆಲಸವನ್ನು ಕೂಡ ಮಾಡೋದಕ್ಕೆ ಸಾಧ್ಯವಾಗೋದಿಲ್ಲ. ಎಷ್ಟರ ಮಟ್ಟಿಗೆ ಎಂದರೆ ಟೀ ಅಥವಾ ಕಾಫಿಗೆ ಅಡಿಕ್ಟ್ ಆಗಿರ್ತಾರೆ.

ಹೀಗಾಗಿ ಕಾಪೀ ಅಥವಾ ಟೀ ಅವರಿಗೆ ಒಂದು ರೀತಿ ಎನರ್ಜಿ ಡ್ರಿಂಕ್ ಇದ್ದ ಹಾಗೆ. ಅದನ್ನು ಕುಡಿದೇ ಮುಂದಿನ ಕೆಲಸ ಮಾಡೋದು.

ಆದರೆ ನಿಮಗೊತ್ತಾ ಈ ಕಾಫಿ ಅಥವಾ ಟೀ ಇದ್ಯಲ್ಲ ಇದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಅಪಾಯಕಾರಿ. ನಿತ್ಯವೂ ಅದ್ರಲ್ಲೂ ಬೆಳ ಬೆಳಗ್ಗೆ ಇದನ್ನು ಕುಡಿಯೋದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹೀಗಾಗಿ ಇವುಗಳ ಬದಲಾಗಿ ನೀವು ಈ 4 ಪಾನೀಯಗಳನ್ನು ಬೆಳಗ್ಗೆ ಎದ್ದ ತಕ್ಷಣ ಕುಡಿದ್ರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅಷ್ಟಕ್ಕೂ ಆ ನಾಲ್ಕು ಪಾನೀಯಗಳು ಯಾವುದು ಅನ್ನೋದನ್ನು ನೋಡೋಣ.

ನೀರಿಗೆ ಅರಶಿಣ ಮತ್ತು ಕರಿ ಮೆಣಸು ಸೇರಿಸಿ!

ಬೆಳಿಗ್ಗೆ ಎದ್ದ ತಕ್ಷಣ 2-3 ಚಿಟಿಕೆ ಅರಿಶಿನ ಮತ್ತು ಕರಿಮೆಣಸು ಬೆರೆಸಿದ ಬೆಚ್ಚಗಿನ ನೀರನ್ನು ಕುಡಿಯುವುದು ನಿಮ್ಮ ಚಯಾಪಚಯ ಶಕ್ತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೇ, ನಿಮ್ಮ ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.

ಬಿಸಿ ನೀರಿಗೆ ಜೀರಿಗೆ ಸೇರಿಸಿರಿ!

2 ಕಪ್ ನೀರು ತೆಗೆದುಕೊಂಡು ಅದಕ್ಕೆ ಚಿಟಿಕೆ ಜೀರಿಗೆ ಸೇರಿಸಿ ಅದನ್ನು ಚೆನ್ನಾಗಿ ಕುದಿಸಿರಿ. ನೀರು ಕುದಿದು ಅರ್ಥಕ್ಕೆ ಬರುವಂತೆ ನೋಡಿಕೊಳ್ಳಿ. ಆ ನಂತರ ಅದನ್ನು ಇಳಿಸಿರಿ. ಆ ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ನಿಧಾನವಾಗಿ ಕುಡಿಯಿರಿ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಮತ್ತು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ಇದರಿಂದ ಜೀರ್ಣಕ್ರಿಯೆಯೂ ವೇಗವಾಗಿ ಆಗುತ್ತದೆ.

ನಿಂಬೆ ಪಾನಕ ತಯಾರಿಸಿ!

ಬಿಸಿ ನೀರಿಗೆ ಅರ್ಧ ನಿಂಬೆ ಹಿಂಡಿ. ಇದರ ಹುಳಿ ರುಚಿ ನಿಮಗೆ ಇಷ್ಟವಾಗದಿದ್ದರೆ ಜೇನುತುಪ್ಪವನ್ನು ಕೂಡ ಬೆರೆಸಬಹುದು. ಇದರ ಜೊತೆಗೆ ದಾಲ್ಚಿನ್ನಿ ಕೂಡ ಸೇರಿಸಿ. ಈ ಪಾನೀಯವನ್ನು ಕುಡಿಯುವುದರಿಂದ ದೇಹದಿಂದ ಕೊಬ್ಬನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮತ್ತು ಚರ್ಮಕ್ಕೆ ಹೊಳಪನ್ನು ನೀಡುತ್ತದೆ.

ಬೆಳಗ್ಗೆ ಎದ್ದ ತಕ್ಷಣ ಬಿಸಿ ನೀರನ್ನು ಕುಡಿಯಿರಿ!

ನೀವು ಆರೋಗ್ಯವಾಗಿ ಇರಬೇಕೆಂದರೆ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಸರಳ ಅಥವಾ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಇದು ನಿಮ್ಮ ದೇಹವನ್ನು ಹೈಡ್ರೇಟ್ ಮಾಡುತ್ತದೆ. ಮತ್ತು ನಿಮ್ಮ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ಅಷ್ಟೇ ಅಲ್ಲದೇ, ಇದು ನಿಮ್ಮ ದೇಹದಿಂದ ವಿಷವನ್ನು ಹೊರಹಾಕಲು ಸಹ ಸಹಾಯ ಮಾಡುತ್ತದೆ.