ವಿಶ್ವ ಪತ್ರ ಬರೆಯುವ ದಿನವನ್ನು ರಿಚರ್ಡ್ ಸಿಂಪ್ಕಿನ್ ಸ್ಥಾಪಿಸಿದ್ದು, ಕೈ ಬರಹದ ಪತ್ರ ಪೋಸ್ಟ್ನಲ್ಲಿ ಬರುತ್ತಿದ್ದ ಸಂತೋಷ ಮತ್ತು ಉತ್ಸಾಹಕ್ಕೆ ಗೌರವ ಸೂಚಿಸುವ ದಿನವಾಗಿದೆ.

ಡಿಜಿಟಲ್ ಸಂವಹನದ ಯುಗದಲ್ಲಿ ಜಗತ್ತು ಇದ್ದರೂ, ಕೈಬರಹದ ಪತ್ರಗಳು ಇಂದಿಗೂ ತಮ್ಮ ಹೊಳಪನ್ನು ಕಳೆದುಕೊಳ್ಳದೇ, ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದೆ.

ಇಂತಹ ಕೈ ಬರಹದ ಪತ್ರಗಳ ಮಾನ್ಯತೆ ಸಾರುವ ಉದ್ದೇಶದಿಂದ ಸೆಪ್ಟೆಂಬರ್​ 1ರಂದು ವಿಶ್ವ ಲೆಟರ್​ ರೈಟಿಂಗ್​ ಡೇ ಎಂದು ಗುರುತಿಸಲಾಗಿದೆ. ಇದು ವಿಶ್ವಾದ್ಯಂತ ಜನರಿಗೆ ತಮ್ಮ ಸ್ಕ್ರೀನ ​ಟೈಮ್​ನಿಂದ ಹೊರ ಬಂದು ಕೈ ಬರಹದ ಮೂಲಕ ಜನರೊಂದಿಗೆ ಸಂವಹನ ನಡೆಸುವಂತೆ ಒತ್ತಾಯಿಸುತ್ತದೆ. ಕೈ ಬರಹದ ಪತ್ರಗಳು ಅದರ ಸೌಂದರ್ಯವನ್ನು ಹೆಚ್ಚಿಸುವ ಜೊತೆಗೆ ದೈಹಿಕ ಪತ್ರಗಳನ್ನು ಪಡೆಯುವಾಗ ಆಗುವ ಭಾವನೆಗಳನ್ನು ಜನರಲ್ಲಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ದಿನಕ್ಕೆ ವಾರ್ಷಿಕವಾಗಿ ಪ್ರೋತ್ಸಾಹ ನೀಡಲಾಗುತ್ತಿದೆ.

ನೂರಾರು ವರ್ಷಗಳ ಕಾಲ ಸಂವಹನವೂ ನಡೆದ ಎರಡು ದಾರಿ ಎಂದರೆ, ಒಂದು ಪರಸ್ಪರ ಮುಖಾಮುಖಿ ಸಂಭಾಷಣೆ ನಡೆಸುವುದು. ಮತ್ತೊಂದು ಪತ್ರ ರೂಪದಲ್ಲಿ ಭಾವನೆಗಳನ್ನು ಅಕ್ಷರ ರೂಪಕ್ಕೆ ಇಳಿಸಿ ಅದನ್ನು ಕೊರಿಯರ್​ ಮಾಡುವುದು. ಪತ್ರ ಎಂಬುತೆ ಒಂದು ನಿಕಟ ಸಂಬಂಧವಾಗಿದ್ದು, ಬರಹಗಾರರ ಭಾವನೆಗಳನ್ನು ಸಾಗಿಸುತ್ತದೆ. ಇನ್ನು ಈ ಪತ್ರಗಳನ್ನು ಹಿಡಿದು ಓದುತ್ತಾ ಸಾಗುವುದು ಮತ್ತೊಂದು ಸುಂದರ ಅನುಭವ ಆಗಿದೆ.

ವಿಶ್ವ ಪತ್ರ ಬರೆಯುವ ದಿನದ ಇತಿಹಾಸ: ಈ ದಿನವನ್ನು 2014ರಲ್ಲಿ ಸ್ಥಾಪಿಸಿದವರು ಆಸ್ಟ್ರೇಲಿಯಾದ ಲೇಖಕ, ಕಲೆಗಾರ ಮತ್ತು ಫೋಟೋಗ್ರಾಫರ್​ ರಿಚರ್ಡ್​ ಸಿಂಪ್ಕಿನ್​. 1990ರ ಆಚೆಗೆ ರಿಚರ್ಡ್​​ ಆಸ್ಟ್ರೇಲಿಯಾದ ಲೆಜೆಂಡ್​ ಎಂದು ಪರಿಗಣಿಸಿದವರಿಗೆ ಪತ್ರ ಬರೆಯುತ್ತಿದ್ದರಂತೆ, ಅವರಿಂದಲೂ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದರಂತೆ. 2005ರಲ್ಲಿ ತಮ್ಮ ಈ ಪತ್ರ ಬರೆಯುವ ಅನುಭವದ ಕುರಿತು ಆಸ್ಟ್ರೇಲಿಯನ್​ ಲೆಜೆಂಡ್​ ಎಂಬ ಪುಸ್ತಕದಲ್ಲಿ ವಿವರವಾಗಿ ತಿಳಿಸಿದ್ದಾರೆ. ಕೈಬರಹದ ಪತ್ರಗಳನ್ನು ಮತ್ತಷ್ಟು ಗೌರವಿಸಲು, ಅವರು ಪತ್ರಗಳನ್ನು ಬರೆಯಲು ಮೀಸಲಾದ ದಿನವನ್ನು ರಚಿಸಿದರು. ವಿಶ್ವ ಪತ್ರ ಬರೆಯುವ ದಿನವನ್ನು ರಿಚರ್ಡ್​​ ಸಿಂಪ್ಕಿನ್​ ಸ್ಥಾಪಿಸಿದ್ದು, ಕೈ ಬರಹದ ಪತ್ರ ಪೋಸ್ಟ್​ನಲ್ಲಿ ಬರುತ್ತಿದ್ದ ಸಂತೋಷ ಮತ್ತು ಉತ್ಸಾಹಕ್ಕೆ ಗೌರವ ಸೂಚನೆ ದಿನವಾಗಿದೆ.

ಪತ್ರ ಬರೆಯುವ ಮಹತ್ವ: ಡಿಜಿಟಲ್​ ಯುಗದಲ್ಲಿ ಇ-ಮೇಲ್​ ಮತ್ತು ಟೆಕ್ಸ್ಟ್​ ಅನ್ನು ಮಾಡುತ್ತೇವೆ. ಆದರೆ, ಪತ್ರ ಬರೆಯುವ ದಿನ ನಮ್ಮ ಹಳೆಯ ಸಂವಹನ ಮಾದರಿಗೆ ಗೌರವ ಸಲ್ಲಿಕೆ ಮಾಡುವ ದಿನವಾಗಿದೆ. ಈ ದಿನ ಹಲವು ವರ್ಷಗಳಿಂದ ದೂರಾದ ಜನರಿಗೆ ಮತ್ತೆ ಅದರ ಸಂಪರ್ಕಕ್ಕೆ ಒಳಗಾಗಲು ಅವಕಾಶ ನೀಡುತ್ತದೆ. ಜೊತೆಗೆ ಬರೆಯುವ ಮುನ್ನ ಸರಿಯಾಗಿ ಆಲೋಚಿಸುವ ಅವಕಾಶವನ್ನು ಇದು ನೀಡುತ್ತದೆ

ಪತ್ರ ಬರೆಯುಲು ಇರುವ ಪ್ರಮುಖ ಕಾರಣಗಳು

  • ನಿಮ್ಮ ಪ್ರೀತಿಪಾತ್ರರೊಟ್ಟಿಗಿನ ಸಂವಹನಕ್ಕೆ ಆಲೋಚನಾದಾಯಕ ಮಾರ್ಗ ಇದಾಗಿದೆ.
  • ಪತ್ರ ಪಡೆಯುವವವರು ವರ್ಷನುಗಟ್ಟಲೆ ನಿಮ್ಮ ಪತ್ರವನ್ನು ಜೋಪಾನ ಮಾಡಬಹುದು
  • ಪತ್ರ ಬರೆಯುವಾಗ ಜನರು ಖುಷಿಯ ಕೃತಜ್ಞತ ಭಾವ ಮತ್ತು ಜೀವನದ ತೃಪ್ತಿ ಭಾವ ಹೊಂದಬಹುದು.
  • ನಿಮ್ಮ ಸ್ನೇಹ, ವೈವಾಹಿಕ ಸಂಬಂಧ ಅಥವಾ ಅರ್ಥಪೂರ್ಣ ಸಂಬಂಧವನ್ನು ಮತ್ತಷ್ಟು ಬಲಗೊಳಿಸುವ ಮಾರ್ಗ ಇದಾಗಿದೆ.
  • ಕೆಲವು ನಿರ್ದಿಷ್ಟ ಉದ್ದೇಶ ಅಥವಾ ವಿಷಯದ ಬಗ್ಗೆ ಸರಿಯಾಗಿ ಅರ್ಥೈಸಿಕೊಳ್ಳಲು ಸಹಾಯ ಮಾಡುತ್ತದೆ.
  • ಪತ್ರ ಸಂವಹನದಿಂದ ನಿಮ್ಮ ಹಳೆಯ ಸ್ನೇಹಿತರು ಮತ್ತು ಬಂಧುಗಳು ಖುಷಿ ಪಡಲು ಅವಕಾಶ ಸಿಗುತ್ತದೆ
  • ನಿಮ್ಮ ಕೈ ಬರವಣಿಗೆ ಉತ್ತಮವಾಗಿದ್ದು, ಅದರ ಕೌಶಲ್ಯವನ್ನು ತೋರಿಸಲು ಇದೊಂದು ಅವಕಾಶವಾಗಿದೆ.
  • ಟೆಕ್ಸ್ಟ್​ ಅಥವಾ ಇಮೇಲ್​ ಬದಲಾಗಿ ಪತ್ರ ಬರೆಯಲು ಇರುವ ಮತ್ತೊಂದು ಕಾರಣ ನೀವು ಏನನ್ನು ಬರೆದಿದ್ದೀರಾ ಅದನ್ನು ಮತ್ತೊಮ್ಮೆ ಯೋಚಿಸುವಂತೆ ಮಾಡುತ್ತದೆ. ಅದು ಪದೇ ಪದೇ. ಟೆಕ್ಸ್ಟ್​ ಅಥವಾ ಇಮೇಮ್​ಗಳನ್ನು ಹರಿಬಿರಿಯಲ್ಲಿ ಸ್ವೀಕರಿಸುವವರ ಮೇಲೆ ಬೀರುವ ಪರಿಣಾಮವನ್ನು ಯೋಚಿಸದೇ ಕಳುಹಿಸುತ್ತೇವೆ. ಆದರೆ, ಕೈ ಬರವಣಿಗೆ ಪತ್ತದಲ್ಲಿ ಹೀಗಾಗುವುದಿಲ್ಲ.
  • ನೀವು ಪತ್ರವನ್ನೇ ಬರೆಯದೇ ಇದ್ದರೆ, ಇದೀಗ ಈ ದಿನದಲ್ಲಿ ಭಾಗಿಯಾಗಬಹುದಾಗಿದೆ. ಇನ್ನು ಪತ್ರ ಬರೆಯುವಾಗ ಕೆಲವು ಮಾನದಂಡ ಇದ್ದು ಅದರ ಅನುಸಾರ ದಿನಾಂಕ, ಹಾರೈಕೆ, ವಿಷಯ ತಿಳಿಸಿ, ಸಹಿಯೊಂದಿಗೆ ಮುಕ್ತಾಯಗೊಳಿಸಬಹುದು.

ವಿಶ್ವ ಪತ್ರ ಬರೆಯುವ ದಿನದಿಂದ ಆಸಕ್ತಿಕರ ಅಂಶ

  • ಒತ್ತಡ ನಿವಾರಣೆ: ಪತ್ರ ಬರೆಯುವುದರಿಮದ ನೀವು ಆಳವಾಗಿ ಈ ಪ್ರಕ್ರಿಯೆಯಲ್ಲಿ ಮುಳುಗಿ ವಿಷಯಗಳನ್ನು ಹಂಚಿಕೊಳ್ಳುವುದರಿಂದ ಒತ್ತಡ ನಿವಾರಣೆ ಆಗುತ್ತದೆ
  • ಈ ಪತ್ರ ಬರೆಯುವದರ ಮೂಲ ಪದ ಪೆನ್​ ಪಾಲ್​ ಆಗಿದ್ದು 1931ರಲ್ಲಿ ಆಕ್ಸಫರ್ಡ್​ ಡಿಕ್ಷನರಿ ಪೆನ್​ ಪಾಲ್​ ಪದವನ್ನು ಸೇರಿಸಿತು.
  • ಚಾರ್ಲ್ಸ್​​ ಡಾರ್ವಿನ್​ ತನ್ನ ಆತ್ಮೀಯ ಗೆಳೆಯ ಜೋಸೆಫ್​ ಡಲ್ಟೊನ್​ ಹೂಕರ್​ಗೆ ಒಂದು ಸಾವಿರ ಪತ್ರ ಬರೆದಿದ್ದ

ಯಾಕೆ ಪತ್ರ ಬರೆಯುವ ದಿನ: ಇದೊಂದು ಕಲೆ: ತಕ್ಷಣದ ಮೆಸೇಜಿಂಗ್​, ಟೆಕ್ಸ್ಟ್​ ಮೆಸೇಜ್​, ಇಮೇಲ್​ ಬಳಕೆಯಿಂದ ಜನರು ಕೈಯಿಂದ ಪತ್ರ ಬರೆಯುವುದನ್ನು ಮರೆತಿದ್ದಾರೆ. ಕೈಯಿಂದ ಪತ್ರ ಬರೆಯುವ ಸಂಭ್ರಮವನ್ನು ಈ ದಿನ ಪ್ರೋತ್ಸಾಹಿಸುತ್ತದೆ.

ಸಂಪರ್ಕದ ಅರ್ಥ: ಪತ್ರ ಬರೆಯಲು ತೆಗೆದುಕೊಳ್ಳುವ ಸಮಯದಲ್ಲಿ ನಿಮ್ಮ ಸ್ನೇಹಿತರು, ಅಥವಾ ಬಂಧುಗಳ ಕುರಿತು ನಿಜಕ್ಕೂ ಆಲೋಚಿಸುತ್ತೀರು. ಇದು ಡಿಜಿಟಲ್​ ಯುಗಕ್ಕೆ ಮೀರಿದ ಭಾವಾಗಿದೆ. ನಿಮ್ಮ ಸಂಬಂಧದ ಮಹತ್ವವನ್ನು ಇದು ತಿಳಿಸುತ್ತದೆ.

ನೆನಪಿನ ಪತ್ರ: ಪತ್ರವನ್ನು ಸಿಕ್ಕಾಗ ಅನೇಕ ಕಾಲ ಜೋಪಾನ ಮಾಡಲಾಗುತ್ತದೆ. ಅಲ್ಲದೇ, ಆ ಹೊತ್ತಿಗೆ ಸಾಧ್ಯವಾದಷ್ಟು ಬಾರಿ ಓದಲು ಆಗಿರುತ್ತದೆ. ಈ ಮೂಲಕ ನಿಮ್ಮ ದಿನವನ್ನು ಮತ್ತಷ್ಟು ಆತ್ಮೀಯವಾಗಿಸಬಹುದು. ನಿಮಗಾಗಿ ಸಮಯ ತೆಗೆದುಕೊಂಡು ಪತ್ರ ಬರೆದಿದ್ದಾರೆ ಎಂದರೆ ಅದನ್ನು ಓದಿದಾಗಲೆಲ್ಲಾ ಒಂದು ನಗೆ ನಿಮ್ಮ ಮುಖದಲ್ಲಿ ಮೂಡುತ್ತದೆ.