ಮಡಿಕೇರಿ ವಿಧಾನಸಭಾಕ್ಷೇತ್ರದ ಕಾಂಗ್ರೆಸ್ಸಿನ ಅಭ್ಯರ್ಥಿಯಾದ ಡಾ.ಮಂಥರ್ ಗೌಡ ಸೋಮವಾರಪೇಟೆ ತಾಲ್ಲೂಕಿನಾದ್ಯಂತ ಪ್ರಚಾರ ಕೈಗೊಂಡರು.

ಎಡದಂಡೆ ,ಕೂತಿ, ತೋಳೂರುಶೆಟ್ಟಳ್ಳಿ, ದೊಡ್ಡಮನೆಕೊಪ್ಪ, ಹೊಸಬೀಡು, ಶಿರಂಗಳ್ಳಿ,ಗರ್ವಾಲೆಯ ಆಶ್ರಯ ಕಾಲೋನಿ, ಪುನರ್ವಸತಿ ಕೇಂದ್ರದಲ್ಲಿ ಬ್ಲಾಕ್ ಕಾಂಗ್ರೆಸ್ಸಿನ ಅಧ್ಯಕ್ಷ ಬಿ.ಬಿ ಸತೀಶ್, ಮಡಿಕೇರಿ ಕ್ಷೇತ್ರದ ಉಸ್ತುವಾರಿ ಲೋಕೇಶ್ ಸೇರಿದಂತೆ ಇತರೆ ಕಾರ್ಯಕರ್ತರೊಂದಿಗೆ ತೆರಳಿ ಮತಯಾಚಿಸಿದರು.