ಬಿಜೆಪಿ ಮಡಿಕೇರಿ ವಿಧಾನಸಭಾಕ್ಷೇತ್ರ ಅಭ್ಯರ್ಥಿ ಎಂ.ಪಿ ಅಪ್ಪಚ್ಚು ರಂಜನ್ ಪರ ಅವರ ಪುತ್ರ ಡಾ.ಎಂ.ಎ ಕಾರ್ಯಪ್ಪ ಅವರು ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದರು.

ಸ್ಥಳೀಯ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಕೊಡ್ಲಿಪೇಟೆ ಪಟ್ಟಣದ ಅಂಗಡಿ ಮುಂಗಟುಗಳು, ಮನೆ ಮನೆಗಳಿಗೆ ತೆರಳಿ ಕಳೆದ 5 ವರ್ಷದಲ್ಲಿ ರಂಜನ್ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳ ಮಾಹಿತಿ ಪತ್ರ ನೀಡಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಲು ಮನವಿ ಮಾಡಿದರು.