ಕುಶಾಲನಗರದಲ್ಲಿ ಹನುಮ ಜಯಂತಿ ಅಂಗವಾಗಿ ಬಸವನಹಳ್ಳಿಯಿಂದ ಕುಶಾಲನಗರದವರೆಗೆ ಭವ್ಯ ಶೋಭಾ ಯಾತ್ರೆ ಜರುಗಿತು.

ಮೆರವಣಿಗೆಯಲ್ಲಿ ಅಸಂಖ್ಯಾ ಆಂಜನೇಯ ಭಕ್ತರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಬಸವನಹಳ್ಳಿ ಗುಡ್ಡೆ ಹೊಸೂರು ವೀರಾಂಜನೇಯ ಸೇವಾ ಸಮಿತಿ ಮತ್ತು ಕೂಡಿಗೆಯ ಆಂಜನೇಯ ತಂಡಕ್ಕೆ ಪ್ರಥಮ ಬಹುಮಾನ
ಚಾಮುಂಡೇಶ್ವರಿ ಮುಳ್ಳುಸೋಗೆ ತಂಡಕ್ಕೆ ದ್ವಿತೀಯ ಸ್ಥಾನ ಕಳೆದ ಬಾರಿ ಪ್ರಥಮ ಸ್ಥಾನ ಪಡೆದ ಅಂಜನಾಪುತ್ರ ತಂಡಕ್ಕೆ ಈ ಬಾರಿ ತೃತೀಯ ಸ್ಥಾನ ಈ ಬಾರಿ ಕುಶಾಲನಗರದಲ್ಲಿ ನಡೆದ ಹನುಮ ಜಯಂತಿಗೆ 25,000 ಜನಸಂಖ್ಯೆ ಸೇರಿರುವ ಮಾಹಿತಿ ಲಭ್ಯವಾಗಿದೆ.

ತಡರಾತ್ರಿವರೆಗೂ ಶೋಭಾಯಾತ್ರೆ ನಡೆದಿದ್ದು ಮಂಟಪಗಳು ಆಗಮಿಸುವ ವೇಳೆ ಮೈಸೂರು ರಸ್ತೆ ಮತ್ತು ಕೂಡಿಗೆ ರಸ್ತೆಗಳಲ್ಲಿ ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು.