ರಾಜ್ಯದಲ್ಲಿರು ಆಡಳಿತಾರೂಢ ಬಿಜೆಪಿ ಸರ್ಕಾರ ಕಾರ್ಮಿಕರು, ಶೋಷಿತರ, ಬಡವರ ಪರ ಯಾವುದೇ ಕಾರ್ಯಕ್ರಮ ಮಾಡುತ್ತಿಲ್ಲ.ಪ.ಜಾತಿ,ಪ.ಪಂಗಡ ದುರ್ಬಲ ವರ್ಗದ, ಅಲ್ಪಸಂಖ್ಯಾತರ ಜೀವನ ಜೊತೆ ಚೆಲ್ಲಾಟ ಆಡುತ್ತಿದೆ ಎಂದು ವಿರಾಜಪೇಟೆ ವಿಧಾನಸಭಾಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್ ಪೊನ್ನಣ್ಣ ಆರೋಪಿಸಿದ್ದಾರೆ.
ನಿನ್ನೆ ಗೋಣಿಕೊಪ್ಪದ ಕಿತ್ತಳೆ ಬೆಳೆಗಾರರಸಂಘದ ಆವರಣದಲ್ಲಿ ಏರ್ಪಡಿಸಿದ್ದ ಅಸಂಘಟಿತ ಕಾರ್ಮಿಕರ ಸಮಾವೇಶದಲ್ಲಿ ಮಾತನಾಡಿದ ಅವರು ಮೀಸಲಾತಿ ವಿಚಾರವಾಗಿ ಜಾತಿ ಜಾತಿಗಳ ನಡುವೆ ಧರ್ಮ ಧರ್ಮಗಳ ನಡುವೆ ಕಂದಕ ಸೃಷ್ಟಿಸುತ್ತಿದೆ. ಸಮಾಜದಲ್ಲಿ ಬಡವ ಶ್ರೀಮಂತ ಎಂಬುವುದು ದೊಡ್ಡ ಶಾಪ ಅಂತರದಲ್ಲಿ ಈ ರೀತಿಯ ಸಮಾಜ ಒಡೆಯುವ ಕೆಲಸದಲ್ಲಿ ಬಿಜೆಪಿ ತೊಡಗಿದ್ದು, ಇದು ಸರಿಯಾಗಬೇಕಾದರೆ ಕಾಂಗ್ರೆಸಿನ ಪಕ್ಷ ಆಡಳಿತಕ್ಕೆ ಬರಬೇಕಿದೆ ಎಂದು ಪೊನ್ನಣ್ಣ ಹೇಳಿದರು.