ತೀವ್ರ ಅಳಿವಿನಂಚಿಗೆ ಧೂಕಲ್ಪಟ್ಟ ಏಷ್ಯಾದ ರಾಯಲ್ ಬೆಂಗಾಲ್ ಟೈಗರ್ ಅಸ್ತಿತ್ವದಲ್ಲಿ ಇದೆ ಎನ್ನುವುದಕ್ಕೆ ಸಾಕ್ಷ್ಯ ದೊರೆತಿದೆ.ಅಸ್ಸಾಂ ರಾಜ್ಯದ ಸೋನಿತ್ ಪುರ್ ಜಿಲ್ಲೆಯ ಸೋನೈ ರುಪೖ ವನ್ಯಜೀವಿ ಅಭಯಾರಣ್ಯದಲ್ಲಿ ಇರುವ ನಮೆರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಕ್ಯಾಮೆರದಲ್ಲಿ ಬಲಶಾಲಿ ರಾಯಲ್ ಟೈಗರ್ ಓಡಾಟದ ದೃಶ್ಯ ಸೆರೆಯಾಗಿದೆ ಎಂದು ಪಶ್ಚಿಮ ಅಸ್ಸಾಂ ವನ್ಯಜೀವಿ ವಿಭಾಗೀಯ ಅಧಿಕಾರಿ ಪಿರಾಯ್ ಸೂದನ್ ಸಂತಸ ವ್ಯಕ್ತಪಡಿಸಿದ್ದಾರೆ.

1980ರಿಂದ ಅಸ್ಸಾಂ ಭಾಗದಲ್ಲಿ ಅರಣ್ಯ ಪ್ರದೇಶ ಒತ್ತುವರಿಯಿಂದ ಜನವಸತಿ ಪ್ರದೇಶ ವಾಗಿ ಮಾರ್ಪದು ಆಗಿದ್ದು, ಒಂದು ಕೊಂಬಿನ ಘೇoಡಾಮೃಗ, ಚಿರತೆಗಳು ಮತ್ತು ಹುಲಿ ಸಂತತಿ ಸೇರಿದಂತೆ ಹಲವು ವನ್ಯಜೀವಿಗಳು ಅಳಿವಿನ ಅಂಚಿಗೆ ತಲುಪಿದ್ದವು, ಇವುಗಳ ಅಸ್ತಿತ್ವ ಉಳಿಸುವ ಸಲುವಾಗಿ ವನ್ಯಜೀವಿ ವಿಭಾಗ ಪ್ರಾಣಿಗಳು ಬಳಕೆ ಮಾಡುತ್ತಿದ್ದ 12 ಜಲ ಮೂಲ ಗುರುತು ಮಾಡಿದ್ದು ಟ್ರ್ಯಾಪ್ ಕ್ಯಾಮೆರಾ ಅಳವಡಿಸಿ ಜಿಂಕೆ, ಸಾರಂಗ,ಚಿರತೆಗಳ ಚಲನವಲನ ಬಗ್ಗೆ ಕಣ್ಣಿಡಲಾಗಿತ್ತು, ಇದರಲ್ಲಿ ರಾಯಲ್ ಬೆಂಗಾಲ್ ಟೈಗರ್ ಸಹಾ ಬಂದು ನೀರು ಕುಡಿದಿರುವುದು ಸಂತಸ ತಂದಿದೆ.

ಸಾಂದರ್ಭಿಕ ಚಿತ್ರ
Advertisements

ರಾಜ ಮಹಾರಾಜರ ಕಾಲದಲ್ಲಿ ಅರಣ್ಯ ಬೇಟೆಗೆ ಎಂದು ತೆರಳಿದ್ದರೆ ಇಂತಹ ಹೆಬ್ಬುಲಿ ಗಳನ್ನು ಬೇಟೆ ಮಾಡಿದರೆ ಅಯಾ ರಾಜನ ತಾಕತ್ತು ಪರಿಗಣಿಸಲಾಗುತ್ತಿತ್ತು, ಕಾರಣ ಈ ಹುಲಿಗಳು ಅಷ್ಟು ಬಲಿಷ್ಠವಾಗಿರುತಿದ್ದವು. ಇದೇ ಕಾರಣಕ್ಕೆ “ರಾಯಲ್” ಎಂದು ಈ ಹುಲಿಗಳಿಗೆ ಬಿರುದು ಸಿಕ್ಕಿರೋದು ಗಮನರ್ಹ.

ಅಳವಡಿಸಿದ್ದ ಕ್ಯಾಮರಾದಲ್ಲಿ ಸೆರೆಸಿಕ್ಕ ರಾಯಲ್ ಬೆಂಗಾಲ್ ಟೈಗರ್ ದೃಶ್ಯ

ವಲಸಿಗರು ಮತ್ತು ಅರಣ್ಯದಲ್ಲಿ ಒತ್ತುವರಿ,ಟೀ ಎಸ್ಟೇಟ್ ಗಳಿಂದ ಒಟ್ಟು 220 ಚದರ ಕಿಲೋಮೀಟರ್ ಅಭಯಾರಣ್ಯ ಸರಿ ಸುಮಾರು ಅರ್ಧದಷ್ಟು ಒತ್ತುವರಿಯಾಗಿದೆ. ಆದರೂ ವನ್ಯಜೀವಿ ಜೀವಿಶಾಸ್ತ್ರಜ್ಞ ಮತ್ತು ಈಶಾನ್ಯ ವೈಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾ (WTI) ಅರಣ್ಯ ಮತ್ತು ವನ್ಯಜೀವಿ ಉಳಿವಿಗಾಗಿ ಪ್ರಯತ್ನ ನಡೆಸುತ್ತಿದೆ.

ಸಾಂದರ್ಭಿಕ ಚಿತ್ರ

ಭೂತನ್, ಬಾಂಗ್ಲಾದೇಶ, ನೇಪಾಳ ಮಾತು ಈಶನ್ಯ ಭಾರತದಲ್ಲಿ ಆಸ್ತಿತ್ವ ಹೊಂದಿರುವ ಈ ಹುಲಿಗಳು ಇನ್ನು ಮುಂದೆಯಾದರೂ ರಾಯಲ್ ಆಗಿ ಬದುಕಲು ಮಾಡುತಿರುವ ಎಲ್ಲಾ ಪ್ರಯತ್ನಗಳು ಯಶಸ್ವಿಯಾಗಬೇಕಿದೆ ಅಷ್ಟೇ…