* ಧಾರ್ಮಿಕ ಚಿಹ್ನೆಯ ಸರ ಧರಿಸಿ, ಒಳ ಉಡುಪಿನ ಜಾಹಿರಾತು ನೀಡಿದ ಕಿಮ್ ಕರ್ಡಾಶಿಯನ್!

ಕಿಮ್ ಕರ್ಡಾಶಿಯನ್ ಗ್ಲಾಮರ್ ಲೋಕದಲ್ಲಿ ಜನಜನಿತ ಹೆಸರು. ಆಗಿಂದಾಗ್ಗೆ ತನ್ನ ಬಿಚ್ಚು ಮನಸ್ಸಿನಿಂದ ನೆಟ್ಟಿಗರ ಕಣ್ಣು ಕುಕ್ಕುವಂತೆ ಮಾಡುತ್ತಾ, ಅವರಿಗೆ ಅಚ್ಚುಮೆಚ್ಚಾಗಿದ್ದಾಳೆ.

ಇತ್ತೀಚೆಗೆ  ಇನ್ಟಾಗ್ರಾಂ ಸಾಮಾಜಿಕ ಜಾಲತಾಣದಲ್ಲಿ ಹೈಲೈಟ್ ಆಗುವಂತೆ ಡೋಲ್ಸ್ ಹಾಗು ಗಬ್ಬಾನ ಮತ್ತು ಎಸ್.ಕೆ.ಐ.ಎಮ್.ಎಸ್ ಅವರೊಂದಿಗೆ ಸಹ ಭಾಗಿತ್ವದಲ್ಲಿ ವಿಂಟೇಜ್ ಇಟಾಲಿಯನ್ ಸ್ಟೈಲ್ ನ ಶೇಪ್ ವೇರ್ ಹಾಗು ಒಳ ಉಡುಪಿನ ಜಾಹಿರಾತು ನೀಡುತ್ತಾ ಕಾಣಿಸಿಕೊಂಡಿದ್ದಳು.  ಆದರೆ ಅದರಲ್ಲಿ ಧಾರ್ಮಿಕ ಚಿನ್ನೆಯಾದ ಕ್ರಾಸ್ ಹೊಂದಿದ್ದ ಸರ ಧರಿಸಿ ನೆಟ್ಟಿಗರ ಕಣ್ಣು ಕೆಂಪಾಗುವಂತೆ ಮಾಡಿದ್ದಳು.

ಅಶ್ಲೀಲ ಬಟ್ಟೆ ಧರಿಸಿ, ಅರೆಬರೆ ಬೆತ್ತಲಾಗಿ ಧಾರ್ಮಿಕ ಚಿಹ್ನೆಯನ್ನು ಹಾಕಿದ್ದನ್ನು ಜನರು ವಿರೋಧಿಸಿದರು. ಅವಳ ದೇಹ ಸಿರಿಯ ಪ್ರದರ್ಶನದ ಭರದಲ್ಲಿ ಅನ್ಯರ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದರು.


*ಧರಿಸಿದ್ದ ತಿತಲಿಯ 3D ಧರಿಸನ್ನು ದುಬಾರಿ ಬೆಲೆಗೆ ಮಾರಾಟಕ್ಕಿಟ್ಟ ಊರ್ಫಿ!

ಸಾಮಾಜಿಕ ಜಾಲತಾಣದಲ್ಲಿ ತನ್ನ ವಿಚಿತ್ರ, ವಿಶಿಷ್ಟ ಬಟ್ಟೆಗಳಿಂದಲೇ ವೈರಲ್ ಆಗಿರುವ ಊರ್ಫಿ ಜಾವೀದ್ ಈಗ ಮತ್ತೆ ಸುದ್ದಿಯಲ್ಲಿದ್ದಾಳೆ.

Advertisement

ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ತಾನು ಧರಿಸಿದ್ದ ಕಪ್ಪು ಬಣ್ಣದ 3D Butterfly ಬಟ್ಟೆಯನ್ನು ಇನ್ಸ್ಟಾಗ್ರಾಂ ನಲ್ಲಿ ಮಾರಾಟಕ್ಕೆ ಇಟ್ಟಿದ್ದಾಳೆ. ಸುದ್ದಿಯಾಗುತ್ತಿರುವುದು ಅದಕ್ಕಲ್ಲ ಅವಳು ಆ ಬಟ್ಟೆಗೆ ಇಟ್ಟಿರುವ ಮಾರಾಟದ ದುಬಾರಿ ಬೆಲೆಗೆ.‌..!

ಈ ಚಿಟ್ಟೆಯ ವಿನ್ಯಾಸವಿರುವ 3D ಬಟ್ಟೆಗೆ ಬರೊಬ್ಬರಿ 3,66,90,000 ರೂಪಾಯಿಗಳು ಎಂದು ಹಾಕಲಾಗಿದೆ. ಜನರು ಇದ್ದನ್ನು ಕಂಡು ಬಾಯಿ ಬಿಟ್ಟು ಹುಬ್ಬೇರಿಸಿ ಹೌಹಾರಿದ್ದಾರೆ.

ಎಷ್ಟೋ ಮಂದು ಊರ್ಫಿ ಜಾವೀದ್ ಪೊಸ್ಟ್ ನೋಡಿ ಕಿಚಾಯಿಸುತ್ತಿದ್ದರೆ, ಅತ್ತ ಊರ್ಫಿ ಅದೇ ಬೆಲೆಗೆ ಆ ಬಟ್ಟೆಯನ್ನು ಮಾರುವ Confidenceನಲ್ಲಿ ಇದ್ದಾಳೆ.


*ವಿವಾಹದಲ್ಲಿ ಬಿಕಿನಿ ತೊಟ್ಟ ವಧುವಿನ ಪೊಟೊ ವೈರಲ್… ಮುಂದೇನಾಯ್ತು ಗೊತ್ತೇ!

Reddits ಎಂಬ ವೆಬ್ ಸೈಟ್ ಅಲ್ಲಿ ಇತ್ತೀಚೆಗೆ ಪೋಸ್ಟ್ ಮಾಡಲಾಗಿದ್ದ ಪೊಟೋದಲ್ಲಿ ವಧು ಒಬ್ಬಳು ಮದುವೆ ಮನೆಯಲ್ಲಿ ಬಿಕನಿ‌ ಧರಿಸಿಕೊಂಡು ವಿವಾಹವಾಗುತ್ತಿರುವ ದೃಶ್ಯ ವೈರಲ್ ಆಗಿತ್ತು.

ಜನ ಇದನ್ನು ಕಂಡು ಬೆಚ್ಚಿಬಿದ್ದಿದ್ದರು. ತೀವ್ರ ಚರ್ಚೆಗೆ ಗ್ರಾಸವಾಗಿ ವೈರಲ್ ಆಗಿತ್ತು ಸಾಮಾಜಿಕ ಜಾಲತಾಣದಲ್ಲಿ. ಪರ-ವಿರೋಧ ಚರ್ಚೆಗಳು ಸಿಕ್ಕಾಪಟ್ಟೆ ಕಾವು ಪಡೆದುಕೊಂಡಿತು.

ಕೊನೆಗೆ ಪೊಟೋ ನಿಜವಲ್ಲ ಬದಲಿಗೆ ಕೃತಕ ಬುದ್ಧ ಮತ್ತೆ (Artificial Intelligence) ಇಂದ ಸೃಷ್ಟಿಸಿದ್ದುದಾಗಿತ್ತು ಎಂಬ ಸತ್ಯಾಂಶ ಹೊರ ಬಿತ್ತು.
ನೈಜ ಪೊಟೋ ಅಲ್ಲ ಕೇವಲ ತಂತ್ರಜ್ಞಾನದ ಸೃಷ್ಟಿ ಎಂಬ ವಿಚಾರ ಹಲವರಲ್ಲಿ ಆತಂಕ ಕೂಡ ಸೃಷ್ಟಿಸಿತು. Deepfake ಹಾಗು ತಂತ್ರಜ್ಞಾನ ತಿರುಚುವ ಮಾಹಿತಿ‌ ಮೂಲಗಳ ಬಗ್ಗೆ ಈ ಘಟನೆ ಎಚ್ಚರಿಕೆಯ ಕರೆ ಘಂಟೆಯಂತೆ ಇತ್ತು ಇದು. ಮನುಷ್ಯನೇ ಕಂಡು ಹಿಡಿದಿರುವ ಕೃತಕ ಬುದ್ಧಿ ಮತ್ತೆ (Artificial Intelligence) ಮನುಷ್ಯನನ್ನೇ ಯಾಮಾರಿಸಿ, ನಿಜ ಯಾವುದು? ಸುಳ್ಳು ಯಾವುದು? ಎಂದು ಗುರುತಿಸಲಾಗದಷ್ಟು ಬೆಳೆದಿದೆ ಎಂದರೆ ಅದು ಮಾನವನ ಕುರಿತು ಹೆಮ್ಮೆ ಮತ್ತು ತಂತ್ರಜ್ಞಾನದ ಅಡ್ಡಪರಿಣಾಮಗಳ ಬಗ್ಗೆ ಭಯ ಹುಟ್ಟಿಸುತ್ತದೆ…!