ಪ್ರಪಂಚದ ಆನೆಗಳ ಪ್ರಪಂಚದಲ್ಲಿ ಆಫ್ರಿಕಾ ಮತ್ತು ಎಷಿಯನ್ ಆನೆಗಳು ಎಂದು ವಿಂಗಡಿಸಲಾಗಿದೆ. ಅದರಲ್ಲಿ ಹಿಂದುಗಳಿಗೆ ಆನೆ ಅಂದ್ರೆ ಶ್ರೇಷ್ಠ, ಗೌರವದ ಸಂಕೇತ. ಹೀಗೆ ಒಂದು ದೇವರನ್ನು ಹೊತ್ತು ಮೆರೆದ ಒಂದು ಹೆಣ್ಣಾನೆಯೊಂದು ತನ್ನ ಕೊನೆಯ ಕ್ಷಣದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿ ಈ ಪ್ರಪಂಚಕ್ಕೆ ವಿದಾಯ ಹೊಂದಿದ್ದು, ಏಷ್ಯಾದಲ್ಲಿ ಅತೀ ಹೆಚ್ಚು ವರ್ಷ ಬದುಕಿದ ಎರಡನೇ ಆನೆ, ಶ್ರೀಲಂಕಾದ ಮೊದಲ ಆನೆ ಎನ್ನುವ ಇತಿಹಾಸ ನಿರ್ಮಿಸಿದೆ.


ಹೌದು ಇಷ್ಟೆಲ್ಲಾ ಪೀಠಿಕೆ ನೀಡುತಿರುವುದು ಭಾರತದ ಉಪಖಂಡ ಶ್ರೀಲಂಕಾದ ಟಿಕಿರಿ ಎಂಬ ಹೆಣ್ಣಾನೆ ಬಗ್ಗೆ. ನಮ್ಮಲ್ಲಿ ದಸರಾ ಸಂದರ್ಭ ನಾಡ ದೇವತೆ ಚಾಮುಂಡಿ ತಾಯಿಯನ್ನು ಹೊತ್ತ ಬಲರಾಮ, ದ್ರೋಣ, ಅರ್ಜುನ ಸದ್ಯ ಅಭಿಮನ್ಯು ಹೊತ್ತ ಅಷ್ಟೂ ವರ್ಷ ಶ್ರೀಲಂಕಾದ ವಾರ್ಷಿಕ ಪೆರೇರಾ ಉತ್ಸವ ದಲ್ಲಿ 2 ದಶಕ ಹೆಚ್ಚು ಟಿಕಿರಿ ಪಾಲ್ಗೊಂಡಿದ್ದು ವಿಶೇಷ, 2019ರ ಮುನ್ನ ಮೆರವಣಿಗೆಯ ಉಸ್ತುವಾರಿ ಟಿಕಿರಿ ಎನ್ನುವ ಹೆಣ್ಣಾನೆ ವಹಿಸುತ್ತಿತ್ತು.


ಉತ್ಸವದಲ್ಲಿ ಟಿಕಿರಿ ಶ್ರೀಲಂಕಾರಿಗೆ ದೇವರ ಪ್ರತಿರೂಪ. ಅಂದಹಾಗೆ ಟಿಕಿರಿ 1949ರಲ್ಲಿ ಹುಟ್ಟಿದೆ ಎಂದು ಅಂದಾಜಿಸಲಾಗಿದೆ. ಖೆಡ್ಡಾ ಆಪರೇಷನ್ ಮೂಲಕ ಸೆರೆಯಾದ ಈ ಆನೆ ಕೇಗ್ಗಾಲೆ ಜಿಲ್ಲೆಯ ಆನೆಯ ಕ್ಯಾಂಪ್ ನಲ್ಲಿ ಆಸರೆ ಪಡೆದು, ಪ್ರವಾಸಿಗರ ಸಫಾರಿಗೆ ಬಳಸಿಕೊಳ್ಳಲಾಗುತ್ತಿತ್ತು, ಉತ್ಸವ ದ ಸಂದರ್ಭದಲ್ಲಿ ಅಲಂಕೃತ ಪೋಶಾಕುನಲ್ಲಿ ಮುಖ್ಯ ರಸ್ತೆಯಲ್ಲಿ ಗಜ ಗಾಂಭೀರ್ಯದಲ್ಲಿ ಸಾಗುವುದನ್ನು ನೋಡುವುದಕ್ಕೆ ರಸ್ತೆಯ ಎರಡು ಭಾಗದಲ್ಲಿ ಸಹಸ್ರಾರು ಜನರು ಸೇರುತ್ತಿದ್ದರು. ಹೀಗೆ 2019ರ ಮೊದಲು ಉತ್ಸವದಲ್ಲಿ ಕಂಡುಬರುತ್ತಿದ್ದ ಟಿಕಿರಿ ಏಕಾಏಕಿ ನಾಪತ್ತೆಯಾಗಿತ್ತು, ಈ ಬಗ್ಗೆ ಪ್ರಾಣಿಪ್ರಿಯ ಲೆಕ್ ಚೈಲೆರ್ಟ್ ಎಂಬಾತಾ ಕೇಗ್ಗಾಲೆಯಲ್ಲಿ ಇರುವುದು ಪತ್ತೆಯಾಯಿತು. ಬಡಕಲು ದೇಹ, ಆಹಾರ ಸೇವಿಸಲಾಗದೆ, ಸಂಪೂರ್ಣ ಚರ್ಮದ ಕಾಯಿಲೆಯಿಂದ ಬಳಲುತ್ತಿರುವುದು ಕಂಡು ಬಂದು ಆನೆಯ ಸ್ಥಿತಿ ಬಗ್ಗೆ ಅಭಿಯಾನ ನಡೆಸಿದರು.

ಕ್ಯಾಂಪ್ ನಲ್ಲಿ ನೀಡುತ್ತಿದ್ದ ಚಿತ್ರ ಹಿಂಸೆ,ಅಧಿಕಾರಿಗಳ ಬೇಜವಾಬ್ದಾರಿಯಿಂದ ಟಿಕಿರಿ ತನ್ನ 70ನೇ ವಯಸ್ಸಿಗೆ ತನ್ನ ನಿಸ್ವಾರ್ಥ ಸೇವೆಗೆ ಫುಲ್ ಸ್ಟಾಪ್ ಇಟ್ಟಿತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಟಿಕಿರಿ ಜೀವನದಾರಿತ ಸಿನಿಮಾ ಮಾಡಲು ಮುಂದೆ ಅದೆಷ್ಟೋ ಮುಂದೆ ಮಂದಿ ಬಂದರು. ಆದ್ರೆ ಟಿಕಿರಿ ಸಾವಿನ ರಹಸ್ಯ ನಿಗೂಢವಾಗಿತ್ತು, ವರದಿಗಳ ಪ್ರಕಾರ ಟಿಕಿರಿ ಶಾಲು ಹೊದಿಸಿ, ಮೆರವಣಿಗೆ ಮಾಡಲಾಗಿದ್ದು ಸಾವಿಗೆ ಚಿತ್ರಹಿಂಸೆಯೇ ಮುಖ್ಯ ಕಾರಣ ಎಂದು ಸೇವ್ ಎಲಿಫೆಂಟ್ ಫೌಂಡೇಶನ್ ಸ್ಪಷ್ಟಪಡಿಸಿದೆ.