ಮುಂಬರುವ ಚುನಾವಣೆ ಸಂದರ್ಭ ವಿವಿಧ ರೂಪದಲ್ಲಿ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಗಿರಿಜನರನ್ನು ಗುರಿಯಾಗಿರಸಲಾಗುತ್ತಿದೆ, ಇದಕ್ಕಾಗಿ ನಾನಾ ಪ್ರಯೋಗಗಳು ಕಾಂಗ್ರೆಸ್ ಪಕ್ಷ ನಡೆಸುತ್ತಿದೆ ಎಂದು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಎಚ್ಚರಿಕೆ ನೀಡಿದ್ದಾರೆ.

ಬಿಟ್ಟಂಗಾಲದ ಹೆಗ್ಗಡೆ ಸಮಾಜದಲ್ಲಿ ಬಿಜೆಪಿ ಎಸ್.ಟಿ ಮೋರ್ಚಾದ ವತಿಯಿಂದ ಆಯೋಜಿಸಿದ್ದ ಆದಿವಾಸಿಗಳ ಬೃಹತ್ ಸಮಾವೇಶವನ್ನು ಸಮಾವೇಶವನ್ನು ಉದ್ಘಾಟಿಸಿ, ಮಾತನಾಡಿದ ಅವರು ಆದಿವಾಸಿ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ವಸತಿ ಶಾಲೆ, ಹಾಡಿಗಳಿಗೆ ಕಾಂಕ್ರಿಟ್ ರಸ್ತೆ, ಆಹಾರ ಸಾಮಗ್ರಿಗಳು, ಹೀಗೆ ಗಿರಿಜನರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರಾಜ್ಯ ಹಾಗು ಕೇಂದ್ರ ಸರ್ಕಾರ ಮಾಡಿದೆಟ. ಹೀಗೆ ಹಲವು ಯೋಜನೆಗಳು ಮುಂದೆ ಕೂಡ ಬರಲಿದೆ ಹಾಗಾಗಿ ಬಿಜೆಪಿ ಪಕ್ಷದ ಕೈ ಹಿಡಿಯಬೇಕು ಎಂದು ಅವರು ಕರೆ ನೀಡಿದರು.