ಕೊಡಗು ಜಿಲ್ಲೆಗೆ ಅಕ್ಕಪಕ್ಕ ಹಲವು ಭಾಷಿಕರ ಪ್ರಭಾವವಿದೆ, ಆದ್ರೆ ಕನ್ನಡ ಎಲ್ಲರನ್ನು ಒಟ್ಟುಗೂಡಿಸಿದೆ ಎಂದು ಶಾಸಕ ಡಾ. ಮಂತರ್ ಗೌಡ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕುಶಾಲನಗರದಲ್ಲಿ ಏರ್ಪಡಿಸಿದ್ದ 5 ಸಾವಿರ ಮಂದಿಯಿಂದ ಕಂಠಗಾಯನ ಕಾರ್ಯಕ್ರಮದ ಅರಶಿಣ ಕುಂಕುಮ ವೇದಿಕೆಯಲ್ಲಿ ಧ್ವಜಾರೋಹಣ ಮಾಡುವ ಮೂಲಕ ಮಾತನಾಡಿದ ಅವರು ಭವಿಷ್ಯದ ಮಕ್ಕಳಲ್ಲಿ ಮಾತೃಭಾಷೆ ಮೇಲೆ ಒಲವು ಹೆಚ್ಚಾಗಬೇಕು ಎಂದು ಕರೆ ನೀಡಿದರು. ಕಂಠ ಗಾಯನ ಕಾರ್ಯಕ್ರಮದಲ್ಲಿ ಸುಮಾರು 5 ಸಾವಿರ ಮಂದಿ ಪಾಲ್ಗೊಂಡು, ನಾಡಗೀತೆ, ರೈತ ಗೀತೆ, ಕನ್ನಡದ ಗೀತೆ ಗಳನ್ನು ಹಾಡಿದರು.