ಮಳೆಗಾಲದಲ್ಲಿ ಕಾವೇರಿ ನದಿ ಉಕ್ಕಿಹರಿಯುವ ಸಂದರ್ಭ ಮಡಿಕೇರಿ ವಿರಾಜಪೇಟೆ ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಸೃಷ್ಟಿ ಮಾಡಿದ ಬೇತ್ರಿ ಇದೀಗ ಮೊಸಳೆಯಿಂದ ಸುದ್ದಿಯಲ್ಲಿದೆ ಕಾವೇರಿ ನದಿ ನೀರಿನಲ್ಲಿ ಸ್ವಲ್ಪ ಪ್ರಮಾಣದ ನೀರು ಇಳಿಕೆ ಕಂಡು ಬಂದಿದ್ದು ಹಾಗೇ ಬಿಸಿಲು ಕಾಣಿಸಿಕೊಂಡ ಕಾರಣ ನದಿ ದಡದಲ್ಲಿ ಮೊಸಳೆ ಕಾಣಿಸಿಕೊಂಡಿದ್ದು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ, ಕೆಲವು ದಿನಗಳ ಹಿಂದೆಯಷ್ಟೇ ಇದೇ ರೀತಿ ಮೊಸಳೆ ನಾಪೋಕ್ಲು ವ್ಯಾಪ್ತಿಯ ಕಾವೇರಿ ನದಿಯಲ್ಲಿ ಕಾಣಿಸಿಕೊಂಡಿತ್ತು.