ಭಾರತದಲ್ಲಿ ವಕ್ಫ಼್ ಅನ್ನೋದು ಆರಂಭವಾಗಿದ್ದು, ದೆಹೆಲಿ ಸುಲ್ತಾನರ ಕಾಲದಲ್ಲಿ ವಕ್ಫ಼್ ಬೋಡ್೯ ಶುರುವಾಗಿದ್ದು ಜವಹರ ಲಾಲ್ ನೆಹೆರು ಪ್ರಧಾನಿಯಾಗಿದ್ದಾಗ. ವಕ್ಫ಼್ ಗೆ ಮೊದಲ ಆಸ್ತಿ ದೊರೆತಿದ್ದು ಸುಲ್ತಾನರ ಕಾಲದಲ್ಲಿ. ಹಾಗೆ ಒಂದು ಆಸ್ತಿ ವಕ್ಫ಼್ ಬೋಡ್೯ನ ಪಾಲಾದರೆ, ಮತ್ತೆ ಅದನ್ನು ಇತರೆ ಧರ್ಮದವರಿಗೆ ಮಾರಲಾಗಲಿ, ದಾನ ಮಾಡಲಾಗಲಿ ಆಗುವುದೇ ಇಲ್ಲ. ಭಾರತದಲ್ಲಿ 250 ವರ್ಷ ಮತಾಂಧತೆಯಲ್ಲೇ ಆಳ್ವಿಕೆ ನಡೆಸಿದ ಮೊಗಲರ ಕಾಲದಲ್ಲಂತೂ ವಕ಼್ಫನ ಆಸ್ತಿಯ ಪ್ರಮಾಣ ತೀರಾ ಅಧಿಕವಾಗಿತ್ತು. 1995ರಲ್ಲಿ ಮತ್ತೆ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರಕಾರವು ಹೇರಳವಾಗಿ ಆಸ್ತಿಗಳನ್ನು ಕಬಳಿಸಬಹುದಾದಂತೆ ವಕ್ಫ್ ಕಾಯ್ದೆಯನ್ನು ಮಾರ್ಪಾಡು ಮಾಡಿತು.

ಕಾನೂನಿನ ಪುಟಗಳಿಂದ…


ಮೊದಲ ಕಾನೂನು:
ಮೊದಲ ವಕ್ಫ಼್ ಬೋಡ್೯ ಕಾನೂನು 1954ರಲ್ಲಿ ವಕ್ಫ಼್ ಆಸ್ತಿಗಳ ನಿರ್ವಹಣೆಗೆಂದು ನೆಹೆರು ಸರಕಾರ ಕೇಂದ್ರದಲ್ಲಿ ಜಾರಿಗೆ ತರಲಾಯಿತು.ಮುಸ್ಲಿಂ ಹಿಂದೂ ಎಂದು ಧರ್ಮಾಧಾರದಲ್ಲಿ ಪಾಕಿಸ್ತಾನ ಭಾರತ ವಿಭಜನೆ ಆದಮೇಲೆ ನೆಹೆರು ಸರಕಾರ ಭಾರದಲ್ಲಿ ಉಳಿದ ಮುಸ್ಲಿಂ ಅಲ್ಪ ಸಂಖ್ಯಾತರಿಗೆ ಎಲ್ಲಾ ಸುಖ ಸೌಕರ್ಯಗಳನ್ನು ಒದಗಿಸುವ ಭಾಗವಾಗಿಯೇ ವಕ್ಫ಼್ ಬೋಡ್೯ ಸ್ಥಾಪನೆಗೆ ಮುಂದಾದರು. ಸ್ವಾತಂತ್ರ್ಯದ ನಂತರ ಹಲವು ಮುಸ್ಲಿಮರು ಪಾಕಿಸ್ತಾನ ಸೇರಿದರೂ ಕೂಡ ಇಲ್ಲಯೂ ಅವರನ್ನು ಉಳಿಸಿಕೊಂಡು ಅವರ ಸರ್ವತೋಮುಖ ಅಭಿವೃದ್ಧಿಗೆ ಕಾಂಗ್ರೆಸ್ ಕಟಿಬದ್ಧವಾಯಿತು. ವಕ಼್ಫ್ ಆಸ್ತಿಗಳ ಅಧಿಕಾರದ ಕೇಂದ್ರೀಕರಣವಾಯಿತು. ಯಾರೂ ಮುಟ್ಟಲಾಗದಂತೆ ಸುಭದ್ರ ಹಾಗು ಸುಭೀಕ್ಷವಾಗಿ ವಕ಼್ಫ್ ಬೋರ್ಡಿನ ಆಸ್ತಿಗಳು ಬೃಹದಾಕಾರವಾಗಿ ಬೆಳೆಯಿತು. 1964ರಲ್ಲಿ ಕಾಂಗ್ರೆಸ್ ಸೆಂಟ್ರಲ್ ವಕ್ಫ಼್ ಬೋಡ್೯ನ ಸ್ಥಾಪನೆ ಕೂಡ ಮಾಡಿತು. ಮುಂದೆ ಕೂಡ ಕಾಂಗ್ರೆಸ್ ಮುಸ್ಲಿಮರ ಮೇಲಿದ್ದ ಮಹಾನ್ ಮುತುವರ್ಜಿಯನ್ನು ಮರೆಯಲಿಲ್ಲ. 1995ರಲ್ಲಿ ವಕ಼್ಫ್ ಬೋಡ್೯ನ ಕಾಯ್ದೆಯಲ್ಲಿ ಮತ್ತೂ ಸಡಿಲಿಕೆ ತಂದು ಬೇಕಾ ಬಿಟ್ಟಿ ಆಸ್ತಿಯನ್ನು ಮಾಡುವಂತೆ ನೋಡಿಕೊಂಡಿತು. ಆಗಲೇ ನೋಡಿ ಎಲ್ಲಾ ರಾಜ್ಯಗಳೂ ಹಾಗು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಕ್ಫ಼್ ಬೋಡ್೯ ರಚನೆಗೆ ಕಾಂಗ್ರೆಸ್ ಅವಕಾಶ ನೀಡಿತು. ಅಲ್ಲಿಂದೀಚೆಗೆ ಕ್ಷಿಪ್ರಗತಿಯ ಆಸ್ತಿಯಲ್ಲಿನ ಹೆಚ್ಚಳವಾಗಿದೆ. ವಕ್ಫ಼್ ಬೋಡ್೯ ಬೆಟ್ಟು ಮಾಡಿದ ಇಷ್ಟ ಬಂದ ಆಸ್ತಿ ತನ್ನದು ಎಂದರೆ ಸಾಕು ಅದರ ಮಾಲಿಕ ವಕ಼್ಫ೯ ಬೋಡ್೯ನ ಟ್ರಿಬ್ಯುನಲ್ ಗೆ ಹೋಗಿ ಅಲ್ಲಿ ಕಾನೂನಾತ್ಮಕ ಹೋರಾಟ ನಡೆಸಬೇಕಿತ್ತು. ಅದರಲ್ಲಿ ತೀರ್ಮಾನ ತೀರ್ಪು ಎಲ್ಲವೂ ಮುಸ್ಲಿಂ ಸದಸ್ಯರದ್ದೇ ಆಗಿರುತ್ತಿತ್ತು. ಅಷ್ಟು ಸಾಲದು ಎಂಬಂತೆ ಆಗ ಈ ವಕ್ಫ಼್ ಬೋಡ್೯ ಟ್ರಿಬ್ಯುನಲ್ಲಿಗೆ code of civil procedure 1908ರ ಪ್ರಕಾರ ಸಿವಿಲ್ ಕೋರ್ಟಿನ ಹಾಗೆ ಅಧಿಕಾರ ನಡೆಸುವ ಶಕ್ತಿಯನ್ನು ಯು.ಪಿ.ಎ ಸರಕಾರ ಬರಪೂರವಾಗಿ ತುಂಬಿತ್ತು. ಈ ರೀತಿಯ ತಲೆ ಬುಡವಿಲ್ಲದ ತುಷ್ಟೀಕರಣದ ಪರಮಾವಧಿಯಂತೆ ವಕ್ಫ್ ಬೋಡ್೯ ಅನ್ನು ಯಾರೂ ಮುಟ್ಟಲಾಗದಷ್ಟು ಬೆಳೆದುಬಿಟ್ಟಿತು ಕಾಂಗ್ರೆಸ್ಸಿಗೆ ಕೃಪಾಕಟಾಕ್ಷದಲ್ಲಿ. ಹಾಗಂತ ಬಡ ಮುಸ್ಲಿಮರಿಗೆ ಇದರಿಂದ ಯಾವ ಪ್ರಯೋಜನವೂ ಆಗಲಿಲ್ಲ.

ವಕ್ಫ಼್ ಬೋರ್ಡಿನ ಈಗಿನ ಒಟ್ಟು ಆಸ್ತಿ ಆನೆ ಗಾತ್ರ:
ಈಗಿನ ಭಾರತದ ರಕ್ಷಣಾ ಹಾಗು ರೈಲ್ವೆ ಇಲಾಖೆ ನಂತರ ಅತಿ ಹೆಚ್ಚು ಆಸ್ತಿ ಹೊಂದಿರುವ ವಕ಼್ಫ್ ಬೋಡ್೯ ಆಗಿದೆ. ಅದರ ಹಿಡಿತದಲ್ಲಿ ಈಗ ಭಾರತದ ಒಟ್ಟು 8.7 ಲಕ್ಷ ಆಸ್ತಿಗಳಿವೆ. ಅದರ ಒಟ್ಟು ವಿಸ್ತೀರಣವು 9.6 ಲಕ್ಷ ಎಕರೆಗಳಷ್ಟು ಬೃಹತ್ ಆಗಿದೆ. ಅದರ ಈಗಿನ ಒಟ್ಟು ಮೌಲ್ಯ 1.2ಲಕ್ಷ ಕೋಟಿ ರೂಪಾಯಿಗಳಷ್ಟು ದೊಡ್ಡದು ಎಂದರೆ ಅಚ್ಚರಿಯಾಗುತ್ತದೆ.

ಈ ಆಸ್ತಿಯನ್ನು ಅಷ್ಟನ್ನೂ ಇಸ್ಲಾಮಿನ ಧಾರ್ಮಿಕ ಕಾರಣಗಳಿಗೆ ಬಳಲು ನಿರ್ವಹಣೆ ಮಾಡಲಾಗುತ್ತಿದೆ. ಇದನ್ನು ದೇಶದ ಒಟ್ಟು ರಾಜ್ಯಗಳ 32 ವಕ಼್ಫ್ ಬೋಡ್೯ಗಳು ನಿರ್ವಹಿಸುತ್ತಿದೆ. ಅತಿಯಾದ ರಾಜಕೀಯ ಷಡ್ಯಂತ್ರ, ಓಲೈಕೆ ರಾಜಕಾರಣ, ವೋಟ್ ಬ್ಯಾಂಕ್ ಪೊಲಿಟಿಕ್ಸ್ ನಿಂದಾಗಿ ಕಾಂಗ್ರೆಸ್ ವಕ಼್ಫ್ ಬೋಡ್೯ ಅನ್ನು ಈ ಮಟ್ಟಕ್ಕೆ ಆಸ್ತಿ ಮಾಡಿಕೊಳ್ಳಲು ಬೇಕಂತಲೇ ಅನುವು ಮಾಡಿಕೊಟ್ಟಿತು. ಹಾಗಂತ ಎಲ್ಲಾ ಮುಸ್ಲಿಮರು ಇದರಿಂದ ಉದ್ಧಾರ ಆಗಿ ಬಿಟ್ಟರಾ ಎಂದು ನೋಡುವುದಾದರೆ, ನಮಗೆ ಬೀದಿಗಳಲ್ಲಿ ಹಳೆ ಪಾತ್ರೆ, ಕಬಣ, ಸೀಸಾ, ಪೇಪರ್ ಎಂದು ಕೂಗುತ್ತಾ ಹೋಗುವ, ಮೀನೋ ಮೀನೋ ಎಂದು ಸೈಕಲ್ಲಿನಲ್ಲಿ ಪೆಡಲ್ ತುಳಿಯುತ್ತ ಮೀನಿನ ವ್ಯಾಪಾರ ಮಾಡುವ, ಕೈ ಮೈ ಎಲ್ಲಾ ಮಸಿ ಮಾಡಿಕೊಂಡು ಗಾಡಿಗಳಿಗೆ ಪಂಚರ್ ಹಾಕುವ ಕಟ್ಟಕಡೆಯ ದರಿದ್ರನೂ ನಮಗೆ ಕಾಣ ಸಿಗುತ್ತಾನೆ.

ವಕ್ಫ಼್ ಬೋಡ್೯ನ ಆಸ್ತಿ ಕಬಳಿಕೆಯ ಪ್ರಯತ್ನ ಒಂದೆರಡಲ್ಲ!:

ಭಾರತದ ವಕ್ಫ಼್ ಬೋರ್ಡಿನ ವಿವಾದ ಆಸ್ತಿಗಳ ದುರ್ಬಳಕೆ ಹಾಗು ಕಬಳಿಕೆಗೆ ಸಂಬಂಧಿಸಿದ ಲಿಸ್ಟು ಸ್ವಲ್ಪ ದೊಡ್ಡದೇ ಇದೆ. ಕೆಲವು ಪ್ರಮುಖವಾದವು ಇಲ್ಲಿವೆ:


*ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಸಮಿತಿಯು 2012ರಲ್ಲಿ ಸಲ್ಲಿಸಿದ ವರದಿಯ ಪ್ರಕಾರ 29,000 ಎಕರೆ ಅಷ್ಟು ಭೂ ಭಾಗವನ್ನು ಅದು ಕಾನೂನುಬಾಹೀರವಾಗಿ ಪರಿವರ್ತಿಸಿತ್ತು ಎಂಬ ಮಹತ್ತರ ಮಾಹಿತಿ ಸಾರ್ವಜನಿಕರೆದುರಿಗೆ ಬಟಾಬಯಲಾಯಿತು.

*ಕೃಷ್ಣ ಜನ್ಮಭೂಮಿ-ಈದ್ಗಾ ಮೈದಾನ ವಿವಾದ: ಕೃಷ್ಣ ಜನ್ಮ ಭೂಮಿಗೆ ಹೊಂದಿಕೊಂಡಿರುವ ಆಸ್ತಿಯನ್ನು ತನ್ನದೇ ಎಂದು ವಕ಼್ಫ್ ಬೋಡ್೯ ಅತಿಕ್ರಮಣ ಮಾಡಿಕೊಂಡಿತು. ನಂತರ ಇದು ವಿವಾದವೆದ್ದು ಕಾನೂನು ಹೋರಾಟದ ಹಾದಿ ಹಿಡಿಯಿತು. ಈಗಲೂ ವ್ಯಾಜ್ಯ ನಡೆಯುತ್ತಲೇ ಇದೆ.

*ರಾಮ್ ಪುರ ರಾಯಲ್ಸ್ ದಾವೆ: 2022ರಲ್ಲಿ ವಕ್ಫ್೯ ಬೋಡ್೯ ತಾನು ಕಾನೂನು ಬಾಹೀರವಾಗಿ ಅತಿಕ್ರಮಣ ಮಾಡಿಕೊಂಡಿದ್ದ ಸುಮಾರು ಏಳು ಆಸ್ತಿಗಳನ್ನು ರಾಮ್ ಪುರ ರಾಯಲ್ಸ್ ಗೆ ಹಿಂತಿರುಗಿಸಿತ್ತು. ಆಗಿನ ವಕ಼್ಫ್ ಸಚಿವ ಅಜ಼ಮ್ ಖಾನ್ ಈ ಆಸ್ತಿಗಳನ್ನು ಆಸ್ತಿಗಳನ್ನು ಕಬಳಿಸಿದ್ದರು ಎಂಬ ನಿಜಾಂಶ ಬಯಲಾಯಿತು.

*ದೆಹೆಲಿ ವಕ್ಫ್ ನೇಮಕಾತಿ ಹಗರಣ: 2023ರಲ್ಲಿ ಎನ್ಫೋಸ್೯ಮೆಂಟ್ ಡೈರೆಕ್ಟರೇಟ್ (ಇಡಿ) ಎ.ಎ.ಪಿ ಪಕ್ಷದ ರಾಜಕಾರಣಿಯಾದ ಅಮಾನತುಲ್ಲಾ ಖಾನ್ ಸೇರಿದಂತೆ ಹಲವರನ್ನು ದೆಹೆಲಿ ವಕ್ಫ್ ಬೋಡ್೯ಗೆ ಕಾನೂನು, ನಿಯಮ ಪಾಲಿಸದೆ ಸ್ವಜನರನ್ನು ನೇಮಿಸಿದ್ದ ಕಾರಣದಿಂದ ಬಂಧಿಸಲಾಗಿತ್ತು.

*ಮೆರಿಯೋಟ್ ಹೋಟೆಲ್ ಆಸ್ತಿ ವ್ಯಾಜ್ಯ:
ಮೆರಿಯೋಟ್ ಹೋಟೆಲ್ ನ ಆಸ್ತಿಯನ್ನು ತನ್ನದು ಎಂದು ವಕ್ಫ಼್ ಬೋಡ್೯ ಘೋಷಿಸಿಕೊಂಡಿತ್ತು. ತೆಲಂಗಾಣದ ಹೈಕೋಟ್೯ ಮೆಟ್ಟಿಲನ್ನು ಈ ದಾವೆ ಏರಿತ್ತು. ಆದರೆ ವಕ್ಫ್ ಬೋಡ್೯ ಆಸ್ತಿಯನ್ನು ತನ್ನದು ಎಂದು ನಿರೂಪಿಸಲು ಸಾಕ್ಷಿ ಪುರಾವೆ ಒದಗಿಸುವಲ್ಲಿ ಸಂಪೂರ್ಣ ವಿಫಲವಾಯಿತು. ಹಾಗಾಗಿ ಹೈಕೋಟ್೯ ಈ ದಾವೆಯನ್ನು ಸಂಪೂರ್ಣ ತಿರಸ್ಕರಿಸಿತು.

ತಿದ್ದುಪಡಿಯ ಜರೂರಿ ಇತ್ತು…!

ಯಾವುದೇ ಅಂಕುಶವಿರದೆ ಮದಗಜದಂತೆ ಕಂಡ ಕಂಡ ಜನರ ಅನ್ಯ ಮತೀಯರ ಆಸ್ತಿಗಳನ್ನು ಅತಿಕ್ರಮಣ ಮಾಡಿಕೊಂಡು ಆಗಿಂದಾಗ್ಗೆ ಕೋರ್ಟು ವ್ಯಾಜ್ಯಗಳಲ್ಲೇ ಮುಳುಗೇಳುತ್ತಿದ್ದ ವಕ್೯ ಬೋರ್ಡಿನ ಸರ್ವಾಧಿಕಾರಿ ನಿರಂಕುಶ ಪ್ರಭುತ್ವಕ್ಕೆ ಒಂದಿಷ್ಟು ನಿಯಂತ್ರಣ ತರುವ ಸಲುವಾಗಿ ಅಧಿಕಾರ ವಿಕೇಂದ್ರಿಕರಣದ ಸಲುವಾಗಿ 2024ರ ಹೊಸ ತಿದ್ದುಪಡಿಯನ್ನು ಬಿಜೆಪಿ ನೇತೃತ್ವದ ಎನ್.ಡಿ.ಎ ಸರಕಾರ ಜಾರಿಗೆ ತರಲು ಹೊರಟಿದೆ.

  • ಕಾಯ್ದೆಯ ಮರುನಾಮಕರಣ:
    ‘Waqf board act 1994ಗೆ ‘ ‘united waqf management, empowerment, efficiency and development act,1994’ ಎಂದು ಮರುನಾಮಕರಣ ಮಾಡಲಾಗಿದೆ.
ಅಲ್ಪಸಂಖ್ಯಾತರ ಖಾತೆ ಸಚಿವ ಕಿರಣ್ ರಿಜಿಜು

*ಪ್ರತಿನಿಧಿತ್ವದ ಒಳಗೊಳ್ಳುವಿಕೆ: ಮುಂದಿನ ದಿನಗಳಲ್ಲಿ ಇಬ್ಬರು ಮಹಿಳೆಯರು, ಒಬ್ಬ ಸುನ್ನಿ ಸಮುದಾಯಕ್ಕೆ ಸೇರಿದವರು, ಒಬ್ಬ ಶಿಯಾ ಮುಸ್ಲಿಂ, ಹಾಗು ಇಬ್ಬರು ಮುಸ್ಲಿಂ ಏತರೆ ಸದಸ್ಯರನ್ನು ಪ್ರತಿನಿಧಿತ್ವದಲ್ಲಿ ಒಳಗೊಂಡಂತೆ ವಕ್ಫ಼್ ಮಂಡಳಿಯು ರೂಪಿತವಾಗಬೇಕಾಗುತ್ತದೆ.

*ಸೆಂಟ್ರಲ್ ವಕ್ಫ಼್ ಕೌನ್ಸಿಲ್ : ಕೇಂದ್ರ ವಕ್ಫ಼್ ಕೌನ್ಸಿಲ್ ಗೆ ವಕ಼್ಫ್ ಹೊಂದಿರುವ ಒಟ್ಟಾರೆ ಆಸ್ತಿಯ ನಿರ್ವಹಣೆ ಮಾಡುವ ಅಧಿಕಾರವಿರುತ್ತದೆ.

*ಜಿಲ್ಲಾಧಿಕಾರಿಗೆ ಅಧಿಕಾರ: ವಕ್ಫ್ ಬೋಡ್೯ನಿಂದ ಅಧಿಕಾರದ ದುರುಪಯೋಗ ಆಗದಂತೆ ತಪ್ಪಿಸುವ ಅಧಕಾರವನ್ನು ಜಿಲ್ಲಾಧಿಕಾರಿಗೆ ಕೊಡುತ್ತದೆ. ಯಾವುದೇ ಆಸ್ತಿಯನ್ನು ಇನ್ನು ಮುಂದೆ ವಕ್ಫ್ ಬೋಡ್೯ ತನ್ನದು ಎಂದು ಘೋಷಿಸುವ ಮುನ್ನ ಅದರ ಕುರಿತು ಜಿಲ್ಲಾಧಿಕಾರಿಗಳು ಕೂಲಂಕುಶವಾಗಿ ಪರಿಶೀಲಿಸತಕ್ಕದ್ದಾಗಿದೆ.

ಪ್ರಧಾನಿ ಶ್ರೀ ನರೇಂದ್ರ ಮೋದಿ

*ಕೇಂದ್ರ ಸರಕಾರಕ್ಕೆ ಅಧಿಕಾರ: ಇನ್ನು ಮುಂದಕ್ಕೆ ವಕ್ಫ್೯ ಬೋರ್ಡಿನ ಆಸ್ತಿಯನ್ನು ಪರಿಶೀಲಿಸಲು ಲೆಕ್ಕ ಪರಿಶೋಧಕರನ್ನು ನೇಮಿಸಿ, ಸರಿಯಾದ ಮಾಹಿತಿ ಪಡೆದುಕೊಳ್ಳುವ ಹಕ್ಕು ಕೇಂದ್ರ ಸರಕಾರಕ್ಕೆ ಇರುತ್ತದೆ.

*ದಾಖಲೆಗಳು ಕಡ್ಡಾಯ: ವಕ್ಫ್ ಬೋಡ್೯ ಇನ್ನು ಮುಂದಕ್ಕೆ ಯಾವುದೇ ಆಸ್ತಿಯನ್ನು ತನ್ನದಾಗಿಸಿಕೊಳ್ಳಬೇಕೆಂದರೆ ತನ್ನದು ಎಂದು ನಿರೂಪಿಸುವ ನಿಖರ ಅಧಿಕೃತ ದಾಖಲೆಗಳನ್ನು ಸರಿಯಾಗಿ ಹೊಂದಿರಬೇಕಾಗುತ್ತದೆ. ಅನಾವಶ್ಯಕ ವಿವಾದ, ಅನಗತ್ಯ ಗೊಂದಲ, ಸಮಯ ವ್ಯರ್ಥ ಮಾಡುವಂತಹ ವ್ಯಾಜ್ಯಗಳನ್ನು ಹಾಕುವ ಸಂಭವಗಳು ಇನ್ನು ಕಡಿಮೆ ಆಗಲಿದೆ. ಆ ಮೂಲಕ ನ್ಯಾಯಾಲಯದ ಸಮಯವು ವ್ಯರ್ಥವಾಗುವುದೂ ತಪ್ಪಲಿದೆ.

ಅಗತ್ಯವಿರುವ ಹೆಚ್ಚಿನ ಅಧಿಕಾರ ವಿಕೇಂದ್ರಿಕರಣ, ಪಾರದರ್ಶಕತೆ ತರುವುದರ ಜೊತೆಗೆ ಅಧಿಕಾರ ದುರ್ಬಳಕೆಯನ್ನು ತಪ್ಪಿಸಲು ನೆರವಾಗುವ ಈ ತಿದ್ದುಪಡಿ ತರಲು ಇಷ್ಟು ತಡವಾಗಿದ್ದೇ ತಪ್ಪಾಯಿತು. ಕೇಂದ್ರಿಕೃತವಾಗಿ ಈರ್ಶೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ ವಕ್ಫ್೯ ಬೋರ್ಡಿಗೆ ಕೇಂದ್ರ ಸರಕಾರ ಕಾಯ್ದೆಯಲ್ಲಿ ತಿದ್ದುಪಡಿ ತಂದು ಒಳ್ಳೆಯ ನಡೆಯನ್ನು ಇಟ್ಟಿದೆ.

ಇನ್ನಾದರೂ ವಿರೋಧ ಪಕ್ಷವಾದ ಕಾಂಗ್ರೆಸ್ ವಿನಾಕಾರಣ ಎನ್.ಡಿ.ಎ ಸರಕಾರದ ಎಲ್ಲ ನಡೆಯನ್ನು ವಿರೋಧಿಸುವ ಬದಲು ರಚನಾತ್ಮಕವಾದ ಮೌಲ್ಯಯುತ ವಿರೋಧಪಕ್ಷವಾಗಿ ತನ್ನ ಹೆಜ್ಜೆಗಳನ್ನು ಇಡಬೇಕು‌. ಕೇವಲ ಅಲ್ಪ ಸಂಖ್ಯಾತ ಮುಸ್ಲಿಮರ ವೋಟ್ ಬ್ಯಾಂಕ್ ಸೃಷ್ಟಿ, ತುಷ್ಟೀಕರಣವನ್ನು ಮಾಡದೆ ಸ್ವಲ್ಪ ನ್ಯಾಯಯುತವಾಗಿ ಯೋಚನಾ ಲಹರಿಯನ್ನು ಬೆಳೆಸಿಕೊಳ್ಳಬೇಕು. ಪ್ರೌಢವಾಗಿ ವರ್ತಿಸಬೇಕು. ತನಗೇನು ಬೇಕು ಎಂದು ಚಿಂತಿಸುವ ಬದಲು ಬಿಜೆಪಿಯಂತೆ ದೇಶಕ್ಕೇನು ಬೇಕು ಎಂಬುದನ್ನು ಆಲೋಚಿಸಬೇಕು.