ಬಿಜೆಪಿ ಕಾರ್ಯಕರ್ತರು ಜಾತ್ಯಾತೀತವಾಗಿ ಸಂಘಟಿತರಾಗಬೇಕು:ಅಪಚ್ಚು ರಂಜನ್
ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರ ಮಾದಾಪುರ ನಿವಾಸದಲ್ಲಿ ಕುಶಾಲನಗರ ತಾಲ್ಲೂಕು ಬಿಜೆಪಿ ಕಾರ್ಯಕರ್ತರ ಸಮ್ಮೀಲನ ಕಾರ್ಯಕ್ರಮ ನಡೆಯಿತು.
ಸೋಮವಾರಪೇಟೆ ಮಂಡಲ ವ್ಯಾಪ್ತಿಯಲ್ಲಿನ ಕುಶಾಲನಗರದ ಎಲ್ಲಾ ಪಕ್ಷದ ಕಾರ್ಯಕರ್ತರು, ಹಿರಿಯ ಮುಖಂಡರು ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಪಚ್ಚು ರಂಜನ್ ಕಾಂಗ್ರೇಸ್ ಸರ್ಕಾರ ಒಂದು ವರ್ಗಕ್ಕೆ ಸೀಮಿತ ಯೋಜನೆ ಮಾಡಿದೆ, ಇದನ್ನು ಪ್ರಶ್ನಿಸಿ ಹೋರಾಟ ಮಾಡಿದ ಬಿಜೆಪಿ ಕಾರ್ಯಕರ್ತರ ಮೇಲೆ ಗೊಂಡಾ ಕಾಯ್ದೆಯ ಅನ್ವಯ ಪ್ರಕರಣ ದಾಖಲು ಮಾಡಲಾಗುತ್ತಿತ್ತು,ಇದೀಗ ಬಿಜೆಪಿ ಸರ್ಕಾರದ ಮೂಲಕ ರಾಜ್ಯದಲ್ಲಿ ಉತ್ತಮ ಆಡಳಿತವಿದೆ, ಭಯೋತ್ಪಾಧನೆ ನಿರ್ಮೂಲನೆ, ಜನಪರ ಏಳಿಗಾಗಗಿ ಮತ್ತೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲು ಜಾತ್ಯಾತೀತ ವಾಗಿ ಸಂಘಟಿತರಾಗುವಂತೆ ಕರೆ ನೀಡಿದರು.